ಐಪಿಎಲ್ 2022: ಇಂದೇ ಆಗಲಿದೆ 2 ಹೊಸ ಫ್ರಾಂಚೈಸಿಗಳ ಅಧಿಕೃತ ಘೋಷಣೆ

ಒಂದೆಡೆ ಟಿ20 ವಿಶ್ವಕಪ್‌ನ ಪಂದ್ಯಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಮುಂಬರುವ ಐಪಿಎಲ್‌ಗೆ ಸಂಬಂಧಿಸಿದ ಮಹತ್ವದ ಬೆಳವಣಿ ನಡೆಯುತ್ತಿದೆ. ಮುಂದಿನ ಐಪಿಎಲ್ ಆವೃತ್ತಿಗೆ ಸೇರ್ಪಡೆಯಾಗಲಿರುವ 2 ಹೊಸ ತಂಡಗಳು ಯಾರ ಪಾಲಾಗಲಿದೆ ಎಂದು ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಯುಎಇನಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದ್ದು ಯಾವ ನಗರದ ತಂಡ ಯಾರ ಪಾಲಾಗಲಿದೆ ಎಂಬುದು ಇಂದು(ಸೋಮವಾರ) ಅಧಿಕೃತವಾಗಿ ಘೋಷಣೆಯಾಗಲಿದೆ.

ಇನ್ನು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲೀಕರಾದ ಗ್ಲೇಜರ್ ಕುಟುಂಬದ ಸಹಿತ ಇತರ ಸಂಸ್ಥೆಗಳ ಕೂಡ ದುಬೈಗೆ ಬಂದಿಳಿದಿದ್ದಾರೆ. ಈ ಮೂಲಕ ಐಪಿಎಲ್ ತಮಡಗಳ ಮಾಲೀಕರಾದರು ಪೈಪೋಟಿಯನ್ನು ನಡೆಸುತ್ತಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿರುವುದನ್ನು ಮೂಲಗಳು ಖಚಿತಪಡಿಸಿದೆ.

ಭಾರತ vs ಪಾಕ್: ಭಾರತ ಈ ಒಂದು ತಪ್ಪನ್ನೇನಾದರೂ ಮಾಡಿದರೆ ಪಾಕಿಸ್ತಾನಕ್ಕೆ ಗೆಲುವು: ಕಪಿಲ್ ದೇವ್ಭಾರತ vs ಪಾಕ್: ಭಾರತ ಈ ಒಂದು ತಪ್ಪನ್ನೇನಾದರೂ ಮಾಡಿದರೆ ಪಾಕಿಸ್ತಾನಕ್ಕೆ ಗೆಲುವು: ಕಪಿಲ್ ದೇವ್

"ಹೌದು, ಅವರು ಇಲ್ಲಿದ್ದಾರೆ. ನಾವು ಇಂದು ಮಧ್ಯಾಹ್ನದ ವೇಳೆಗೆ ಯಾವ ಎರಡು ನಗರಗಳು ಹಾಗೂ ಯಾರು ಮಾಲೀಕರು ಎಂಬುದು ಖಚಿತವಾಗಿ ತಿಳಿದುಕೊಳ್ಳಲಿದ್ದೇವೆ" ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದಕ್ಕೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು ಐಪಿಎಲ್‌ನಲ್ಲಿ ತಂಡದ ಮಾಲೀಕರಾಗಲು ಉತ್ಸಾಹ ಹೊಂದಿದ್ದಾರೆ ಎಂದು ವರದಿಯಾಗಿತ್ತು.

"ಹೌದು, ಮ್ಯಾಂಚೆಸ್ಟರ್ ಯುನೈಟೆಡ್ ಐಪಿಎಲ್‌ನಲ್ಲಿ ತಂಡವೊಂದನ್ನು ಹೊಂದಲು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ಬಿಸಿಸಿಐ ಬಿಡ್ಡಿಂಗ್‌ಗೆ ಉಮೇದುವಾರಿಕೆ ಸಲ್ಲಿಸುವ ದಿನಾಂಕವನ್ನು ಮುಂದೂಡಿತ್ತು. ಐಪಿಎಲ್ಈಗ ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಅದೀಗ ವಿಶ್ವಮಟ್ಟದ ಸಂಸ್ಥೆಯಾಗಿದೆ" ಎಂದು ಮೂಲಗಳು ಹೇಳಿಕೆ ನೀಡಿತ್ತು.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಐಪಿಎಲ್‌ನಲ್ಲಿ ಎರಡು ತಂಡಗಳ ಸೇರ್ಪಡೆ ಮಾಡಲು ಬಿಸಿಸಿಐ ಈ ಬಿಡ್ಡಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಇದಕ್ಕಾಗಿ ಬಿಸಿಸಿಐ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಒಂದು ಫ್ರಾಂಚೈಸಿ 2000 ಕೋಟಿಂದ -3000 ಕೋಟಿಗೆ ಮಾರಾಟವಾಗಬಹುದು ಎಂದು ಲೆಕ್ಕಾಚಾರ ಹೊಂದಿದ್ದ ಬಿಸಿಸಿಐ ಈಗ 7000-10,000 ಕೋಟಿಗೆ ಹರಾಜಾಗಬಹುದು ಎಂದು ಅಂದಾಜು ಮಾಡುತ್ತಿದೆ. ಈ ಮೂಲಕ ಭಾರೀ ಮೊತ್ತದ ಲಾಭ ಗಳಿಸಲು ಬಿಸಿಸಿಐ ಸಜ್ಜಾಗಿದೆ.

ಇನ್ನು ಈ ಎರಡು ಐಪಿಎಲ್ ತಂಡಗಳಿಗಾಗಿ 6 ನಗರಗಳನ್ನು ಗುರುತಿಸಿಕೊಂಡಿದೆ. ಇದರಲ್ಲಿ ಅಹ್ಮದಾಬಾದ್ ಹಾಗೂ ಲಕ್ನೋ ನಗರಗಳು ಐಪಿಎಲ್‌ನ ಭಾಗವಾಗುವ ಸಾಧ್ಯತೆ ದಟ್ಟವಾಗಿದೆ.

ಡೊಳ್ಳು ಹೊಟ್ಟೆ ಇರೋ ಪೊಲೀಸರಿಗೆ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Monday, October 25, 2021, 12:59 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X