ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಗೆದ್ದರೆ ಸಾಲುವುದಿಲ್ಲ, ಬ್ಯಾಟ್ ಬೀಸಿ ಅಬ್ಬರಿಸಬೇಕು; ವಿಕೆಟ್ ಕೀಪರ್ ನಾಯಕನಿಗೆ ರೈನಾ ಸಲಹೆ

Captain Pant has been doing great but batter Pant needs to perform well says Suresh Raina

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಮಾನ್ಯ ಪ್ರದರ್ಶನ ನೀಡಿದ್ದು, ಪ್ಲೇ ಆಫ್ ರೇಸ್‌ನಲ್ಲಿ ಇರುವ ಉಳಿದ ತಂಡಗಳೊಂದಿಗೆ ಸ್ಪರ್ಧೆಗಿಳಿದಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದ 5 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಬಾರಿ ನಾಯಕನಾಗಿ ಮುನ್ನಡೆಸುತ್ತಿರುವ ರಿಷಭ್ ಪಂತ್ ಕೆಲವೊಂದು ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳುವುದರ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ನಿರ್ವಹಿಸಿದ್ದಾರೆ.

CSK vs RCB: ಪಂದ್ಯದ ವೇಳೆ ಕೊಹ್ಲಿಗೆ ಚೆಂಡಿನಿಂದ ಹೊಡೆದು ಕ್ಷಮೆಯಾಚಿಸಿದ ಸಿಎಸ್‌ಕೆ ಯುವ ಆಟಗಾರCSK vs RCB: ಪಂದ್ಯದ ವೇಳೆ ಕೊಹ್ಲಿಗೆ ಚೆಂಡಿನಿಂದ ಹೊಡೆದು ಕ್ಷಮೆಯಾಚಿಸಿದ ಸಿಎಸ್‌ಕೆ ಯುವ ಆಟಗಾರ

ಹೀಗೆ ನಾಯಕನಾಗಿ ರಿ‍ಷಭ್ ಪಂತ್ ಉತ್ತಮ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದರ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಿಷಬ್ ಪಂತ್‌ಗೆ ಇದೇ ವೇಳೆ ಸಲಹೆಯೊಂದನ್ನು ನೀಡಿದ್ದಾರೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ತಾವು ನೀಡಿರುವ ಸಾರ್ವಕಾಲಿಕ ಉತ್ತಮ ಪ್ರದರ್ಶನದಿಂದ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಯನ್ನು ಪಡೆದಿರುವ ಸುರೇಶ್ ರೈನಾ ಈ ಕೆಳಕಂಡಂತೆ ರಿಷಭ್ ಪಂತ್ ಕುರಿತು ಮಾತನಾಡಿದ್ದಾರೆ.

ಆಟಗಾರನಾಗಿ ಪಂತ್ ಅಬ್ಬರಿಸಬೇಕು

ಆಟಗಾರನಾಗಿ ಪಂತ್ ಅಬ್ಬರಿಸಬೇಕು

"ನನ್ನ ಪಾಲಿಗೆ ರಿಷಭ್ ಪಂತ್ ನಾಯಕನಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಕುಲದೀಪ್ ಯಾದವ್ ಅವರನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಮತ್ತು ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಿಸಿಕೊಡುತ್ತಿರುವ ರಿಷಭ್ ಪಂತ್ ಓರ್ವ ಬ್ಯಾಟ್ಸ್‌ಮನ್ ಆಗಿ ಅಬ್ಬರಿಸಬೇಕಿದೆ" ಎಂದು ಸುರೇಶ್ ರೈನಾ ಪಂತ್‌ಗೆ ಸಲಹೆ ನೀಡಿದ್ದಾರೆ.

ರಿಷಭ್ ಪಂತ್ ಅಂಕಿಅಂಶ

ರಿಷಭ್ ಪಂತ್ ಅಂಕಿಅಂಶ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವೆರಗೂ ಒಟ್ಟು 8 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು, 234 ರನ್ ಕಲೆಹಾಕಿದ್ದಾರೆ ಹಾಗೂ ರಿಷಭ್ ಪಂತ್ ಈ ಬಾರಿಯ ಟೂರ್ನಿಯಲ್ಲಿ ಗಳಿಸಿರುವ ಗರಿಷ್ಟ ರನ್ 44 ರನ್ ಮಾತ್ರ. ಹೀಗೆ ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಅರ್ಧಶತಕವನ್ನೂ ಸಹ ಬಾರಿಸುವಲ್ಲಿ ವಿಫಲರಾಗಿರುವ ರಿಷಭ್ ಪಂತ್ ಸುರೇಶ್ ರೈನಾ ಅಭಿಪ್ರಾಯಪಟ್ಟಂತೆ ಓರ್ವ ಬ್ಯಾಟ್ಸ್‌ಮನ್‌ ಆಗಿ ಅಬ್ಬರಿಸಬೇಕಾದ ಅನಿವಾರ್ಯತೆ ಇದೆ.

Gayle ದಾಖಲೆ ಮುರಿದ David Warner | Oneindia Kannada
ಕುಲ್‌ದೀಪ್ ಯಾದವ್ ಸರಿಯಾದ ಬಳಕೆ

ಕುಲ್‌ದೀಪ್ ಯಾದವ್ ಸರಿಯಾದ ಬಳಕೆ

ಇನ್ನು ಸುರೇಶ್ ರೈನಾ ಹೇಳಿದ ಪ್ರಕಾರ ರಿಷಭ್ ಪಂತ್ ತಮ್ಮ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕುಲದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಟೂರ್ನಿಯಲ್ಲಿ ಅಡಿರುವ 9 ಪಂದ್ಯಗಳ ಪೈಕಿ ಒಂದಲ್ಲ ಎರಡಲ್ಲ ಬರೋಬ್ಬರಿ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಕುಲದೀಪ್ ಯಾದವ್ ರೀತಿಯ ಅನುಭವಿ ಸ್ಪಿನ್ನರ್‌ನ್ನು ಸರಿಯಾದ ರೀತಿ ಬಳಸಿಕೊಳ್ಳುತ್ತಿರುವ ರಿ‍ಷಭ್ ಪಂತ್ ಜಾಣ್ಮೆಯ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕುಲದೀಪ್ ಯಾದವ್ 17 ವಿಕೆಟ್ ಪಡೆದು ಮಿಂಚಿದ್ದು, ಇನ್ನಿಂಗ್ಸ್‌ವೊಂದರಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದದ್ದು ಅವರ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

Story first published: Friday, May 6, 2022, 11:35 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X