ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗಿಂತ ಮೊದಲು ನೀನು ನಿವೃತ್ತಿಯಾಗುವುದನ್ನು ನಂಬಲಾಗುತ್ತಿಲ್ಲ: ಪೊಲಾರ್ಡ್ ನಿವೃತ್ತಿಗೆ ಆಪ್ತ ಗೆಳೆಯನ ಪ್ರತಿಕ್ರಿಯೆ

IPL 2022: Chris Gayle reaction on west indies skipper Kieron Pollard retirement

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಿಗ್ಗಜ ಆಟಗಾರ ಕೀರನ್ ಪೊಲಾರ್ಡ್ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಸೀಮಿತ ಓವರ್‌ಗಳ ನಾಯಕನಾಗಿ ಮುನ್ನಡೆಸುತ್ತಿದ್ದ ಪೊಲಾರ್ಡ್ ಆಲ್‌ರೌಂಡರ್ ಆಗಿ ತಂಡಕ್ಕೆ ದೊಡ್ಡ ಬಲವಾಗಿದ್ದರು. 34ರ ಹರೆಯದಲ್ಲಿಯೇ ನಿವೃತ್ತಿ ಘೋಷಣೆ ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಈ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ, ಕೀರನ್ ಪೊಲಾರ್ಡ್ ಅವರ ಆಪ್ತ ಸ್ನೇಹಿತ ಕ್ರಿಸ್ ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ. ತನಗಿಂತಲೂ ಮೊದಲೇ ಪೊಲಾರ್ಡ್ ನಿವೃತ್ತಿಯನ್ನು ತೆಗೆದುಕೊಂಡಿರುವುದನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ ಕ್ರಿಸ್ ಗೇಲ್.

ಪಂಜಾಬ್ ವಿರುದ್ಧ ಡೆಲ್ಲಿ ಹತ್ತೇ ಓವರ್‌ಗೆ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?ಪಂಜಾಬ್ ವಿರುದ್ಧ ಡೆಲ್ಲಿ ಹತ್ತೇ ಓವರ್‌ಗೆ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?

43ರ ಹರೆಯದ ಕ್ರಿಸ್ ಗೇಲ್ ಇನ್ನು ಕೂಡ ವೆಸ್ಟ್ ಇಂಡೀಸ್ ಪರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಕುಡ ಕ್ಇಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಇನ್ನು ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್‌ಗೆ ಕೂಡ ಅಧಿಕೃತವಾಗಿ ನಿವೃತ್ತಿಯನ್ನು ಘೋಷಣೆ ಮಾಡಿಲ್ಲ ಎಂಬುದು ಕುತೂಹಲಕಾರಿ ಅಂಶ. ಆದರೆ 2014ರ ಬಳಿಕ ಗೇಲ್ ಟೆಸ್ಟ್ ಮಾದರಿಯಲ್ಲಿ ಆಡಲು ಇಳಿದಿಲ್ಲ.

ಬುಧವಾರ ರಾತ್ರಿ ಪೊಲಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಕ್ರಿಸ್ ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲಾರ್ಡ್ ನಿವೃತ್ತಿಯನ್ನು ಘೋಷಣೆ ಮಾಡಿದ ಕಾರಣದಿಂಣದಾಗಿ ವಿಂಡಿಸ್ ಕ್ರಿಕೆಟ್ ತಂಡ ಸೀಮಿತ ಓವರ್‌ಗಳಿಗೆ ನೂತನ ನಾಯಕನನ್ನು ನೇಮಿಸಬೇಕಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ ವಿಂಡೀಸ್ ಮಂಡಳಿಗೂ ಇದು ಸವಾಲಾಗಲಿದೆ.

ಟ್ವಿಟ್ಟರ್‌ನಲ್ಲಿ ಕ್ರಿಸ್ ಗೇಲ್ "ನೀನು ನನಗಿಂತ ಮು್ನನವೇ ನಿವೃತ್ತಿಯಾಗುತ್ತೀಯಾ ಎಂದು ನನಗೆ ನಂಬಲಾಗುತ್ತಿಲ್ಲ" ಎಂದು ಟ್ವಿಟ್ಟರ್‌ನಲ್ಲಿ ಗೇಲ್ ಬರೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. 43ರ ಹರೆಯದ ಗೇಲ್ 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೀರನ್ ಪೊಲಾರ್ಡ್ 2007ರಲ್ಲಿ ವಿಂಡೀಸ್ ತಂಡದ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಾಗ ಗ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಖಾಯಂ ಸದಸ್ಯರಾಗಿದ್ದರು.

MI vs CSK: ಈ 2 ಮೈಲುಗಲ್ಲು ತಲುಪಲು ರಾಬಿನ್ ಉತ್ತಪ್ಪಗೆ ಇನ್ನೊಂದೇ ಹೆಜ್ಜೆMI vs CSK: ಈ 2 ಮೈಲುಗಲ್ಲು ತಲುಪಲು ರಾಬಿನ್ ಉತ್ತಪ್ಪಗೆ ಇನ್ನೊಂದೇ ಹೆಜ್ಜೆ

ಟಿ20 ಕ್ರಿಕೆಟ್‌ ಮಾದರಿಯಲ್ಲಿ ವಿಶ್ವದ ಸ್ಪೋಟಕ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ ಕೀರನ್ ಪೊಲಾರ್ಡ್. ಆಡಿರುವ 123 ಏಕದಿನ ಪಂದ್ಯಗಳಲ್ಲಿ 2706 ರನ್‌ಗಳಿಸಿರುವ ಪೊಲಾರ್ಡ್ 55 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 101 ಪಂದ್ಯಗಳಲ್ಲಿ 1569 ರನ್‌ಗಳನ್ನು ಗಳಿಸಿದ್ದು 44 ವಿಕೆಟ್ ಸಂಪಾದಿಸಿದ್ದಾರೆ.

Dhoni ತಮ್ಮ ಹಿಂದಿನ ಅವತಾರದಲ್ಲಿ ಕಾಣಿಸಿಕೊಂಡರು | Oneindia Kannada

ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ನಿಶ್ಚಿತ. ವಿಶ್ವದಾದ್ಯಂತ ಐಪಿಎಲ್ ಸೇರಿದಂತೆ ಹಲವಾರು ಟಿ20 ಲೀಗ್‌ಗಳಲ್ಲಿ ಪೊಲಾರ್ಡ್ ಪ್ರಮುಖ ಆಕರ್ಷಣೆಯಾಗಿದ್ದು ಈ ಮಾದರಿಯಲ್ಲಿ ಅಭಿಮಾನಿಗಳು ಮತ್ತಷ್ಟು ವರ್ಷಗಳ ಕಾಲ ಪೊಲಾರ್ಡ್ ಆಟವನ್ನು ವೀಕ್ಷಿಸಬಹುದು. ಆದರೆ ವಿಂಡೀಸ್ ಪರವಾಗಿ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನು ಮುಂದುವರಿಯುವುದಿಲ್ಲ.

Story first published: Thursday, April 21, 2022, 13:57 [IST]
Other articles published on Apr 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X