
ಸಮಾರೋಪ ಸಮಾರಂಭಕ್ಕೆ ಸಿದ್ಧತೆ
ಇನ್ನು ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಐಪಿಎಲ್ 2022ರ ಆವೃತ್ತಿಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ನ ಖ್ಯಾತ ನಟ ರಣ್ವೀರ್ ಸಿಂಗ್ ಹಾಗೂ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮನರಂಜಿಸಲಿದ್ದಾರೆ. ಕೊರೊನಾವೈರಸ್ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಸಮಾರೋಪ ಸಮಾರಂಭ ನಡೆಯುವ ಬಗ್ಗೆಯೂ ಅನುಮಾನಗಳಿದ್ದವು. ಆದರೆ ಈಗ ಈ ಬಿಸಿಸಿಐ ಈ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಂಡಿದೆ.

ಅಭಿಮಾನಿಗಳಿಗೆ ಭರಪೂರ ಮನರಂಜನೆ
ಇನ್ನು ಬಾಲಿವುಡ್ನ ಸ್ಟಾರ್ಗಳ ಕಾರ್ಯಕ್ರಮದ ಜೊತೆಗೆ ಝಾರ್ಖಂಡ್ನ ಛೌ ನೃತ್ಯ ಕೂಡ ಈ ಸಮಾರಂಭದಲ್ಲಿ ಪ್ರೇಕ್ಷಕರ ಮನಸೆಳೆಯಲಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮಕ್ಕಾಗಿ ಝಾರ್ಖಂಡ್ನ 10 ಛೌ ನೃತ್ಯಪಟುಗಳನ್ನು ಅಂತಿಮಗೊಳಿಸಿದ್ದು ಈ ಕಾರ್ಯಕ್ರಮದ ಅನುಭವ ಪಡೆಯುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ದೊರೆಯಲಿದೆ. 2019ರ ಆವೃತ್ತಿಯ ಬಳಿಕ ಐಪಿಎಲ್ ಸಮಾರೋಪ ಸಮಾರಂಭವನ್ನು ಬಿಸಿಸಿಐ ಆಯೋಜಿಸಿರಲಿಲ್ಲ. ಕೋವಿಡ್ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿತ್ತು ಬಿಸಿಸಿಐ. ಆದರೆ ಈ ಬಾರಿ ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಕಾರಣ ಬಿಸಿಸಿಐ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

45 ನಿಮಿಷಗಳ ಕಾರ್ಯಕ್ರಮ
ಇನ್ನು ಈ ಸಮಾರೋಪ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ, ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಬಿಸಿಇಸೈ ಕಾರ್ಯದರ್ಶಿ ಜಯ್ ಶಾ ಹಾಜರಿರಲಿದ್ದಾರೆ. ಇನ್ನು ಭಾರತ ಸ್ವಾತಂತ್ರ್ಯವನ್ನು ಪಡೆದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ಬೆಳೆದು ಬಂದ ಹಾದಿಯನ್ನು ಪ್ರಸ್ತುತಪಡಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ. ಇನ್ನು ಒಟ್ಟಾರೆ ಈ ಸಮಾರೋಪ ಸಮಾರಂಭ ಕಾರ್ಯಕ್ರಮ 45 ನಿಮಿಷಗಳಲ್ಲಿ ಮುಕ್ತಾಯವಾಗಲಿದೆ.

ಫೈನಲ್ ಪಂದ್ಯದಲ್ಲಿ ಭಾಗವಹಿಸುವ ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್