ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಯುವ ವೇಗಿ ರಾಜವರ್ಧನ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ CSK

Rajvardhan Hangargekar

ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ನಡೆಸಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಬೌಲರ್ ರಾಜವರ್ಧನ್ ಹಂಗರ್ಗೇಕರ್ ಒಂದೂ ಅವಕಾಶ ನೀಡದ ಕುರಿತಾಗಿ ಸಿಎಸ್‌ಕೆ ಸ್ಪಷ್ಟನೆ ನೀಡಿದೆ. ಚೆನ್ನೈ ತಂಡದದಲ್ಲಿ ರಾಜವರ್ಧನ್‌ಗೆ ಏಕೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿಲ್ಲ ಎಂಬುದರ ಕುರಿತು ಸಿಎಸ್‌ಕೆ ಅಪ್‌ಡೇಟ್ ಮಾಡಿದೆ.

ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು ಲೀಗ್ ಹಂತದಲ್ಲೇ ಹೊರಬಿದ್ದ ಸಿಎಸ್‌ಕೆ ತಂಡದಲ್ಲಿ ಪ್ರಮುಖ ಬೌಲರ್ ದೀಪಕ್ ಚಹಾರ್ ಅನುಪಸ್ಥಿತಿ ಕಾಡಿತು, ಆದ್ರೆ ಧೋನಿ ಅವರ ಬದಲಿಗೆ ಅನೇಕ ಆಟಗಾರರಿಗೆ ಅವಕಾಶಗಳನ್ನು ನೀಡಿದ್ದಾರೆ. ಅನೇಕ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಆದರೆ ಅಭಿಮಾನಿಗಳು ಕಾಯುತ್ತಿದ್ದ ಅಂಡರ್ 19 ಸ್ಟಾರ್ ರಾಜವರ್ಧನ್ ಹಂಗರ್ಗೇಕರ್‌ಗೆ ಕೊನೆಯವರೆಗೂ ಅವಕಾಶ ಸಿಗಲಿಲ್ಲ.

IPL 2022: ಅರ್ಜುನ್‌ನನ್ನು ಆಡಿಸದಿದ್ರೆ, ಬೇರೆ ಫ್ರಾಂಚೈಸಿಗಾದ್ರೂ ಮಾರಿ ಬಿಡಿ, ಮ್ಯಾನೇಜ್‌ಮೆಂಟ್ ವಿರುದ್ಧ ಅಭಿಮಾನಿಗಳ ಆಕ್ರೋಶ!IPL 2022: ಅರ್ಜುನ್‌ನನ್ನು ಆಡಿಸದಿದ್ರೆ, ಬೇರೆ ಫ್ರಾಂಚೈಸಿಗಾದ್ರೂ ಮಾರಿ ಬಿಡಿ, ಮ್ಯಾನೇಜ್‌ಮೆಂಟ್ ವಿರುದ್ಧ ಅಭಿಮಾನಿಗಳ ಆಕ್ರೋಶ!

ಅಂಡರ್ 19 ವಿಶ್ವಕಪ್ ನಲ್ಲಿ ಆಲ್ ರೌಂಡರ್ ಆಗಿ ಗಮನ ಸೆಳೆದಿದ್ದ ಈ ಆಟಗಾರನಿಗೆ ಏಕೆ ಅವಕಾಶ ನೀಡಲಿಲ್ಲ ಎಂಬ ಬಗ್ಗೆ ಮಾತನಾಡಿದ ಮುಖ್ಯ ಕೋಚ್, ತರಬೇತಿ ಸಮಯದಲ್ಲಿ ನಮ್ಮಿಂದ ತೃಪ್ತಿ ಹೊಂದಿದ ಆಟಗಾರರಿಗೆ ಮಾತ್ರ ಅವಕಾಶ ನೀಡುತ್ತೇವೆ. ಹೀಗಾಗಿ ರಾಜವರ್ಧನ್ ಇನ್ನೂ ಸಂಪೂರ್ಣ ತಯಾರಿಲ್ಲ ಎಂದು ಹೇಳಿದ್ದಾರೆ. ಆದ್ರೆ ಅಂಡರ್-19 ವಿಶ್ವಕಪ್‌ನಲ್ಲೇ ಆಡಿದ್ದ ಪ್ಲೇಯರ್ ಹೇಗೆ ಸಿದ್ಧವಾಗಿಲ್ಲ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.

ಈ ಸಂದರ್ಭ ಧೋನಿ ಕುಡ ಮಾತನಾಡಿದ್ದಾರೆ. '' ಹಂಗರ್ಗೇಕರ್ ಉತ್ತಮ ವೇಗ ಮತ್ತು ಬೌನ್ಸ್‌ನಲ್ಲಿ ಪರಿಣತಿ ಹೊಂದಿದ್ದಾನೆ. ಆದರೆ ಅವನು ಇನ್ನೂ ಪೂರ್ಣ ಪ್ರಗತಿ ಸಾಧಿಸಬೇಕಾಗಿದೆ. ನಮ್ಮ ತಂಡದ ಯುವ ಆಟಗಾರರಿಗೆ ಹೆಚ್ಚಿನ ಪ್ರಗತಿ ಮತ್ತು ಅವಕಾಶಗಳನ್ನು ನೀಡಿದರೆ ಮಾತ್ರ ಒಳ್ಳೆಯದು ಎಂದು ನಾವು ಭಾವಿಸುತ್ತೇವೆ'' ಎಂದು ಧೋನಿ ಹೇಳಿದ್ದಾರೆ.

ರಾಜವರ್ಧನ್ ಪ್ರಸ್ತುತ ತಮ್ಮ ತಂಡದ ಆಟಗಾರರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಸ್ಥಳೀಯ ಸ್ಪರ್ಧೆಗಳಲ್ಲಿ ಸರಿಯಾದ ತರಬೇತಿ ಮತ್ತು ಅನುಭವದೊಂದಿಗೆ ಐಪಿಎಲ್ ಗುಣಮಟ್ಟದ ಆಟಗಾರರಿಗೆ ಬೌಲಿಂಗ್ ಮಾಡುವುದು ಎಂದಿಗೂ ಸರಿಯಲ್ಲ. ಆದ್ದರಿಂದ ಅವರು ಉತ್ತಮ ತರಬೇತಿ ಮತ್ತು ಅನುಭವವನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ. ಹೀಗಾಗಿಯೇ ಈ ಸರಣಿಯಲ್ಲಿ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಎಂ.ಎಸ್ ಧೋನಿ 2023ರ ಐಪಿಎಲ್ ಸೀಸನ್‌ ಆಡುತ್ತೇನೆ ಎಂದು ಸ್ಪಷ್ಟಪಡಿಸಿದ್ದು, ಚೆನ್ನೈನ ಚೆಪಾಕ್ ಅಂಗಳದಲ್ಲಿ ಕೊನೆಯ ಪಂದ್ಯವನ್ನಾಡುವ ಆಸೆ ವ್ಯಕ್ತಪಡಿಸಿದ್ದಾರೆ.

Story first published: Saturday, May 21, 2022, 22:17 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X