ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಸಿಎಸ್‌ಕೆ vs ಕೆಕೆಆರ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಬೆಂಬಲ ಯಾರಿಗೆ ಗೊತ್ತಾ!?

IPL 2022: CSK vs KKR, AB de Villiers said CSK to beat KKR in IPL 2022 opening match

15ನೇ ಆವೃತ್ತಿಯ ಐಪಿಎಲ್ ಟೂರ್ನಿ ಇಂದು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಎರಡೂ ತಂಡಗಳು ಹೊಸ ನಾಯಕತ್ವದ ಅಡಿಯಲ್ಲಿ ಕಣಕ್ಕಿಳಿಯುತ್ತಿರುವುದು ಮತ್ತೊಂದು ಪ್ರಮುಖ ಅಂಶ.

ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಬಗ್ಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಕೆಆರ್ ಹಾಗೂ ಸಿಎಸ್‌ಕೆ ನಡುವಿನ ಕಾದಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಲಿದೆ ಎಂಬುದು ಎಬಿ ಡಿಲಿಯರ್ಸ್ ಅವರ ಅಭಿಪ್ರಾಯವಾಗಿದೆ.

ಐಪಿಎಲ್: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಎಂಎಸ್ ಧೋನಿ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಐಪಿಎಲ್: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಎಂಎಸ್ ಧೋನಿ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ

ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ತಂಡವಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರನ್ನರ್‌ಅಪ್ ತಂಡವಾಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಈ ಎರಡು ತಂಡಗಳಲ್ಲಿ ಸಿಎಸ್‌ಕೆ 27 ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಎನಿಸಿಕೊಂಡಿತ್ತು. ಈ ಮೂಲಕ ಐಪಿಎಲ್‌ನಲ್ಲಿ ನಾಲ್ಕನೇ ಬಾರಿ ಟ್ರೋಫಿಗೆ ಮುತ್ತಿಕ್ಕಲು ಯಶಸ್ವಿಯಾಗಿತ್ತು. ಕಳೆದ ಬಾರಿಯ ಟೂರ್ನಿಗೆ ಹೋಲಿಸಿದರೆ ಸಿಎಸ್‌ಕೆ ಬಹುತೇಕ ಅದೇ ಆಟಗಾರರ ಬಳಗವನ್ನು ಹೊಂದಿದೆ.

"ಈ ಪಂದ್ಯದಲ್ಲಿ ಸಿಎಸ್‌ಕೆ ಗೆಲ್ಲುವ ಉತ್ತಮ ಅವಕಾಶಗಳಿದೆ. ಕಳೆದ ಬಾರಿ ಟೂರ್ನಿಯನ್ನು ಗೆದ್ದು ಆತ್ಮವಿಶ್ವಾಸದೊಂದಿಗೆ ಈ ಬಾರಿ ಕಣಕ್ಕಿಳಿಯುತ್ತಿದೆ. ಎಂಎಸ್ ಧೋನಿ ನಾಯಕನಲ್ಲದಿದ್ದರೂ ಅದೇ ಬಳಗದೊಂದಿಗೆ ಸಿಎಸ್‌ಕೆ ಕಣಕ್ಕಿಳಿಯುತ್ತಿದೆ. ನಾಯಕತ್ವದ ಬದಲಾವಣೆ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಧೋನಿ ಈಗಲೂ ತಂಡದೊಂದಿಗೆ ಕಣಕ್ಕಿಳಿಯಲಿದ್ದು ತನ್ನ ಯೋಜನೆಗಳನ್ನು ಹಂಚಿಕೊಳ್ಳಲಿದ್ದಾರೆ. ಯೋಜನೆಗಳು ಹಾಗೂ ಫೀಲ್ಡ್ ಬದಲಾವಣೆ ಬಗ್ಗೆ ಅವರು ಕೂಡ ಸಲಹೆಗಳನ್ನು ನೀಡುತ್ತಿರುತ್ತಾರೆ"ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಂಡದ ಸ್ಥಿರ ಪ್ರದರ್ಶನ ಸಹಕಾರಿಯಾಗಲಿದೆ: ಮುಂದುವರಿದು ಮಾತನಾಡಿದ ಎಬಿ ಡಿವಿಲಿಯರ್ಸ್ ಸಿಎಸ್‌ಕೆ ತಂಡದ ಸ್ಥಿರ ಪ್ರದರ್ಶನ ಮತ್ತಷ್ಟು ಸಹಕಾರೊಯಾಗಿರಲಿದೆ ಎಂದು ಹೇಳಿದ್ದಾರೆ. "ಅವರು ಸಾಕಷ್ಟು ಅನುಭವ ಇರುವ ಆಟಗಾರರನ್ನು ಹೊಂದಿದ್ದಾರೆ. ಗಡಿಯಾಚೆ ನುಗ್ಗಿ ಪಂದ್ಯಗಳನ್ನು ಹೇಗೆ ಗೆಲ್ಲಬೇಕೆಂದು ಅವರಿಗೆ ಗೊತ್ತಿದೆ. ಮೊದಲ ಪಂದ್ಯಕ್ಕೆ ಯಾವ ಸಿದ್ಧತೆಯೊಂದಿಗೆ ಕಣಕ್ಕಿಳಿಯಬೇಕು ಹಾಘೂ ಕೊನೇಯ ಪಂದ್ಯಕ್ಕೆ ಹೇಗೆ ಸಿದ್ಧತೆ ನಡೆಸಬೇಕು ಎಂಬುದು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಕೊನೆಗೂ ಐಪಿಎಲ್‌ನ ಬೃಹತ್ ದಾಖಲೆ ಮುರಿಯುವಲ್ಲಿ ವಿಫಲರಾದ ಎಂಎಸ್ ಧೋನಿ; ರೋಹಿತ್ ನಂ.1!ಕೊನೆಗೂ ಐಪಿಎಲ್‌ನ ಬೃಹತ್ ದಾಖಲೆ ಮುರಿಯುವಲ್ಲಿ ವಿಫಲರಾದ ಎಂಎಸ್ ಧೋನಿ; ರೋಹಿತ್ ನಂ.1!

ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್‌ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ನಾಯಕತ್ವ ಬದಲಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಎಂಎಸ್ ಧೋನಿ ಎರಡು ದಿನಗಳ ಹಿಂದೆಯಷ್ಟೇ ನಾಯಕತ್ವ ಬಿಟ್ಟುಕೊಟ್ಟಿದ್ದರು. ಹೀಗಾಗಿ ರವೀಂದ್ರ ಜಡೇಜಾ ಸಿಎಸ್‌ಕೆ ತಂಡವ್ನನು ಈ ಬಾರಿಯ ಟೂರ್ನಿಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಜಡ್ಡುಗೆ ಇದೇ ಮೊದಲ ಬಾರಿಗೆ ಐಪಿಎಲ್ ತಂಡವನ್ನು ಮುನ್ನಡೆಸುವ ಹೊಣಡಗಾರಿಕೆ ದೊರೆತಿದ್ದು ಯಾವ ರೀತಿ ಈ ಜವಾಬ್ಧಾರಿಯನ್ನು ನಿರ್ವಹಿಸಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಇನ್ನು ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಈ ಬಾರಿ ನೂತನ ನಾಯಕನೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ನಾಯಕನಾಗಿದ್ದ ಇಯಾನ್ ಮಾರ್ಗನ್ ಅವನ್ನು ಈ ಬಾರಿಯ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆಗೊಳಿಸಿತ್ತು. ನಂತರ ಹರಾಜು ಪ್ರಕ್ರಿಯೆಯಲ್ಲಿ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡಿಕೊಂಡಿತು. ನಂತರ ಅವರನ್ನೇ ನಾಯಕನನ್ನಾಗಿ ನೇಮಕಗೊಳಿಸಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಐಯ್ಯರ್ 2020ರ ಆವೃತ್ತಿಯಲ್ಲಿ ತಂಡವನ್ನು ಫೈನಲ್ ಹಂತಕ್ಕೆ ಮುನ್ನಡೆಸಿದ್ದರು.

ಸಿಎಸ್‌ಕೆ ಸಂಪೂರ್ಣ ಸ್ಕ್ವಾಡ್: ರವೀಂದ್ರ ಜಡೇಜಾ(ನಾಯಕ), ದೀಪಕ್ ಚಹಾರ್, ಎಂಎಸ್ ಧೋನಿ, ಮೊಯಿನ್ ಅಲಿ, ಅಂಬಾಟಿ ರಾಯುಡು, ಋತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಶಿವಂ ದುಬೆ, ರಾಬಿನ್ ಉತ್ತಪ್ಪ, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೈನ್ ಎಂಡಮ್ ಪ್ರಿಟೋರಿಯಸ್, ಎಂಡಮ್ ಪ್ರಿಟೋರಿಯಸ್ , ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ, ಮಹೇಶ್ ತೀಕ್ಷಣ

Shreyas Iyer ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಕೆಕೆಆರ್ ಸಂಪೂರ್ಣ ಸ್ಕ್ವಾಡ್: ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್ ನಿತೀಶ್ ರಾಣಾ, ವೆಂಕಟೇಶ ಅಯ್ಯರ್, ವರುಣ್ ಚಕ್ರವರ್ತಿ, ಶಿವಂ ಮಾವಿ, ಪ್ಯಾಟ್ ಕಮ್ಮಿನ್ಸ್, ಸುನಿಲ್ ನರೈನ್, ಅಜಿಂಕ್ಯ ರಹಾನೆ, ಶೆಲ್ಡನ್ ಜಾಕ್ಸನ್, ಅನುಕೂಲ್ ರಾಯ್, ರಾಸಿಖ್ ದಾರ್, ಬಾಬಾ ಇಂದ್ರಜಿತ್, ಚಾಮಿಕಾ ಕರುಣಾರತ್ನೆ, ಅಭಿಜಿತ್ ತೋಮರ್, ಪ್ರಥಮ್ ಸಿಂಗ್, ಅಶೋಕ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್

Story first published: Saturday, March 26, 2022, 17:39 [IST]
Other articles published on Mar 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X