ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK vs MI: ಗೆದ್ದು ಬೀಗಿದ ರೋಹಿತ್ ಪಡೆ; ಮುಂಬೈ ಜೊತೆಗೆ ಚೆನ್ನೈ IPL ಟೂರ್ನಿಯಿಂದ ಔಟ್!

IPL 2022: CSK vs MI Highlights: Mumbai Indians Beat Chennai Super Kings by 5 Wickets

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐಪಿಎಲ್ 15ನೇ ಆವೃತ್ತಿಯಲ್ಲಿನ 59ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸಿಎಸ್‌ಕೆ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿನ ಪತಾಕೆ ಹಾರಿಸಿದರು.

ಐಪಿಎಲ್ 2022ರ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 16 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 97 ರನ್ ಕಲೆಹಾಕಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಇನ್ನೂ 5 ವಿಕೆಟ್‌ಗಳು ಬಾಕಿ ಇರುವಂತೆಯೇ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು.

IPL 2022: CSK vs MI Highlights: Mumbai Indians Beat Chennai Super Kings by 5 Wickets

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ನಿಗದಿತ 16 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 97 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾದ ರೋಹಿತ್ ಶರ್ಮ ಬಳಗ 14.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದರು.

ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ತಮ್ಮ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೂ ಸಹ ಈ ಬಾರಿಯ ಟೂರ್ನಿಯಿಂದ ಕರೆದುಕೊಂಡು ಹೋಯಿತು. ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎಂಟನೇ ಬಾರಿ ಪರಾಭವ ಕಂಡಿತು.

CSK vs MI: ಪಂದ್ಯದ ಟಾಸ್ ವರದಿ ಮತ್ತು ಆಡುವ 11ರ ಬಳಗCSK vs MI: ಪಂದ್ಯದ ಟಾಸ್ ವರದಿ ಮತ್ತು ಆಡುವ 11ರ ಬಳಗ

ಮೊದಲು ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೃಹತ್ ಮೊತ್ತ ಗಳಿಸದಂತೆ ಕಟ್ಟಿ ಹಾಕಿತು. ನಂತರ ಆರಂಭದಲ್ಲಿ ಬಹುಬೇಗ ನಾಲ್ಕು ವಿಕೆಟ್ ಕಳೆದುಕೊಂಡರೂ, ಚೇತರಿಸಿಕೊಂಡು ಭರ್ಜರಿ ಗೆಲುವು ದಾಖಲಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 16 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 97 ರನ್ ಸಾಧಾರಣ ಕಲೆಹಾಕಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಅವರಿಂದ ಉತ್ತಮ ಆರಂಭ ಮೂಡಿಬರಲಿಲ್ಲ. ಇನ್ನಿಂಗ್ಸ್‌ನ 2ನೇ ಎಸೆತದಲ್ಲಿಯೇ ಡೆವೊನ್ ಕಾನ್ವೇ ಸೊನ್ನೆ ಸುತ್ತಿದರು. ಡೆನಿಯಲ್ ಸ್ಯಾಮ್ಸ್‌ಗೆ ವಿಕೆಟ್ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ಮೋಹಿನ್ ಅಲಿ ಕೂಡ ಯಾವುದೇ ರನ್ ಗಳಿಸದೆ ಔಟಾದರು. ನಂತರ ಬಂದ ರಾಬಿನ್ ಉತ್ತಪ್ಪ ಕೂಡ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಪ್ರತಿರೋಧ ತೋರದೆ ವಿಕೆಟ್ ಒಪ್ಪಿಸಿದರು. 5 ರನ್‌ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲ್ಲಿಂದ ಕುಂಟುತ್ತಾ ಸಾಗಿದ ಸಿಎಸ್‌ಕೆ ಬ್ಯಾಟಿಂಗ್ ಲೈನ್ಅಪ್ ಆಗೊಂದು ಹೀಗೊಂದು ಬೌಂಡರಿ ಗಳಿಸಿದರು.

CSK vs MI: ಮುಂಬೈ ಬಿಗಿ ಬೌಲಿಂಗ್ ದಾಳಿ; ಸಾಧಾರಣ ಮೊತ್ತಕ್ಕೆ ಚೆನ್ನೈ ಸರ್ವಪತನCSK vs MI: ಮುಂಬೈ ಬಿಗಿ ಬೌಲಿಂಗ್ ದಾಳಿ; ಸಾಧಾರಣ ಮೊತ್ತಕ್ಕೆ ಚೆನ್ನೈ ಸರ್ವಪತನ

ಇನ್ನುಳಿದಂತೆ ಅಂಬಟಿ ರಾಯುಡು 10 ರನ್ ಗಳಿಸಿ ಔಟಾದರೆ, ಶಿವಂ ದುಬೆ 10 ಕೂಡ ರನ್ ಗಳಿಸಿ ವಿಕೆಟ್ ಚೆಲ್ಲಿದರು. ಡಿಜೆ ಬ್ರಾವೋ 12 ರನ್ ಗಳಿಸಿ ಔಟಾದರೆ, ಸಮರ್ಜಿತ್ ಸಿಂಗ್ 2 ರನ್ ಗಳಿಸಿದರು. ಮಹೇಶ್ ತೀಕ್ಷಣ ಸೊನ್ನೆ ಸುತ್ತಿದರು.

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ನಾಯಕ ಎಂಎಸ್ ಧೋನಿ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಮುಂಬೈ ಬೌಲರ್‌ಗಳಿಗೆ ಪ್ರತಿರೋಧ ನೀಡುವಲ್ಲಿ ವಿಫಲರಾದರು. ಎಂಎಸ್ ಧೋನಿ 33 ಎಸೆತಗಳಲ್ಲಿ 36 ರನ್ ಗಳಿಸಿ ಅಜೇಯರಾಗುಳಿದರು.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಡೆನಿಯಲ್ ಸ್ಯಾಮ್ಸ್ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 39 ರನ್ ನೀಡಿ 2 ವಿಕೆಟ್ ಪಡೆದರು. ಇನ್ನುಳಿದಂತೆ ರಿಲೆ ಮೆರಿಡಿತ್, ಕುಮಾರ್ ಕಾರ್ತಿಕೇಯ ತಲಾ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ರಮಣ್‌ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

IPL 2022: CSK vs MI Highlights: Mumbai Indians Beat Chennai Super Kings by 5 Wickets

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್:
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಮುಂಬೈ, ಆರಂಭದಲ್ಲಿಯೇ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಶಾನ್ ಕಿಶನ್ 5 ಎಸೆತಗಳಲ್ಲಿ 6 ರನ್ ಬಾರಿಸಿ ಔಟಾದರೆ, ರೋಹಿತ್ ಶರ್ಮ 14 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆನಿಯಲ್ ಸ್ಯಾಮ್ಸ್ 1 ರನ್ ಗಳಿಸಿ ಔಟಾದರೆ, ಟ್ರಿಸ್ಟಾನ್ ಸ್ಟಬ್ಸ್ ಸೊನ್ನೆ ಸುತ್ತಿದರು. ಹೃತಿಕ್ ಶೋಕಿನ್ 18 ರನ್ ಗಳಿಸಿ ಔಟಾದರು.

ಕೊನೆಗೆ ತಿಲಕ್ ವರ್ಮ 32 ಎಸೆತಗಳಲ್ಲಿ 34 ರನ್ ಬಾರಿಸಿ ಅಜೇಯರಾಗುಳಿದರೆ, ಟಿಮ್ ಡೇವಿಡ್ ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

CSKಯ ಒಳಗೊಳಗೇ ಬಹಳ ದೊಡ್ಡ ಕಿರಿಕ್ | Oneindia Kannada

ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮುಖೇಶ್ ಚೌಧರಿ 3 ವಿಕೆಟ್ ಪಡೆದರೆ, ಸಮರ್ಜಿತ್ ಸಿಂಗ್ ಹಾಗೂ ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.

Story first published: Friday, May 13, 2022, 10:13 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X