ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅಹಮದಾಬಾದ್ ಫ್ರಾಂಚೈಸಿ ಮಾಲಿಕತ್ವ, ಸಿವಿಸಿ ಕ್ಯಾಪಿಟಲ್‌ಗೆ ಗ್ರೀನ್ ಸಿಗ್ನಲ್ ನೀಡಿದ ಬಿಸಿಸಿಐ

BCCI

ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ, ಇದರ ಹರಾಜು ಪ್ರಕ್ರಿಯೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಬಹುದು ಎನ್ನಲಾಗಿದೆ. ಇದರ ಜೊತೆಗೆ ಈ ಬಾರಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಮುಂದಿನ ಸೀಸನ್‌ಗೆ ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳಲಿದೆ.

ಅಹಮದಾಬಾದ್ ಮೂಲದ ಫ್ರಾಂಚೈಸಿಯೊಂದಿಗೆ ನಡೆಯುತ್ತಿರುವ ವಿವಾದದಿಂದಾಗಿ, ಮೆಗಾ ಹರಾಜನ್ನು ಫೆಬ್ರವರಿ ಎರಡನೇ ವಾರಕ್ಕೆ ಮುಂದೂಡಬೇಕಾಯಿತು. ಐಪಿಎಲ್ 2022 ಕ್ಕೆ ಬಿಸಿಸಿಐ 2 ಹೊಸ ತಂಡಗಳನ್ನು ಸೇರಿಸಿದ್ದು, ಇದರಲ್ಲಿ ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ 7090 ಕೋಟಿ ರೂಪಾಯಿ ಖರ್ಚು ಮಾಡಿ ಲಕ್ನೋ ತಂಡವನ್ನು ಖರೀದಿಸಿದ್ದರೆ, ಅಮೆರಿಕದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿಗೆ ಖರೀದಿಸಿದೆ.

ಆದರೆ, ಇದು ಘೋಷಣೆಗೊಂಡು 48 ಗಂಟೆಗಳಲ್ಲಿ, ಬೆಟ್ಟಿಂಗ್ ಕಂಪನಿಗಳಲ್ಲಿ ಅವರು ಹೂಡಿಕೆ ಮಾಡಿರುವ ಬಗ್ಗೆ ಬೆಳಕಿಗೆ ಬಂದ ನಂತರ ಸಿವಿಸಿ ಕ್ಯಾಪಿಟಲ್ ತಂಡಕ್ಕೆ ಬಿಸಿಸಿಐನಿಂದ ಒಪ್ಪಂದ ಪತ್ರವನ್ನು ನೀಡದಿರುವ ವಿವಾದ ಭುಗಿಲೆದ್ದಿತು. ಆದರೆ ಇದೀಗ ಬಿಸಿಸಿಐನಿಂದ ಅನುಮತಿ ಸಿಕ್ಕಿದೆ. ವರದಿಯ ಪ್ರಕಾರ, ಬಿಸಿಸಿಐನ ತನಿಖಾ ಸಮಿತಿಯು ಸಿವಿಸಿ ಕ್ಯಾಪಿಟಲ್‌ನ ಹೂಡಿಕೆಯ ಬಗ್ಗೆ ತನಿಖೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದೆ.

ನ್ಯಾಯಮೂರ್ತಿ ಕೆ. ಎಸ್ ರಾಧಾಕೃಷ್ಣನ್ ನೇತೃತ್ವದ 3 ಸದಸ್ಯರ ತನಿಖಾ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಈ ಅಮೇರಿಕನ್ ಕಂಪನಿಯ ಭಾಗವಹಿಸುವಿಕೆಗೆ ಓಕೆ ಎಂದಿದೆ.

ತನ್ನ ವರದಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮೂಲದೊಂದಿಗೆ ಮಾತನಾಡಿದ ಕ್ರಿಕ್‌ಬಜ್, 'ಬಿಸಿಸಿಐ ಸಿವಿಸಿಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ಕೇಳಿದೆ, ಅದರ ಮೇಲೆ ಸಮಿತಿಯು ತನ್ನ ಅಭಿಪ್ರಾಯವನ್ನು ನೀಡಿದೆ. ಈ ಅಭಿಪ್ರಾಯದೊಂದಿಗೆ, ಈ ವಿಷಯದಲ್ಲಿ ಸಮಿತಿಯ ಫ್ರಾಂಚೈಸಿ ಒಳಗೊಳ್ಳುವಿಕೆ ಕೊನೆಗೊಂಡಿದೆ, ಆದರೂ ಈಗ ಅದನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಬಿಸಿಸಿಐಗೆ ಬಿಟ್ಟದ್ದು. ಅಮೆರಿಕದ ಕಂಪನಿಗೆ ಪದಾಧಿಕಾರಿಗಳು ಈಗಾಗಲೇ ಕ್ಲಿಯರೆನ್ಸ್ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಐಪಿಎಲ್‌ನ ಆಡಳಿತ ಮಂಡಳಿಯು 2022 ರ ಮೆಗಾ ಹರಾಜಿಗಾಗಿ ಫೆಬ್ರವರಿ 12 ರಿಂದ 13 ರವರೆಗೆ ನಡೆಸಲು ಮುಂದಾಗಿದ್ದು, ಅದು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.

Story first published: Tuesday, December 28, 2021, 9:41 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X