ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

GT vs RR: ಫೈನಲ್ ಆಸೆ ಛಿದ್ರಗೊಳಿಸಿ ಎದುರಾಳಿ ರಾಜಸ್ಥಾನ್ ಬಳಿ ಕ್ಷಮೆ ಕೇಳಿದ ಮಿಲ್ಲರ್! ಕಾರಣವೇನು?

IPL 2022: David Miller apologised Rajasthan Royals after demolishing their entry to final

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡು ಇದೀಗ ಪ್ಲೇ ಆಫ್ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾದವು. ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿತು.

IPL 2022: 2011ರ ಐಪಿಎಲ್‌ನಿಂದ ಇಲ್ಲಿಯವರೆಗೆ ಕ್ವಾಲಿಫೈಯರ್ 1 ಪಂದ್ಯ ಗೆದ್ದ ಎಲ್ಲಾ ತಂಡಗಳ ಪಟ್ಟಿIPL 2022: 2011ರ ಐಪಿಎಲ್‌ನಿಂದ ಇಲ್ಲಿಯವರೆಗೆ ಕ್ವಾಲಿಫೈಯರ್ 1 ಪಂದ್ಯ ಗೆದ್ದ ಎಲ್ಲಾ ತಂಡಗಳ ಪಟ್ಟಿ

ಇತ್ತ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ತೆರಳಿದ್ದು,ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಬರುವ ತಂಡದ ಜೊತೆ ಸೆಣಸಾಟವನ್ನು ನಡೆಸಲಿದೆ. ಇನ್ನು ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಬೃಹತ್ ಪಾತ್ರವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಗುಜರಾತ್ ಟೈಟನ್ಸ್ ತಂಡದ ಸ್ಫೋಟಕ ಆಟಗಾರ ಡೇವಿಡ್ ಮಿಲ್ಲರ್ ಪಂದ್ಯ ಮುಗಿದ ನಂತರ ಮಾಡಿರುವ ಟ್ವೀಟ್ ವೈರಲ್ ಆಗಿದೆ.

2008-2022 ಐಪಿಎಲ್‌ವರೆಗೆ ಕೊನೆಯ ಸ್ಥಾನ ಪಡೆದುಕೊಂಡ ತಂಡಗಳ ಪಟ್ಟಿ: 4 ಬಾರಿ ಮುಗ್ಗರಿಸಿದ ತಂಡವಿದು!2008-2022 ಐಪಿಎಲ್‌ವರೆಗೆ ಕೊನೆಯ ಸ್ಥಾನ ಪಡೆದುಕೊಂಡ ತಂಡಗಳ ಪಟ್ಟಿ: 4 ಬಾರಿ ಮುಗ್ಗರಿಸಿದ ತಂಡವಿದು!

ಪಂದ್ಯ ಮುಕ್ತಾಯಗೊಂಡು ತಮ್ಮ ತಂಡ ಫೈನಲ್ ಪ್ರವೇಶಿಸುತ್ತಿದ್ದಂತೆ ಮಧ್ಯರಾತ್ರಿ ಟ್ವೀಟ್ ಮಾಡಿರುವ ಡೇವಿಡ್ ಮಿಲ್ಲರ್ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಡೇವಿಡ್ ಮಿಲ್ಲರ್ ಈ ರೀತಿ ಕ್ಷಮೆಯಾಚಿಸಲು ಕಾರಣವೇನು ಎಂಬುದರ ಕುರಿತಾದ ವಿವರ ಮುಂದೆ ಓದಿ..

ಸಾರಿ ರಾಯಲ್ಸ್ ಫ್ಯಾಮಿಲಿ ಎಂಬ ಮಿಲ್ಲರ್

ಸಾರಿ ರಾಯಲ್ಸ್ ಫ್ಯಾಮಿಲಿ ಎಂಬ ಮಿಲ್ಲರ್

ಒಂದನೇ ಕ್ವಾಲಿಫೈಯರ್ ಪಂದ್ಯ ಮುಕ್ತಾಯಗೊಂಡ ನಂತರ ತಡರಾತ್ರಿ 1.09ಕ್ಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಡೇವಿಡ್ ಮಿಲ್ಲರ್ ಸಾರಿ ರಾಯಲ್ಸ್ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ.

ಮಿಲ್ಲರ್ ಕ್ಷಮೆ ಕೇಳಲು ಇದುವೇ ಕಾರಣ

ಮಿಲ್ಲರ್ ಕ್ಷಮೆ ಕೇಳಲು ಇದುವೇ ಕಾರಣ

ಇನ್ನು ಡೇವಿಡ್ ಮಿಲ್ಲರ್ ಈ ರೀತಿ ಕ್ಷಮೆ ಕೇಳಲು ಕಾರಣ ರಾಜಸ್ಥಾನ್ ರಾಯಲ್ಸ್ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ತಾನು ಪ್ರತಿನಿಧಿಸಿದಂತಹ ಫ್ರಾಂಚೈಸಿ. ಹೌದು, ಡೇವಿಡ್ ಮಿಲ್ಲರ್ ತಾನು ಪ್ರತಿನಿಧಿಸಿದಂತಹ ತಂಡದ ವಿರುದ್ಧವೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಫೈನಲ್ ಪ್ರವೇಶಿಸುವ ಮೊದಲ ಅವಕಾಶವನ್ನು ಕೈತಪ್ಪಿದ ಕಾರಣಕ್ಕೆ ಕ್ಷಮೆಯಾಚಿಸಿದ್ದಾರೆ. ಸದ್ಯ ತನ್ನ ಹಳೆ ಫ್ರಾಂಚೈಸಿಯ ಕ್ಷಮೆ ಯಾಚಿಸಿ ಡೇವಿಡ್ ಮಿಲ್ಲರ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪ್ಲೇಆಫ್ ಹೊಸ ರೂಲ್ಸ್ ನಿಂದ ಮಳೆ ಬಂದ್ರೆ RCB ಗೆ ಉಳಿಗಾಲವೇ ಇಲ್ಲ!ಯಾಕೆ? | OneIndia Kannada
ಪಂದ್ಯದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್

ಪಂದ್ಯದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಡೇವಿಡ್ ಮಿಲ್ಲರ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಕ್ವಾಲಿಫೈಯರ್ ಪಂದ್ಯದಲ್ಲಿ 38 ಎಸೆತಗಳಿಗೆ ಅಜೇಯ 68 ರನ್ ಚಚ್ಚಿದರು. ಅದರಲ್ಲಿಯೂ ತಮ್ಮ ತಂಡ ಗೆಲ್ಲಲು ಅಂತಿಮ 6 ಎಸೆತಗಳಲ್ಲಿ 16 ರನ್ ಬೇಕಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆದ ಅಂತಿಮ ಓವರ್‌ನ ಮೊದಲ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಡೇವಿಡ್ ಮಿಲ್ಲರ್ ಅಬ್ಬರಿಸಿದರು.

Story first published: Wednesday, May 25, 2022, 13:15 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X