ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಮಿಂಚುತ್ತಿರುವ ಕುಲ್ದೀಪ್ ಯಾದವ್: ಯಶಸ್ಸಿಗೆ ಆತನೇ ಕಾರಣ ಎಂದ ಸ್ಪಿನ್ನರ್

IPL 2022: DC spinner Kuldeep Yadav said Rishabh Pant guides me well from behind the stumps

ಐಪಿಎಲ್ 2022ರ ಆವೃತ್ತಿಯ 21 ಪಂದ್ಯಗಳು ಈವರೆಗೆ ನಡೆದಿದ್ದು ಸಾಕಷ್ಟು ರೋಮಾಂಚನಕಾರಿ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣ ನೀಡಿದೆ. ಅನೇಕ ಅದ್ಭುತ ಪ್ರದರ್ಶನಗಳು ಟೂರ್ನಿಯಲ್ಲಿ ಬಂದಿದ್ದು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದಲ್ಲಿದ್ದ ಕುಲ್ದೀಪ್ ಯಾದವ್ ಅವಕಾಶ ದೊರೆಯದೆ ಬೆಂಚ್ ಕಾದಿದ್ದರು. ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಮಡದ ಪರವಾಗಿ ಆಡುತ್ತಿರುವ ಕುಲ್ದೀಪ್ ಟೂರ್ನಿಯಲ್ಲಿ ಮಿಂಚುಹರಿಸುತ್ತಿರುವ ಆಟಗಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಯಶಸ್ಸಿನ ಮೇಲೆ ಯಶಸ್ಸು ಸಾಧಿಸುತ್ತಿರುವ ಕುಲ್ದೀಪ್ ಯಾದವ್ ತಮ್ಮ ಪ್ರದರ್ಶನಕ್ಕೆ ಸಂತಸಗೊಂಡಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಪಡೆಯಲು ಕುಲ್‌ದೀಪ್ ಸಫಲವಾಗುತ್ತಿದ್ದು ಡೆಲ್ಲಿ ತಂಡಕ್ಕೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಹೊಸ ಫ್ರಾಂಚೈಸಿಯೊಂದಿಗೆ ಕುಲ್ದೀಪ್ ಯಾದವ್ ಮತ್ತಷ್ಟು ಆತ್ಮವಿಶ್ವಾಸದಿಂದ ಕಾಣಿಸುತ್ತಿದ್ದಾರೆ. ಅದರಲ್ಲೂ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನದ ಬಳಿಕ ಅವರು ತಂಡದ ನಾಯಕ ರಿಷಭ್ ಪಂತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿಕೆಟ್ ಹಿಂದಿನಿಂದ ಪಂತ್ ನೀಡುತ್ತಿರುವ ಸಲಹೆಯಿಂದ ಸಾಕಷ್ಟು ನೆರವಾಗುತ್ತಿದೆ ಎಂದಿದ್ದಾರೆ.

RR vs LSG: ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ತೆರಳಿದ ಅಶ್ವಿನ್: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು!RR vs LSG: ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ತೆರಳಿದ ಅಶ್ವಿನ್: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು!

"ನಾನು ಇಲ್ಲಿನ ವಾತಾವರಣವನ್ನು ಆನಂದಿಸುತ್ತಿದ್ದೇನೆ. ತಂಡ ನನಗೆ ಅತ್ಯುತ್ತಮವಾಗಿ ಬೆಂಬಲವನ್ನು ನೀಡುತ್ತಿದೆ. ವಿಕೆಟ್ ಹಿಂದಿನಿಂದ ರಿಷಭ್ ಉತ್ತಮವಾಗಿ ಸಲಹೆಗಳನ್ನು ನೀಡುತ್ತಿದ್ದಾರೆ" ಎಂದು ಕುಲ್ದೀಪ್ ಯಾದವ್ ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಕುಲ್ದೀಪ್ ಯಾದವ್ ಶ್ರೇಯಸ್ ಐಯ್ಯರ್ ವಿಕೆಟ್ ಪಡೆದ ಬಗ್ಗೆ ಮಾತನಾಡಿದರು. "ಶ್ರೇಯಸ್ ಐಯ್ಯರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಹಾಗೂ ಚೆಂಡನ್ನು ಚೆನ್ನಾಗಿ ದಂಡಿಸುತ್ತಿದ್ದರು. ಹಾಗಾಗಿ ಅವರದ್ದು ದೊಡ್ಡ ವಿಕೆಟ್ ಆಗಿತ್ತು. ಶ್ರೇಯಸ್ ಐಯ್ಯರ್ ವಿಕೆಟ್‌ ಪಡೆದಿರುವುದನ್ನು ಸಾನು ಉತ್ತಮವಾಗಿ ಆನಂದಿಸಿದೆ. ಕಾರಣ ಅದು ನನ್ನ ಮೊದಲ ವಿಕೆಟ್ ಆಗಿತ್ತು ಹಾಗೂ ತಂಡದ ದೃಷ್ಟಿಯಿಮದ ಅದು ಬಹಳ ಪ್ರಮುಖವಾದ ವಿಕೆಟ್ ಆಗಿತ್ತು" ಎಂದಿದ್ದಾರೆ ಕುಲ್ದೀಪ್ ಯಾದವ್.

"ನಾನು ಹೆಚ್ಚು ಪ್ರಯತ್ನ ಪಡಲಿಲ್ಲ. ನಾನು ನನ್ನ ಲಯದ ಮೇಲೆ ಹೆಚ್ಚಿನ ಗಮನಹರಿಸಿದ್ದೆ. ಟೀಮ್ ಇಂಡಿಯಾಗೆ ಮರಳಿದ ಬಳಿಕ ನಾನು ಇದನ್ನೇ ಮಾಡಿದ್ದೆ. ನಾನು ನನ್ನ ಬೌಲಿಂಗ್‌ಅನ್ನು ಚೆನ್ನಾಗಿ ಅನುಭವಿಸುತ್ತೇನೆ ಹಾಗೂ ಉತ್ತಮ ಲೆಂತ್‌ನಲ್ಲಿ ಬೌಲಿಂಗ್ ಂಆಡುವುದನ್ನು ಆನಂದಿಸುತ್ತೇನೆ" ಎಂದಿದ್ದಾರೆ ಕುಲ್ದೀಪ್ ಯಾದವ್.

ಐಪಿಎಲ್ 15ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿತು. ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ 215 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 171 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು. ಈ ಮೂಲಕ ಡೆಲ್ಲಿ 44 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಸ್ಪೋಟಕ ಆರಂಭ ನೀಡುವ ಪ್ರಯತ್ನವನ್ನು ವೆಂಕಟೇಶ್ ಐಯ್ಯರ್ ನಡೆಸಿದರಾದರೂ ಅವರ ಆಟ 18 ರನ್‌ಗಳಿಗೆ ಸೀಮಿತವಾಯಿತು. 8 ಎಸೆತ ಎದುರಿಸಿದ ಅವರು 1 ಬೌಂಡಿ ಹಾಗೂ 2 ಸಿಕ್ಸರ್ ಬಾರಿಸಿದರು. ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಲು ವಿಫಲವಾದರು. ನಾಯಕ ಶ್ರೇಯಸ್ ಐಯ್ಯರ್ ಹಾಗೂ ನಿತೀಶ್ ರಾಣಾ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ನಡೆಸಿ ಒಂದು ಹಂತಕ್ಕೆ ಯಶಸ್ಸು ಸಾಧಿಸಿದರು. ಈ ಜೋಡಿ ಬೇರ್ಪಟ್ಟ ನಂತರ ಮತ್ತೆ ತಂಡ ಹಿನ್ನಡೆ ಅನುಭವಿಸಿತು.

Nita Ambani : ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶNita Ambani : ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶ

Umran Malik ಈ ಸರಣಿಯ ಅತ್ಯಂತ ವೇಗದ ಬೌಲರ್ | Oneindia Kannda

ಡೆಲ್ಲಿ ಕ್ಯಾಪಿಟಲ್ಸ್: ಸ್ಕ್ವಾಡ್ ಆಡುವ ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್ ಬೆಂಚ್: ಅನ್ರಿಚ್ ನೋರ್ಕಿಯಾ, ಮನ್‌ದೀಪ್ ಸಿಂಗ್, ಶ್ರೀಕರ್ ಭರತ್, ಟಿಮ್ ಸೀಫರ್ಟ್, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಲುಂಗಿ ಎನ್‌ಗಿಡಿ

Story first published: Tuesday, April 12, 2022, 9:51 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X