ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

DC VS PBKS: ಪಂದ್ಯದ ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್‌

DC VS PBKS

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯವು ಹೈವೋಲ್ಟೇಜ್ ಮುಖಾಮುಖಿ ಆಗಿ ಮಾರ್ಪಟ್ಟಿದೆ.

ಉಭಯ ತಂಡಗಳು ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಗೆಲುವು ಮತ್ತು ಸೋಲನ್ನು ಕಂಡಿದ್ದು, 12 ಪಾಯಿಂಟ್ಸ್‌ ಪಡೆದಿವೆ. ಆದ್ರೆ ನೆಟ್‌ ರನ್‌ ರೇಟ್‌ ದೃಷ್ಟಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನ ಅಲಂಕರಿಸಿದ್ದು, ಪಂಜಾಬ್ ಕಿಂಗ್ಸ್ ತಂಡವು ಏಳನೇ ಸ್ಥಾನದಲ್ಲಿ ಉಳಿದಿದೆ.

ಗೆಲುವಿನ ಲಯದಲ್ಲಿರುವ ಡೆಲ್ಲಿ ಮತ್ತು ಪಂಜಾಬ್

ಗೆಲುವಿನ ಲಯದಲ್ಲಿರುವ ಡೆಲ್ಲಿ ಮತ್ತು ಪಂಜಾಬ್

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಪಂದ್ಯ ಗೆದ್ದಿರುವುದರಿಂದ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ಪಂಜಾಬ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 54ರನ್‌ಗಳ ಜಯಭೇರಿ ಬಾರಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬಲಿಷ್ಠ ರಾಜಸ್ತಾನ್ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವನ್ನ ದಾಖಲಿಸಿತು.

LSG vs RR: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಮೂವರನ್ನು ಹೊರಗಿಡಿ

ಪಿಚ್ ರಿಪೋರ್ಟ್‌

ಪಿಚ್ ರಿಪೋರ್ಟ್‌

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಕಳೆದ ಐದು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ಮೂರು ತಂಡವು ಗೆಲುವನ್ನ ಸಾಧಿಸಿದೆ. ಪಂದ್ಯವು ರಾತ್ರಿ 7.30ಕ್ಕೆ ಪ್ರಾರಂಭವಾಗುವುದರಿಂದ ಇಬ್ಬನಿ ಅಂಶವು ಪರಿಣಾಮ ಬೀರಲಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಬಹುತೇಕ ಬೌಲಿಂಗ್ ಆಯ್ಕೆಗೆ ಮುಂದಾಗಬಹುದು.

ಈ ಪಿಚ್‌ನ ಸರಾಸರಿ ಮೊದಲ ಇನ್ನಿಂಗ್ಸ್‌ ಸ್ಕೋರ್ 166ರನ್ ಆಗಿದ್ದು, ಪೇಸರ್‌ಗಳು ಹೆಚ್ಚು ವಿಕೆಟ್ ಪಡೆಯುವ ನಿರೀಕ್ಷೆಯಿದೆ.

ಧೋನಿ ನಂತರ ಸಿಎಸ್‌ಕೆಗೆ ನಾಯಕನಾಗುವ ಅರ್ಹತೆ ಈತನಿಗಿದೆ; ಸೆಹ್ವಾಗ್ ಸೂಚಿಸಿದ್ದು ಯಾರನ್ನ?

ಹೆಡ್‌ ಟು ಹೆಡ್‌

ಹೆಡ್‌ ಟು ಹೆಡ್‌

ಎರಡೂ ತಂಡಗಳು ಐಪಿಎಲ್‌ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಪಂಜಾಬ್ ಕಿಂಗ್ಸ್ 15 ಸಂದರ್ಭಗಳಲ್ಲಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ (119/1) ಈ ಸೀಸನ್‌ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ (115) ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದೆ.

ಸಂಭಾವ್ಯ ಪ್ಲೇಯಿಂಗ್ 11

ಸಂಭಾವ್ಯ ಪ್ಲೇಯಿಂಗ್ 11

ಪಂಜಾಬ್ ಕಿಂಗ್ಸ್‌
ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್-ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಷ್‌ದೀಪ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಶ್ರೀಕರ್ ಭರತ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಎನ್ರಿಕ್ ನೊರ್ಕಿಯಾ

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada
ಉಭಯ ತಂಡಗಳ ಕೀ ಪ್ಲೇಯರ್ಸ್

ಉಭಯ ತಂಡಗಳ ಕೀ ಪ್ಲೇಯರ್ಸ್

ಶಿಖರ್ ಧವನ್ (ಪಿಬಿಕೆಎಸ್) 12 ಪಂದ್ಯಗಳಲ್ಲಿ 402 ರನ್ ಗಳಿಸಿದ್ದಾರೆ. ಅವರ ಸರಾಸರಿ 40.20.
ಲಿಯಾಮ್ ಲಿವಿಂಗ್‌ಸ್ಟೋನ್ (ಪಿಬಿಕೆಎಸ್) ಈ ಸೀಸನ್‌ನಲ್ಲಿ 35ರ ಸರಾಸರಿಯಲ್ಲಿ 385 ರನ್ ಗಳಿಸಿದ್ದಾರೆ. ಅವರು 180.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಡೇವಿಡ್ ವಾರ್ನರ್ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 61.00 ಸರಾಸರಿಯಲ್ಲಿ 427 ರನ್ ಗಳಿಸಿದ್ದಾರೆ. ಇನ್ನು ಡೆಲ್ಲಿ ಪರ ಅವೇಶ್ ಖಾನ್ ಈ ಋತುವಿನಲ್ಲಿ 16 ವಿಕೆಟ್ ಪಡೆದು ಪ್ರಭಾವ ಬೀರಿದ್ದಾರೆ.

Story first published: Sunday, May 15, 2022, 19:01 [IST]
Other articles published on May 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X