ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ನಂತರ ಈ ಫ್ರಾಂಚೈಸಿ ಪರ ಆಡಬೇಕೆಂದು ಬಯಸಿದ ದೀಪಕ್ ಚಹಾರ್

Deepak chahar

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಸೀಸನ್‌ನಲ್ಲಿ ದೀಪಕ್ ಚಹಾರ್ ಅತ್ಯಮೂಲ್ಯ ಆಟಗಾರರಾಗಿ ಹೊರಹೊಮ್ಮಿದರು. ಮುಂಬೈ ಇಂಡಿಯನ್ಸ್‌ನ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ಚೆನ್ನೈ ಸೂಪರ್ ಕಿಂಗ್ಸ್‌ ರೀಟೈನ್ ಪ್ರಕ್ರಿಯೆಯಲ್ಲಿ ದೀಪಕ್ ಚಹಾರ್‌ನನ್ನ ಕೈ ಬಿಟ್ಟಿತು. ಆದ್ರೆ ಮೆಗಾ ಹರಾಜಿನಲ್ಲಿ ಬಿಟ್ಟುಕೊಡದ ಸಿಎಸ್‌ಕೆ 14 ಕೋಟಿ ರೂ.ಗೆ ಖರೀದಿಸಿತು.
ಇತ್ತೀಚೆಗೆ ಬ್ಯಾಟಿಂಗ್ ನಲ್ಲಿ ಮಿಂಚುತ್ತಿರುವ ದೀಪಕ್ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ದೀಪಕ್‌ಗೆ ಹರಾಜಿನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಂಎಸ್ ಧೋನಿ ಆಡುವ ಸಿಎಸ್‌ಕೆ ಭಾಗವಾಗುವುದು ಯಾವುದೇ ಆಟಗಾರನ ಕನಸಾಗಿರುತ್ತದೆ.

ಸಿಎಸ್‌ಕೆ ಹೊರತುಪಡಿಸಿ ಮತ್ತೊಂದು ತಂಡದ ಹೆಸರಿಸಿದ ದೀಪಕ್

ಸಿಎಸ್‌ಕೆ ಹೊರತುಪಡಿಸಿ ಮತ್ತೊಂದು ತಂಡದ ಹೆಸರಿಸಿದ ದೀಪಕ್

ಈಗ ಸಿಎಸ್‌ಕೆ ಹೊರತಾಗಿ ಆಡಲು ಬಯಸುವ ಮತ್ತೊಂದು ತಂಡದ ಹೆಸರನ್ನ ದೀಪಕ್ ಚಹಾರ್ ಬಹಿರಂಗವಾಗಿ ಹೇಳಿದ್ದಾರೆ. ದೀಪಕ್ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ದೀಪಕ್ ತನ್ನ ವೃತ್ತಿಜೀವನದ ಆರಂಭದಲ್ಲಿ ರಾಜಸ್ಥಾನ ಫ್ರಾಂಚೈಸಿಯಲ್ಲಿ ಆಡಲು ಬಯಸಿದ್ದರು. ಮೆಗಾ ಹರಾಜಿನಲ್ಲಿ ಸಿಎಸ್‌ಕೆಗೆ ನನ್ನನ್ನು ಖರೀದಿಸಲು ಸಾಧ್ಯವಾಗದಿದ್ದರೆ ನಾನು ರಾಜಸ್ಥಾನ ರಾಯಲ್ಸ್‌ಗಾಗಿ ಆಡಲು ಬಯಸುತ್ತಿದ್ದೆ ಎಂದಿದ್ದಾರೆ. ದೀಪಕ್ ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನಿ ಕ್ರಿಕೆಟಿಗರೂ ಹೌದು.

ಧೋನಿಯ ವಿಶ್ವಾಸಾರ್ಹ ಬೌಲರ್ ಈತ

ಧೋನಿಯ ವಿಶ್ವಾಸಾರ್ಹ ಬೌಲರ್ ಈತ

ಎಂಎಸ್ ಧೋನಿ ಅವರು ಆರಂಭಿಕ ಓವರ್‌ಗಳಲ್ಲಿ ಹೊಸ ಬಾಲ್‌ನಲ್ಲಿ ದೀಪಕ್ ಅತ್ಯಂತ ವಿಶ್ವಾಸಾರ್ಹ ಬೌಲರ್‌ಗಳಲ್ಲಿ ಒಬ್ಬರು. ದೀಪಕ್ ಆರಂಭದಲ್ಲಿ ಉತ್ತಮ ಸ್ವಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸಿದರು. ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಪಡೆಯುವ ಸ್ವಿಂಗ್ ಕೂಡ ಅವರಲ್ಲಿದೆ. ಅದಕ್ಕೇ ಧೋನಿ ಈ ಆಟಗಾರನ ಕೈ ಬಿಡಲಿಲ್ಲ.

ಏಕಕಾಲದಲ್ಲಿ ಕಣಕ್ಕಿಳಿಯಲಿವೆ ಭಾರತದ 2 ತಂಡಗಳು? ಹೆಚ್ಚುವರಿ 3 ವಿದೇಶಿ ಸರಣಿಗಳನ್ನ ಸೇರಿಸಿದ BCCI

14 ಕೋಟಿ ಸಿಗುವ ನಿರೀಕ್ಷೆ ಇರಲಿಲ್ಲ

14 ಕೋಟಿ ಸಿಗುವ ನಿರೀಕ್ಷೆ ಇರಲಿಲ್ಲ

ಈ ಬಾರಿ 14 ಕೋಟಿ ಸಿಗುವ ನಿರೀಕ್ಷೆ ಇರಲಿಲ್ಲ ಎಂದು ದೀಪಕ್ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ದೀಪಕ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಅವರನ್ನು ಬಲಪಡಿಸಿದೆ. ದೀಪಕ್ ಭಾರತದ ಸೀಮಿತ ಓವರ್‌ಗಳ ತಂಡದ ಸಕ್ರಿಯ ಸದಸ್ಯ. ಒತ್ತಡದಲ್ಲಿ ಎರಡು ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಾಯಿತು. ಹೀಗಾಗಿ ಈ ಬಾರಿಯ ದೀಪಕ್ ಪ್ರದರ್ಶನದ ಮೇಲೆ ಎಲ್ಲ ತಂಡಗಳೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದವು. ಹಾಗಾಗಿಯೇ ದೀಪಕ್ ಹರಾಜಿನಲ್ಲಿ ಇಷ್ಟೊಂದು ಮೊತ್ತ ಪಡೆದಿದ್ದಾರೆ.

ಐಪಿಎಲ್ 2022: ಈ ಒಂದು ನಗರದಲ್ಲೇ ನಡೆಯಲಿವೆ 55 ಪಂದ್ಯಗಳು; ಸಂಪೂರ್ಣ ಟೂರ್ನಿ 3 ನಗರಗಳಲ್ಲಿ!

ದೀಪಕ್ ಚಹಾರ್ ಅಂತರಾಷ್ಟ್ರೀಯ ಸಾಧನೆ

ದೀಪಕ್ ಚಹಾರ್ ಅಂತರಾಷ್ಟ್ರೀಯ ಸಾಧನೆ

29 ವರ್ಷದ ದೀಪಕ್ ಈಗಾಗಲೇ ಭಾರತ ಪರ ಏಳು ಏಕದಿನ ಪಂದ್ಯಗಳಲ್ಲಿ 10 ವಿಕೆಟ್ ಹಾಗೂ 20 ಟಿ20 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. 63 ಐಪಿಎಲ್ ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮೂಲಕ ದೀಪಕ್ ಐಪಿಎಲ್ ಗೆ ಪದಾರ್ಪಣೆ ಮಾಡಿದರು. ಐಪಿಎಲ್‌ನಲ್ಲಿ 13 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ದೀಪಕ್ ಭಾರತದ ಪರ ಏಕದಿನದಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಯೋಜನೆಗಳಲ್ಲಿ ದೀಪಕ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಳೆಯ ಆಟಗಾರರನ್ನೇ ಉಳಿಸಿಕೊಂಡಿರುವ ಸಿಎಸ್‌ಕೆ

ಹಳೆಯ ಆಟಗಾರರನ್ನೇ ಉಳಿಸಿಕೊಂಡಿರುವ ಸಿಎಸ್‌ಕೆ

ಈ ಬಾರಿ ಸಿಎಸ್ ಕೆ ಬಹುತೇಕ ಹಳೆಯ ಆಟಗಾರರನ್ನು ಉಳಿಸಿಕೊಂಡಿದೆ. ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಡ್ವೇನ್ ಬ್ರಾವೋ ಜೊತೆಯಾಗಿದ್ದಾರೆ. ಈ ಬಾರಿ ಸುರೇಶ್ ರೈನಾ ಮತ್ತು ಫಾಫ್ ಡುಪ್ಲೆಸಿಸ್ ಅವರನ್ನು ಕೈಬಿಟ್ಟಿತು. ಸಿಎಸ್‌ಕೆ ಡುಪ್ಲೆಸಿಸ್‌ಗಾಗಿ ಪ್ರಯತ್ನಿಸಿತು ಆದರೆ ಆರ್‌ಸಿಬಿ ಡುಪ್ಲೆಸಿಸ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಸಹ ಆಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೌಫ್ | Oneindia Kannada

Story first published: Thursday, February 24, 2022, 9:38 [IST]
Other articles published on Feb 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X