ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೀಪಕ್ ಚಹಾರ್ IPL ಅಷ್ಟೇ ಅಲ್ಲದೆ T20 ವಿಶ್ವಕಪ್‌ನಲ್ಲೂ ಆಡೋದು ಡೌಟ್!

IPL: 2022 Deepak Chahar Might Miss IPL 2022, T20 World Cup 2022

ಭಾರತ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಸ್ನಾಯು ಸೆಳೆತದಿಂದ 15 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹೊರಗುಳಿಯುವಂತಾಗಿತ್ತು. ಆದರೇ ಚಹಾರ್ ಗೆ ಹೊಸದಾಗಿ ಕಾಣಿಸಿಕೊಂಡಿರುವ ಬೆನ್ನುನೋವಿನಿಂದಾಗಿ ಐಪಿಎಲ್ ಮಾತ್ರವಲ್ಲದೇ, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ಜರುಗಲಿರುವ 2022 ರ ಟಿ-20 ವಿಶ್ವಕಪ್‌ನಲ್ಲಿಯೂ ಭಾಗವಹಿಸುವ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದ ತಂಡದ ಮೇಲೆ ಕಪ್ಪು ಛಾಯೆ ಆವರಿಸುತ್ತಿದೆ.

ಸ್ನಾಯು ಸೆಳೆತದಿಂದ ಗುಣಮುಖರಾಗುತ್ತಿದ್ದ ಚಹಾರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ಮಾಡುವಾಗ ಬೆನ್ನುನೋವಿಗೆ ಒಳಗಾಗಿದ್ದಾರೆ. ಆದ್ದರಿಂದ ಕನಿಷ್ಠ ನಾಲ್ಕು ತಿಂಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಈ ಆವೃತ್ತಿಯಲ್ಲಿ ಚಹಾರ್ ಸಿಎಸ್‌ಕೆ ಪರವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿಗಳಿಗೆ ಖರೀದಿಸಿದ ಈ ವೇಗಿಯ ಅಲಭ್ಯತೆ ಚೆನೈ ಸೂಪರ್ ಕಿಂಗ್ಸ ತಂಡಕ್ಕೆ ನಿಸ್ಸಂಶಯವಾಗಿ ದೊಡ್ಡ ಆಘಾತಕಾರಿ ವಿಷಯವಾಗಿದೆ.

ಈ ತಿಂಗಳ ಕೊನೆಯಲ್ಲಿ ತಂಡ ಸೇರಬೇಕಿದ್ದ ಚಹಾರ್

ಈ ತಿಂಗಳ ಕೊನೆಯಲ್ಲಿ ತಂಡ ಸೇರಬೇಕಿದ್ದ ಚಹಾರ್

ಐಪಿಎಲ್ ಆರಂಭಕ್ಕೂ ಮುನ್ನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಚಹಾರ್ ಚೇತರಿಸಿಕೊಂಡು ದ್ವೀತಿಯಾರ್ಧದಲ್ಲಿ ತಂಡವನ್ನು ಸೇರಲು ಸಿದ್ಧರಾಗಿದ್ದರು. ಈಗ ಹೊಸದಾಗಿ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಬಲಗೈ ವೇಗಿ ಕನಿಷ್ಠ ನಾಲ್ಕು ತಿಂಗಳ ಕಾಲ ಮೈದಾನದಿಂದ ದೂರ ಉಳಿಯಬೇಕು ಎಂದು ಸೂಚನೆ ಸಿಕ್ಕಿದೆ. ಹೀಗಾಗಿ 2022 ರ ಟಿ-20 ವಿಶ್ವಕಪ್ ನಲ್ಲಿ ಭಾಗಿಯಾಗುವ ಅವಕಾಶ ಕೈ ತಪ್ಪಿದಂತಾಗಿದೆ.

ಬೌಲಿಂಗ್ ವಿಭಾಗದಲ್ಲಿ ಚಹರ್ ಅನುಪಸ್ಥಿತಿ ಕಾಡಲಿದೆ

ಬೌಲಿಂಗ್ ವಿಭಾಗದಲ್ಲಿ ಚಹರ್ ಅನುಪಸ್ಥಿತಿ ಕಾಡಲಿದೆ

ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವ ದೀಪಕ್ ಚಹಾರ್ ಚೆನೈ ಫ್ರಾಂಚೈಸಿಯಲ್ಲಿ ಅಗ್ರ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು. 29 ವರ್ಷ ವಯಸ್ಸಿನ ಬಲಗೈ ವೇಗಿ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದರು. ಅತ್ಯಂತ ವೇಗದ ಬೌಲಿಂಗ್ ಜೊತೆಗೆ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದ ಚಹರ್ ಅದನ್ನೇ ಅಸ್ತ್ರವಾಗಿಸಿಕೊಂಡು ಸ್ಲಾಗ್ ಓವರ್‌ಗಳಲ್ಲಿ ತೀಕ್ಷ್ಣವಾದ ಯಾರ್ಕರ್ ಮತ್ತು ಚೆನ್ನಾಗಿ ಮರೆಮಾಚುವ ನಿಧಾನಗತಿಯಲ್ಲಿ ಬೌಲ್ ಎಸೆಯುತ್ತಿದ್ದರು.

ಒಟ್ಟಾರೆ 63 ಐಪಿಎಲ್ ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿರುವ ಚಹಾರ್ 2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಕಳೆದ ಎರಡು ಸೀಸನ್್ಗಳಲ್ಲಿ ಸಿಎಸ್‌ಕೆ ತಂಡದ ಬೌಲಿಂಗ್ ಬಲವಾಗಿದ್ದರು. ರವೀಂದ್ರ ಜಡೇಜಾ ನೇತೃತ್ವದ ತಂಡವು ಆ್ಡಂ ಮಿಲ್ನೆ, ಕ್ರಿಸ್ ಜೋರ್ಡಾನ್, ಮುಕೇಶ್ ಚೌಧರಿ ಮತ್ತು ತುಷಾರ್ ದೇಶಪಾಂಡೆ ಸೇರಿದಂತೆ ವಿಭಿನ್ನ ವೇಗಿಗಳನ್ನು ಪ್ರಯತ್ನಿಸಿದರು ಮತ್ತು ಯಾರೂ ಗಮನಾರ್ಹ ಪರಿಣಾಮ ಬೀರಲಿಲ್ಲ. ಐದು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಜಯಶಾಲಿಯಾಗಿರುವ ಸಿಎಸ್‌ಕೆ ನಾಲ್ಕು ಸೋಲುಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ 9 ನೇ ಸ್ಥಾನದಲ್ಲಿದೆ.

ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಮಿಂಚಿದ್ದ ಚಹಾರ್

ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಮಿಂಚಿದ್ದ ಚಹಾರ್

ಬೌಲಿಂಗ್ ನಲ್ಲಿ ಅಷ್ಟೇ ಅಲ್ಲದೇ ಕೆಳಕ್ರಮಾಂಕದ ಬ್ಯಾಟಿಂಗ್್ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಚಹಾರ್ ಏಕದಿನ ಕ್ರಿಕೆಟ್‌ನಲ್ಲಿ ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದರು.

ಭಾರತದ ಪರ ಒಟ್ಟು ಏಳು ಏಕದಿನ ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ, ಅವರು 20 ಟಿ20 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದರು. ಈ ಎಲ್ಲಾ ಅಂಶಗಳನ್ನು ಗಮನಿಸಿದ್ದ ಸಿಎಸ್‌ಕೆ ಚಹರ್ ಅವರನ್ನು 15 ನೇ ಆವೃತ್ತಿಯಲ್ಲಿ 14 ಕೋಟಿಗೆ ಖರೀದಿಸಿತ್ತು. ಆದರೆ ಈ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ನೇತೃತ್ವದ ತಂಡ ಚಹರ್ ಇಲ್ಲದೆ ಕಾರ್ಯ ನಿರ್ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ. ವೇಗದ ಬೌಲಿಂಗ್ ಆಲ್‌ರೌಂಡರ್ ಆಸ್ಟ್ರೇಲಿಯಾದ ಟ್ರ್ಯಾಕ್‌ಗಳಲ್ಲಿ ಉತ್ತಮ ಆಸ್ತಿಯಾಗಿರುವುದರಿಂದ ಭಾರತ ತಂಡವು ಚಹರ್ ಗುಣಮುಖವಾಗಲಿ ಎಂದು ಆಶಿಸುತ್ತಿದೆ.

Story first published: Thursday, April 14, 2022, 18:03 [IST]
Other articles published on Apr 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X