ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಫ್ಲಾಪ್ ಆಗಿದ್ದರೂ ಐಪಿಎಲ್ 2023ಕ್ಕೆ ಈ ಮೂವರನ್ನು ಹೊರಹಾಕುವುದಿಲ್ಲ ಡೆಲ್ಲಿ ಕ್ಯಾಪಿಟಲ್ಸ್!

IPL 2022: Delhi Capitals likely to retain these 3 players despite of their bad performance

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು.

IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!

ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದಾಗ ಪ್ಲೇ ಆಫ್ ಹಂತಕ್ಕೇರುವ ಭರವಸೆಯನ್ನು ಹುಟ್ಟು ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವುದರ ಮೂಲಕ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು. ಟೂರ್ನಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಆತನ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ; ಉಮ್ರಾನ್ ಮಲಿಕ್ ಬಗ್ಗೆ ಅಫ್ರಿದಿ ಹೊಟ್ಟೆಕಿಚ್ಚಿನ ಹೇಳಿಕೆ!ಆತನ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ; ಉಮ್ರಾನ್ ಮಲಿಕ್ ಬಗ್ಗೆ ಅಫ್ರಿದಿ ಹೊಟ್ಟೆಕಿಚ್ಚಿನ ಹೇಳಿಕೆ!

ಹೀಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಕೊಂಚ ಹಿನ್ನಡೆಯಿಂದ ಕೈತಪ್ಪಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಕೈಬಿಡಲಿದ್ದು, ಈ ಮೂವರು ಆಟಗಾರರನ್ನು ಮಾತ್ರ ಕಳಪೆ ಪ್ರದರ್ಶನ ನೀಡಿದ್ದರೂ ತಂಡದಲ್ಲಿಯೇ ಮುಂದಿನ ಆವೃತ್ತಿಗಾಗಿ ಉಳಿಸಿಕೊಳ್ಳಲಿದೆ ಎನ್ನಬಹುದು. ಆ ಆಟಗಾರರ ಪಟ್ಟಿ ಕೆಳಕಂಡಂತಿದೆ.

1. ಶಾರ್ದೂಲ್ ಠಾಕೂರ್

1. ಶಾರ್ದೂಲ್ ಠಾಕೂರ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದ ಶಾರ್ದೂಲ್ ಠಾಕೂರ್ ಈ ಬಾರಿ 10.75 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಆದರೆ ಕಳೆದ ಆವೃತ್ತಿಯ ರೀತಿಯ ಪ್ರದರ್ಶನವನ್ನು ಈ ಬಾರಿ ನೀಡುವಲ್ಲಿ ವಿಫಲರಾದ ಶಾರ್ದೂಲ್ ಠಾಕೂರ್ 14 ಪಂದ್ಯಗಳನ್ನಾಡಿ 15 ವಿಕೆಟ್‍ಗಳನ್ನು ಪಡೆದರು. ಅದರಲ್ಲಿಯೂ 9.78ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್ ದುಬಾರಿ ಕೂಡ ಆದರು. ಹೀಗೆ ಕಳಪೆ ಪ್ರದರ್ಶನ ನೀಡಿದ್ದರೂ ಸಹ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯವಿರುವ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ನಡೆಯಲಿರುವ ಮಿನಿ ಹರಾಜಿಗೆ ಕೈಬಿಡುವುದು ಅನುಮಾನ ಎನ್ನಬಹುದು.

2. ಕಮಲೇಶ್ ನಾಗರಕೋಟಿ

2. ಕಮಲೇಶ್ ನಾಗರಕೋಟಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಪದಾರ್ಪಣೆ ಮಾಡಿದ ಯುವ ಬೌಲರ್ ಕಮಲೇಶ್ ನಾಗರಕೋಟಿ ಈ ಟೂರ್ನಿಯಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ಮಾತ್ರ ಪಡೆದರು ಹಾಗೂ 29 ರನ್ ಬಿಟ್ಟುಕೊಟ್ಟರು. ಹೀಗೆ ಈಗ ತಾನೇ ಟೂರ್ನಿಯಲ್ಲಿ ಪುಟ್ಟ ಹೆಜ್ಜೆ ಇಡುತ್ತಿರುವ ಈ ಯುವ ಕ್ರಿಕೆಟಿಗನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಡುವುದಿಲ್ಲ ಎನ್ನಬಹುದು.

3. ಅನ್ರಿಚ್ ನಾರ್ಕಿಯಾ

3. ಅನ್ರಿಚ್ ನಾರ್ಕಿಯಾ

ಈ ಬಾರಿ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಂಡ ಏಕೈಕ ವಿದೇಶಿ ಆಟಗಾರ ಈ ಆನ್ರಿಚ್ ನಾರ್ಕಿಯಾ. ಆದರೆ ಈ ಬಾರಿ ಗಾಯದ ಸಮಸ್ಯೆಯಿಂದಾಗಿ ಕೇವಲ 6 ಪಂದ್ಯದಲ್ಲಿ ಕಣಕ್ಕಿಳಿದ ನಾರ್ಕಿಯಾ 217 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಈತನ ಗಾಯದ ಸಮಸ್ಯೆಯನ್ನು ಪರಿಗಣಿಸಿ ಕಳಪೆ ಪ್ರದರ್ಶನವನ್ನು ನಿರ್ಲಕ್ಷಿಸಿ ಮುಂದಿನ ಆವೃತ್ತಿಯಲ್ಲಿಯೂ ಕಣಕ್ಕಿಳಿಯುವ ಅವಕಾಶ ನೀಡಲಿದೆ ಎನ್ನಬಹುದು.

Story first published: Saturday, June 4, 2022, 22:59 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X