ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

DC vs MI Playing 11: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

IPL 2022: Delhi Capitals vs Mumbai Indians fantasy tips and probable playing 11 details in kannada

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಸನಿಹಕ್ಕೆ ಬಂದಿವೆ. ನಂತರ ಆರಂಭವಾಗಲಿರುವ ಪ್ಲೇಆಫ್ ಸುತ್ತಿಗೆ ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಆಯ್ಕೆಯಾಗಿದ್ದು, ಮೂರನೇ ತಂಡವಾಗಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಆಯ್ಕೆಯಾಗುವುದು ಖಚಿತ. ಹೀಗಾಗಿ ನಾಲ್ಕನೇ ತಂಡವಾಗಿ ಆಯ್ಕೆಯಾಗುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಸದ್ಯ ಲೀಗ್ ಹಂತದ ತನ್ನೆಲ್ಲಾ ಪಂದ್ಯಗಳನ್ನು ಆಡಿ ಮುಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಡೆಲ್ಲಿ ಸೋತರೆ ಆರ್‌ಸಿಬಿ ಪ್ಲೇಆಫ್‌ಗೆ; ಮುಂಬೈ vs ಡೆಲ್ಲಿ ಪಂದ್ಯಗಳಲ್ಲಿ ಹೆಚ್ಚು ಗೆದ್ದ ಬಲಿಷ್ಠ ತಂಡ ಯಾವುದು?ಡೆಲ್ಲಿ ಸೋತರೆ ಆರ್‌ಸಿಬಿ ಪ್ಲೇಆಫ್‌ಗೆ; ಮುಂಬೈ vs ಡೆಲ್ಲಿ ಪಂದ್ಯಗಳಲ್ಲಿ ಹೆಚ್ಚು ಗೆದ್ದ ಬಲಿಷ್ಠ ತಂಡ ಯಾವುದು?

ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ 13 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳನ್ನು ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೀಗೆ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯವನ್ನಾಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ( ಮೇ 21 ) ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಪ್ಲೇಆಫ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ 16 ಅಂಕಗಳನ್ನು ತಲುಪಲಿದ್ದು, ಅಂಕಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸರಿದೂಗಿಸಲಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ರನ್ ರೇಟ್ ಹೆಚ್ಚಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಎಷ್ಟೇ ಅಂತರದಲ್ಲಿ ಗೆದ್ದರೂ ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬೀಳಲಿದೆ.

RCB Playoff Chances 2022 : ಗುಜರಾತ್ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವುದು ಅನುಮಾನ! ಕಾರಣವೇನು?RCB Playoff Chances 2022 : ಗುಜರಾತ್ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವುದು ಅನುಮಾನ! ಕಾರಣವೇನು?

ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯಮೂಲ್ಯ ಪಂದ್ಯವಾಗಿದ್ದು, ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕಣಕ್ಕಿಳಿಯಲಿದೆ. ಅತ್ತ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿ ಈಗಾಗಲೇ ಟೂರ್ನಿಯಿಂದ ಎಲಿಮಿನೇಟ್ ಆಗಿದ್ದು, ತನ್ನ ಈ ಅಂತಿಮ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಹೀಗೆ ದೊಡ್ಡ ಮಟ್ಟದ ಕುತೂಹಲ ನಿರ್ಮಿಸಿರುವ ಈ ಪಂದ್ಯದಲ್ಲಿ ಇತ್ತಂಡಗಳ ನಡುವಿನ ಆಡುವ ಬಳಗ ಯಾವ ರೀತಿ ಇರಲಿದೆ ಹಾಗೂ ಪಂದ್ಯಕ್ಕಾಗಿ ಡ್ರೀಮ್ ಟೀಮ್‌ನ್ನು ಯಾವ ರೀತಿ ರಚಿಸಬೇಕು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಡ್ರೀಮ್ ಟೀಮ್ ಹೀಗಿರಲಿ

ಡ್ರೀಮ್ ಟೀಮ್ ಹೀಗಿರಲಿ

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವವರು ಈ ಕೆಳಕಂಡಂತೆ ಆಟಗಾರರನ್ನು ಆಯ್ಕೆ ಮಾಡುವುದು ಉತ್ತಮ.
ಡ್ರೀಮ್ ಟೀಮ್ 1: ಡೇವಿಡ್ ವಾರ್ನರ್, 2 ಇಶಾನ್ ಕಿಶನ್, 3 ತಿಲಕ್ ವರ್ಮಾ, 4 ರಿಷಬ್ ಪಂತ್, 5 ಟಿಮ್ ಡೇವಿಡ್, 6 ಮಿಚೆಲ್ ಮಾರ್ಷ್, 7 ಡೇನಿಯಲ್ ಸ್ಯಾಮ್ಸ್, 8 ಅಕ್ಷರ್ ಪಟೇಲ್, 9 ಕುಲದೀಪ್ ಯಾದವ್, 10 ಜಸ್ಪ್ರೀತ್ ಬುಮ್ರಾ, 11.
ನಾಯಕ: ರಿಷಬ್ ಪಂತ್, ಉಪನಾಯಕ: ಡೇವಿಡ್ ವಾರ್ನರ್, ವಿಕೆಟ್ ಕೀಪರ್: ಇಶಾನ್ ಕಿಶನ್.

ಡ್ರೀಮ್ ಟೀಮ್ 2: 1 ಡೇವಿಡ್ ವಾರ್ನರ್, 2 ರೋಹಿತ್ ಶರ್ಮಾ, 3 ಸರ್ಫರಾಜ್ ಖಾನ್, 4 ಮಿಚೆಲ್ ಮಾರ್ಷ್, 5 ರಿಷಬ್ ಪಂತ್, 6 ರೋವ್ಮನ್ ಪೊವೆಲ್, 7 ಲಲಿತ್ ಯಾದವ್, 8 ಕುಲ್ದೀಪ್ ಯಾದವ್, 9 ಜಸ್ಪ್ರೀತ್ ಬುಮ್ರಾ, 10 ರಿಲೆ ಮೆರೆಡಿತ್, 10 ರಿಲೆ ಮೆರೆಡಿತ್, 1.

ನಾಯಕ: ರೋಹಿತ್ ಶರ್ಮಾ, ಉಪನಾಯಕ: ಮಿಚೆಲ್ ಮಾರ್ಷ್, ವಿಕೆಟ್ ಕೀಪರ್: ರಿಷಭ್ ಪಂತ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ

1. ಡೇವಿಡ್ ವಾರ್ನರ್, 2. ಸರ್ಫರಾಜ್ ಖಾನ್/ಪೃಥ್ವಿ ಶಾ, 3. ಮಿಚೆಲ್ ಮಾರ್ಷ್, 4. ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್ ), 5. ರೋವ್‌ಮನ್ ಪೊವೆಲ್, 6. ಲಲಿತ್ ಯಾದವ್, 7. ಅಕ್ಷರ್ ಪಟೇಲ್, 8. ಶಾರ್ದೂಲ್ ಠಾಕೂರ್, 9. ಕುಲದೀಪ್ ಯಾದವ್, 10. ಅನ್ರಿಚ್ ನೋರ್ಟ್ಜೆ / ಮುಸ್ತಾಫಿಜುರ್ ರೆಹಮಾನ್, 11. ಖಲೀಲ್ ಅಹ್ಮದ್.

ರೋಹಿತ್ ಪಡೆನ ಎದುರಿಸೊಕೆ ನಾವ್ ರೆಡಿ!! | OneIndia Kannada
ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ

1 ರೋಹಿತ್ ಶರ್ಮಾ (ನಾಯಕ), 2 ಇಶಾನ್ ಕಿಶನ್ (ವಿಕೆಟ್ ಕೀಪರ್), 3 ರಮಣದೀಪ್ ಸಿಂಗ್, 4 ತಿಲಕ್ ವರ್ಮಾ, 5 ಟಿಮ್ ಡೇವಿಡ್, 6 ಟ್ರಿಸ್ಟಾನ್ ಸ್ಟಬ್ಸ್ / ಕೀರಾನ್ ಪೊಲಾರ್ಡ್ / ಡೆವಾಲ್ಡ್ ಬ್ರೆವಿಸ್, 7 ಡೇನಿಯಲ್ ಸಾಮ್ಸ್, 8 ಸಂಜಯ್ ಯಾದವ್ / ಮುರುಗನ್ ಅಶ್ವಿನ್ / ಹೃತಿಕ್ ಶೋಕೀನ್, 9 ಕುಮಾರ್ ಕಾರ್ತಿಕೇಯ / ಮಯಾಂಕ್ ಮಾರ್ಕಾಂಡೆ, 10 ಜಸ್ಪ್ರೀತ್ ಬುಮ್ರಾ, 11 ರಿಲೆ ಮೆರೆಡಿತ್.

Story first published: Saturday, May 21, 2022, 8:51 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X