ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ತಂಡದ ಕನಸು ಕಾಣುತ್ತಿರುವ ಡಿಕೆಗೆ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಈತನೆದುರು ಅವಕಾಶ ಕಷ್ಟ!

IPL 2022: Dinesh Karthik may fail to get place in team india infront of Hardik Pandya

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಕ್ರಿಕೆಟ್ ಲೀಗ್ ಆಗಿದೆ. ಈ ಐಪಿಎಲ್ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು, ಈಗಾಗಲೇ ಹಲವಾರು ಪ್ರತಿಭಾವಂತ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಮುಂಬೈ ವಿರುದ್ಧ ಶತಕ ಬಾರಿಸಿ ಗೆದ್ದ ಖುಷಿಯಲ್ಲಿದ್ದ ರಾಹುಲ್‌ಗೆ ಆಘಾತ; ಬ್ಯಾನ್ ಆಗ್ತಾರಾ ರಾಹುಲ್?ಮುಂಬೈ ವಿರುದ್ಧ ಶತಕ ಬಾರಿಸಿ ಗೆದ್ದ ಖುಷಿಯಲ್ಲಿದ್ದ ರಾಹುಲ್‌ಗೆ ಆಘಾತ; ಬ್ಯಾನ್ ಆಗ್ತಾರಾ ರಾಹುಲ್?

ಹೀಗೆ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅನುಕೂಲ ಒದಗಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕಳಪೆ ಪ್ರದರ್ಶನದಿಂದ ಹಾಗೂ ಇನ್ನಿತರೆ ಕಾರಣಗಳಿಂದ ಭಾರತ ಅಂತರರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದುಕೊಂಡ ಹಲವಾರು ಕ್ರಿಕೆಟಿಗರಿಗೂ ಉತ್ತಮ ಪ್ರದರ್ಶನ ನೀಡಲು ವೇದಿಕೆಯನ್ನು ಕಲ್ಪಿಸಿದ್ದು, ಈಗಾಗಲೇ ಹಲವಾರು ಅನುಭವಿ ಕ್ರಿಕೆಟಿಗರು ಈ ಐಪಿಎಲ್‌ನಲ್ಲಿ ಮಿಂಚಿ ಅಂತರರಾಷ್ಟ್ರೀಯ ತಂಡದಲ್ಲಿ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!

ಅದೇ ರೀತಿ ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಹಲವಾರು ಯುವ ಕ್ರಿಕೆಟಿಗರು ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವತ್ತ ಚಿತ್ತ ನೆಟ್ಟಿದ್ದು, ಅನುಭವಿ ಕ್ರಿಕೆಟಿಗನಾದ ದಿನೇಶ್ ಕಾರ್ತಿಕ್ ಸಹ ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗುವ ಭಾರತ ತಂಡದ ಸದಸ್ಯನಾಗುವ ಆಸೆಯಲ್ಲಿದ್ದಾರೆ. ಅದರಂತೆ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಬಹುಮುಖ್ಯವಾದ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಟೂರ್ನಿಯಲ್ಲಿ ಮಿಂಚುತ್ತಿರುವ ಮತ್ತೋರ್ವ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕನಸಿಗೆ ತಣ್ಣೀರನ್ನು ಎರಚುವ ಸಾಧ್ಯತೆಗಳು ಹೆಚ್ಚಿದ್ದು, ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ದಿನೇಶ್ ಕಾರ್ತಿಕ್‌ಗೆ ಈತನೇ ಎದುರಾಳಿ

ದಿನೇಶ್ ಕಾರ್ತಿಕ್‌ಗೆ ಈತನೇ ಎದುರಾಳಿ

ದಿನೇಶ್ ಕಾರ್ತಿಕ್ ರೀತಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ಆಯ್ಕೆಗಾರರ ಮನಗೆದ್ದು ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಹಾರ್ದಿಕ್ ಪಾಂಡ್ಯ ಕೂಡ ಚಿತ್ತ ನೆಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದು, ಇದೀಗ ಸುಧಾರಿಸಿಕೊಂಡು ಟೂರ್ನಿಯಲ್ಲಿ ಅಬ್ಬರಿಸಿ ಮತ್ತೆ ಟೀಮ್ ಇಂಡಿಯಾ ಪ್ರವೇಶಿಸುವ ಭರವಸೆ ಹುಟ್ಟುಹಾಕಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳುವ ಆಸೆಯಲ್ಲಿದ್ದ ದಿನೇಶ್ ಕಾರ್ತಿಕ್‌ಗೆ ಹಾರ್ದಿಕ್ ಪಾಂಡ್ಯ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಿವೆ.

ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ, ಡಿಕೆ ಅಂಕಿಅಂಶ

ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ, ಡಿಕೆ ಅಂಕಿಅಂಶ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 8 ಪಂದ್ಯಗಳನ್ನಾಡಿ 210 ರನ್ ಗಳಿಸಿದ್ದು, 1 ಅರ್ಧಶತಕವನ್ನು ಬಾರಿಸಿದ್ದರೆ, ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ 6 ಪಂದ್ಯಗಳನ್ನಾಡಿ 295 ರನ್ ಗಳಿಸಿ 3 ಬಾರಿ ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೇ ಹಾರ್ದಿಕ್ ಪಾಂಡ್ಯ 5 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಕೂಡ ಮಾಡಿದ್ದು, 4 ವಿಕೆಟ್‌ಗಳನ್ನೂ ಸಹ ಪಡೆದಿದ್ದಾರೆ.

ಔಟ್ ಮಾಡಿ ಪೊಲಾರ್ಡ್ ಮುತ್ತಿಟ್ಟ ಕೃನಾಲ್ ಪಾಂಡ್ಯ !! | Oneindia Kannada
ಹಾರ್ದಿಕ್ ಎದುರು ಡಿಕೆಗೆ ಅವಕಾಶ ಏಕೆ ಕಷ್ಟ?

ಹಾರ್ದಿಕ್ ಎದುರು ಡಿಕೆಗೆ ಅವಕಾಶ ಏಕೆ ಕಷ್ಟ?

ಹಾರ್ದಿಕ್ ಪಾಂಡ್ಯ ದಿನೇಶ್ ಕಾರ್ತಿಕ್ ಭಾರತ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಅಡ್ಡಿಯಾಗಲು ಕಾರಣ ಹಾರ್ದಿಕ್ ಓರ್ವ ಆಲ್‌ರೌಂಡರ್ ಆಗಿರುವುದು. ಹೌದು, ತಂಡಕ್ಕೆ ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಆಲ್‌ರೌಂಡರ್ ಅಗತ್ಯವಿದ್ದು, ಸದ್ಯ ಬೌಲಿಂಗ್ ಕೂಡ ಮಾಡುತ್ತಿರುವ ಹಾರ್ದಿಕ್ ಪಾಂಡ್ಯಗೆ ಆಯ್ಕೆಗಾರರು ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ. ಹಾಗೂ ತಂಡದಲ್ಲಿ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಇಬ್ಬರು ವಿಕೆಟ್ ಕೀಪರ್‌ಗಳು ಇರಲಿದ್ದು, ಮೂರನೇ ವಿಕೆಟ್ ಕೀಪರ್ ಆಯ್ಕೆಗೆ ಆಯ್ಕೆಗಾರರು ಕೈಹಾಕುವುದು ಅನುಮಾನ ಎನ್ನಬಹುದು.

Story first published: Monday, April 25, 2022, 14:36 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X