ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!

IPL 2022: Do Or Die Match To RCB Against Gujarat Titans

ಐಪಿಎಲ್ 2022ರ 15ನೇ ಋತುವಿನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (ಆರ್‌ಸಿಬಿ vs ಜಿಟಿ) ಮುಖಾಮುಖಿಯಾಗಲಿವೆ. ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಗುಜರಾತ್ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಆರ್‌ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಅದರಲ್ಲೂ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವ ಮೂಲಕ ಇದೀಗ ಆರ್‌ಸಿಬಿ ಒತ್ತಡಕ್ಕೆ ಸಿಲುಕಿದೆ. ಏಕೆಂದರೆ ಪ್ಲೇಆಫ್ ಪ್ರವೇಶಿಸಲು ಗುಜರಾತ್ ಟೈಟನ್ಸ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಬಳಗ ಗೆಲ್ಲಲೇಬೇಕಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಬಲಿಷ್ಠ ಹನ್ನೊಂದರ ಬಳಗವನ್ನು ಕಣಕ್ಕಿಳಿಸಬೇಕಿದೆ.

IPL 2022: RCB vs GT: ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಹಾರ್ದಿಕ್, ಮ್ಯಾಕ್ಸ್‌ವೆಲ್IPL 2022: RCB vs GT: ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಹಾರ್ದಿಕ್, ಮ್ಯಾಕ್ಸ್‌ವೆಲ್

ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ದುಬಾರಿಯಾಗಿದ್ದರು. ಅದರಲ್ಲೂ ಜೋಶ್ ಹೆಝಲ್‌ವುಡ್ ಹಾಗೂ ಮೊಹಮ್ಮದ್ ಸಿರಾಜ್ ಕೇವಲ 6 ಓವರ್‌ಗಳಲ್ಲಿ 100 ರನ್ ಬಿಟ್ಟುಕೊಟ್ಟಿದ್ದು ದುಬಾರಿಯಾಯಿತು ಮತ್ತು ಪಂದ್ಯ ಕೈತಪ್ಪಿ ಹೋಯಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಇವರಿಬ್ಬರಲ್ಲಿ ಒಬ್ಬರನ್ನು ಆರ್‌ಸಿಬಿ ತಂಡ ಕೈಬಿಡುವ ಸಾಧ್ಯತೆಯಿದೆ.

ಮೊಹಮ್ಮದ್ ಸಿರಾಜ್ ಕಳಪೆ ಪ್ರದರ್ಶನ

ಮೊಹಮ್ಮದ್ ಸಿರಾಜ್ ಕಳಪೆ ಪ್ರದರ್ಶನ

ಅದರಲ್ಲೂ ಮೊಹಮ್ಮದ್ ಸಿರಾಜ್ ತಂಡದಿಂದ ಹೊರಬೀಳಬಹುದು. ಏಕೆಂದರೆ ಪಂಜಾಬ್ ಕಿಂಗ್‌ ವಿರುದ್ಧ ಸಿರಾಜ್ 2 ಒವರ್‌ಗಳಲ್ಲಿ 36 ರನ್ ನೀಡಿದ್ದರು. ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಕಡೆಯಿಂದ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ಸಹ ಮೂಡಿಬಂದಿಲ್ಲ.

ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಕೆಟ್ಟ ಸೋಲನ್ನು ಎದುರಿಸಬೇಕಾಯಿತು. ಇದರಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಗಿತ್ತು. ಆದರೆ ವಿರಾಟ್ ಕೊಹ್ಲಿ ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು ಎನ್ನುವುದು ಗಮನಾರ್ಹ.

ಕೊಹ್ಲಿಯಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷೆ

ಕೊಹ್ಲಿಯಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷೆ

ಇನ್ನು ಪಂಜಾಬ್ ವಿರುದ್ಧ ಉತ್ತಮ ಲಯ ಕಂಡುಕೊಳ್ಳುತ್ತಿರುವಾಗಲೇ ರಬಾಡಗೆ ವಿಕೆಟ್ ಒಪ್ಪಿಸಿದರು. ಇಂದಿನ ಪಂದ್ಯದಲ್ಲಿ ಕೊಹ್ಲಿಯಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.

ಬೆಂಗಳೂರಿಗೆ ದೊಡ್ಡ ಸಮಸ್ಯೆ ಎಂದರೆ ಮೊಹಮ್ಮದ್ ಸಿರಾಜ್ ಫಾರ್ಮ್. ಈ ವೇಗದ ಬೌಲರ್ ಋತುವಿನ ಟೂರ್ನಿಯುದ್ದಕ್ಕೂ ನಿರಾಸೆ ಮೂಡಿಸಿದ್ದಾರೆ. ಇದರ ಹೊರತಾಗಿಯೂ ಪ್ರತಿ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಲಾಗಿದ್ದು, ಈ ಕೊನೆಯ ಪಂದ್ಯದಲ್ಲೂ ಅದೇ ಸ್ಥಿತಿ ಮುಂದುವರಿಯಲಿದೆಯೇ ಕಾದು ನೋಡಬೇಕಿದೆ.

Breaking: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್ ಕೇಟಿ ಮಾರ್ಟಿನ್

ಪ್ರತಿ ಓವರ್‌ಗೆ 9.82 ಸರಾಸರಿಯಲ್ಲಿ 442 ರನ್‌ ಬಿಟ್ಟುಕೊಟ್ಟ ಸಿರಾಜ್

ಪ್ರತಿ ಓವರ್‌ಗೆ 9.82 ಸರಾಸರಿಯಲ್ಲಿ 442 ರನ್‌ ಬಿಟ್ಟುಕೊಟ್ಟ ಸಿರಾಜ್

ಕಳೆದ 13 ಪಂದ್ಯಗಳಲ್ಲಿ ಸಿರಾಜ್ ಒಟ್ಟು 270 ಎಸೆತಗಳನ್ನು ಎಸೆದಿದ್ದು, ಈ ವೇಳೆ ನೀಡಿರುವುದು ಬರೋಬ್ಬರಿ 442 ರನ್‌ಗಳು. ಅಂದರೆ ಪ್ರತಿ ಓವರ್‌ಗೆ 9.82 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು ಕೇವಲ 8 ವಿಕೆಟ್ ಮಾತ್ರ ಪಡೆದಿದ್ದಾರೆ. ಇನ್ನು ಕಳೆದ ಸೀಸನ್‌ನಲ್ಲಿ ಮೊಹಮ್ಮದ್ ಸಿರಾಜ್ ನೀಡಿದ್ದು ಪ್ರತಿ ಓವರ್‌ಗೆ ಕೇವಲ 6.78 ಮಾತ್ರವಾಗಿತ್ತು. ಆದರೆ ಈ ಬಾರಿ ಆರ್‌ಸಿಬಿ ವೇಗಿ ಫಾರ್ಮ್ ಕಳೆದುಕೊಂಡಿದ್ದಾರೆ.

ಅದರಲ್ಲೂ ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇದೀಗ ಗುಜರಾತ್ ಟೈಟನ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಸಿರಾಜ್ ಅವರನ್ನು ಕೈ ಬಿಡುವ ಸಾಧ್ಯತೆಯಿದ್ದು, ಅವರ ಬದಲಿಗೆ ಸಿದ್ದಾರ್ಥ್ ಕೌಲ್ ಅಥವಾ ಆಕಾಶ್ ದೀಪ್‌ಗೆ ಅವಕಾಶ ನೀಡಬಹುದು.

Umran Malik ಭಾರತಕ್ಕಿಂತ ಪಾಕಿಸ್ತಾನದಲ್ಲಿದ್ದಿದ್ರೆ ಎಂಥ ಅದೃಷ್ಟ ಒಲಿಯುತ್ತಿತ್ತು ಗೊತ್ತಾ? | Oneindia Kannada
ಗುಜರಾತ್ ಟೈಟನ್ಸ್ ಆರ್‌ಸಿಬಿ ಆಡುವ ಹನ್ನೊಂದರ ಬಳಗ

ಗುಜರಾತ್ ಟೈಟನ್ಸ್ ಆರ್‌ಸಿಬಿ ಆಡುವ ಹನ್ನೊಂದರ ಬಳಗ

ಒಂದು ವೇಳೆ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ತಂಡ ಸೋತರೆ, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಬಹುದು. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್‌ನಲ್ಲಿ ನಾಲ್ಕನೇ ಸ್ನಾನಕ್ಕೇರುವ ತವಕದಲ್ಲಿ ಆರ್‌ಸಿಬಿ ಇದೆ. ಹಾಗಾಗಿ ಆರ್‌ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮಾಕ್ಸ್‌ವೆಲ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಜೋಶ್ ಹೆಝಲ್‌ವುಡ್, ಮೊಹಮ್ಮದ್ ಸಿರಾಜ್/ ಆಕಾಶ್ ದೀಪ್

Story first published: Thursday, May 19, 2022, 19:09 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X