ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಪ್ಲೇಆಫ್‌ಗಳಲ್ಲಿ ಕಳಪೆ ದಾಖಲೆ ಮುಂದುವರೆಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಆದರೆ ಐಪಿಎಲ್ 2022ರ ಪ್ಲೇಆಫ್‌ನಲ್ಲಿ ಬುಧವಾರ ನಡೆದ ಐಪಿಎಲ್ 2022 ಎಲಿಮಿನೇಟರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 24 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ಪ್ಲೇಆಫ್‌ನಲ್ಲಿ ತನ್ನ ಕಳಪೆ ದಾಖಲೆಯನ್ನು ಮುಂದುವರೆಸಿದರು.

LSG ತಂಡವನ್ನು ಎಲಿಮಿನೇಟ್ ಮಾಡಿದ RCB | Oneindia Kannada

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿಯ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಎಲ್ಲಾ ಐಪಿಎಲ್ ಪ್ಲೇಆಫ್‌ಗಳಲ್ಲಿ 27.60 ಸರಾಸರಿಯಲ್ಲಿ ಕೇವಲ 276 ರನ್ ಗಳಿಸಿದ್ದರು. ಅವರು ಲೀಗ್ ಹಂತದಲ್ಲಿ ಕಳಪೆ ಪ್ರದರ್ಶನ ಹೊಂದಿದ್ದರು. ಆದರೆ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಆಡಿದರು.

ವಿರಾಟ್ ಕೊಹ್ಲಿ ಮತ್ತೆ ಕಳಪೆ ಬ್ಯಾಟಿಂಗ್

ವಿರಾಟ್ ಕೊಹ್ಲಿ ಮತ್ತೆ ಕಳಪೆ ಬ್ಯಾಟಿಂಗ್

ಪ್ರಸಕ್ತ ಋತುವಿನ ಅಂತಿಮ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ ಸಹಾಯದಿಂದ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಿದ ನಂತರ ವಿರಾಟ್ ಕೊಹ್ಲಿ ಮತ್ತೆ ಕಳಪೆ ಬ್ಯಾಟಿಂಗ್ ಮುಂದುವರೆಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ಬಹಳಷ್ಟು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಇನ್ನಿಂಗ್ಸ್ ಹೊರತುಪಡಿಸಿ ಬಹುತೇಕ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

25 ರನ್‌ಗಳಿಗೆ ಕೊಹ್ಲಿ ಪೆವಿಲಿಯನ್ ದಾರಿ

25 ರನ್‌ಗಳಿಗೆ ಕೊಹ್ಲಿ ಪೆವಿಲಿಯನ್ ದಾರಿ

ಇದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಗೋಲ್ಡನ್ ಡಕ್‌ಗೆ ಔಟಾದರು. ಆದರೆ ವಿರಾಟ್ ಕೊಹ್ಲಿ ಆರಂಭದಲ್ಲಿ ಉತ್ತಮವಾಗಿ ಆಡಲು ಪ್ರಯತ್ನಪಟ್ಟರು. ಆದರೆ 104.16 ರ ಸ್ಟ್ರೈಕ್ ರೇಟ್‌ನಲ್ಲಿ 25 ರನ್‌ಗಳಿಗೆ ಅವರ ಪೆವಿಲಿಯನ್ ದಾರಿಯನ್ನು ಅವೇಶ್ ಖಾನ್‌ ತೋರಿಸಿದರು.

2021 ಮತ್ತು 2020 ರಲ್ಲಿ ಕಳಪೆ ಪ್ರದರ್ಶನ

2021 ಮತ್ತು 2020 ರಲ್ಲಿ ಕಳಪೆ ಪ್ರದರ್ಶನ

ಆರ್‌ಸಿಬಿ 2021 ಮತ್ತು 2020 ರಲ್ಲಿ ಎಲಿಮಿನೇಟರ್‌ಗಳಲ್ಲಿ ಸೋತಿತ್ತು. ಕಳೆದ ವರ್ಷ, ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್‌ಗಳಿಂದ ಗೆದ್ದಾಗ, ಅಂತಿಮವಾಗಿ ವಿರಾಟ್ ಕೊಹ್ಲಿ 39 (33 ಎಸೆತಗಳು) ಗೆ ಔಟಾದರು ಮತ್ತು ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್‌ಗೆ ಪ್ರವೇಶಿಸಿದರು.

2020ರಲ್ಲಿ ಆರ್‌ಸಿಬಿ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಸೋತರೂ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್‌ನಲ್ಲಿ, ವಿರಾಟ್ ಕೊಹ್ಲಿಯನ್ನು ಜೇಸನ್ ಹೋಲ್ಡರ್ 6 ರನ್‌ಗಳಿಗೆ ಔಟ್ ಮಾಡಿದರು. ಎಸ್‌ಆರ್‌ಎಚ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದಿತು. ಆದರೆ ಕ್ವಾಲಿಫೈಯರ್ 2 ಅನ್ನು ದಾಟಲು ವಿಫಲವಾಯಿತು.

ಯಶಸ್ವಿ ಬ್ಯಾಟರ್‌ನ ಬ್ಯಾಟ್‌ನಿಂದ ನಿರಾಶಾದಾಯಕ ಪ್ರದರ್ಶನ

ಯಶಸ್ವಿ ಬ್ಯಾಟರ್‌ನ ಬ್ಯಾಟ್‌ನಿಂದ ನಿರಾಶಾದಾಯಕ ಪ್ರದರ್ಶನ

ವಿರಾಟ್ ಕೊಹ್ಲಿ ಬುಧವಾರದ ಮೊದಲು 12 ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 2016ರಲ್ಲಿ ಫೈನಲ್ ಪಂದ್ಯ ಸೇರಿದಂತೆ, ಆದರೆ ಕೇವಲ 2 ಅರ್ಧ ಶತಕಗಳನ್ನು ಗಳಿಸಿದ್ದರು. ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟರ್‌ನ ಬ್ಯಾಟ್‌ನಿಂದ ಇದು ನಿರಾಶಾದಾಯಕ ಪ್ರದರ್ಶನವಾಗಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಅಂತಹ ಭರವಸೆ ಮತ್ತು ಸಾಮರ್ಥ್ಯವನ್ನು ತೋರಿಸಿದ್ದರು.

Story first published: Thursday, May 26, 2022, 10:33 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X