ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಫೈನಲ್ ಭಾನುವಾರ (ಮೇ 29) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು 2008ರ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆಯಲಿದೆ.
ಬಟ್ಲರ್ ಈ ಋತುವಿನಲ್ಲಿ 16 ಪಂದ್ಯಗಳಿಂದ 58.86 ಸರಾಸರಿಯಲ್ಲಿ ನಾಲ್ಕು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 824 ರನ್ಗಳೊಂದಿಗೆ IPL 2022ರ ಆರೆಂಜ್ ಕ್ಯಾಪ್ ಅನ್ನು ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ. ಕ್ವಾಲಿಫೈಯರ್ 2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದರು.
IPL 2022 ಫೈನಲ್; GT vs RR ಪಂದ್ಯದ ಹವಾಮಾನ ವರದಿ; ಮಳೆ ಬಂದು ರದ್ದಾದರೆ ಯಾರು ಚಾಂಪಿಯನ್?
ರಾಜಸ್ಥಾನ ರಾಯಲ್ಸ್ನ ಯಶಸ್ವಿ ಬ್ಯಾಟರ್ ಜೋಸ್ ಬಟ್ಲರ್ ಗುಜರಾತ್ ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ ವಿರುದ್ಧ ತೀವ್ರ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ ಮತ್ತು ಭಾನುವಾರದಂದು ಅಹಮದಾಬಾದ್ನಲ್ಲಿ ನಡೆಯುವ ಐಪಿಎಲ್ 2022ರ ಫೈನಲ್ನಲ್ಲಿ ರನ್ ದರವನ್ನು ವೇಗಗೊಳಿಸಲು ಇತರ ಬೌಲರ್ಗಳನ್ನು ಟಾರ್ಗೆಟ್ ಮಾಡಬಹುದು ಎಂದಿದ್ದಾರೆ.