ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 ಫೈನಲ್: ಟಾಸ್ ನಂತರ ಮಾಜಿ ಕೋಚ್ ರವಿಶಾಸ್ತ್ರಿಗೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

IPL 2022 Final: What Did Hardik Pandya Say To Former Coach Ravi Shastri After The Toss?

ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಹೀಗಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು.

IPL 2022 FINAL: ಟಾಸ್‌ ಗೆದ್ದ ರಾಜಸ್ತಾನ್ ರಾಯಲ್ಸ್ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11IPL 2022 FINAL: ಟಾಸ್‌ ಗೆದ್ದ ರಾಜಸ್ತಾನ್ ರಾಯಲ್ಸ್ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11

ರಾಜಸ್ಥಾನ ರಾಯಲ್ಸ್ 14 ವರ್ಷಗಳ ನಂತರ ತಮ್ಮ ಮೊದಲ ಐಪಿಎಲ್ ಫೈನಲ್ ಅನ್ನು ಆಡುತ್ತಿದ್ದು, ಐಪಿಎಲ್‌ನ ಹೊಸ ತಂಡವಾದ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಲು ಸೆಣಸಾಡುತ್ತಿದೆ.

ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ ರಾಯಲ್ಸ್ IPL 2022ರಲ್ಲಿ ಎರಡು ಅತ್ಯಂತ ಬಲಿಷ್ಠವಾದ ತಂಡಗಳಾಗಿವೆ. ಗುಜರಾತ್ ತಂಡ ಲೀಗ್‌ನಲ್ಲಿ 10 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಲೀಗ್ ಹಂತವನ್ನು ಪೂರ್ಣಗೊಳಿಸಿದರೆ, ರಾಜಸ್ಥಾನ ತಂಡ ಲೀಗ್ ಹಂತದಲ್ಲಿ ಒಂಬತ್ತು ಗೆಲುವುಗಳೊಂದಿಗೆ ಎರಡನೇ ಸ್ಥಾನ ಪಡೆದ ತಂಡವಾಗಿದೆ.

IPL 2022: 8 ವರ್ಷಗಳ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದ ಫೈನಲ್ ಪಂದ್ಯIPL 2022: 8 ವರ್ಷಗಳ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದ ಫೈನಲ್ ಪಂದ್ಯ

ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ನಿರೂಪಕರಾಗಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ ಫೈನಲ್ ಪಂದ್ಯದ ಟಾಸ್‌ನಲ್ಲಿ, ಹಾರ್ದಿಕ್ ಪಾಂಡ್ಯ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ವ್ಯಕ್ತಿಯೊಂದಿಗೆ ಉತ್ತಮ ಪುನರ್ಮಿಲನವನ್ನು ನಡೆಸಿದರು.

IPL 2022 Final: What Did Hardik Pandya Say To Former Coach Ravi Shastri After The Toss?

ಟಾಸ್ ಸೋತ ನಂತರ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ನಿರೂಪಕನಾಗಿದ್ದ ರವಿಶಾಸ್ತ್ರಿಗೆ ಹೇಳಿದ್ದೇನೆಂದರೆ, ""ನಾವು ಮೊದಲು ಬೌಲಿಂಗ್ ಮಾಡುತ್ತಿದ್ದೆವು. ಮೈದಾನದಲ್ಲಿ ಅಧಿಕ ಜನರು ಬಂದು ನಮ್ಮನ್ನು ಬೆಂಬಲಿಸುವುದನ್ನು ನೋಡುವುದು ತುಂಬಾ ಅಗಾಧವಾಗಿದೆ. ನಾವು ಈ ಆಟವನ್ನು ಸಾಧ್ಯವಾದಷ್ಟು ಸಾಮಾನ್ಯವೆಂದು ಪರಿಗಣಿಸಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತೇವೆ. ಹುಡುಗರು ಕೂಲ್ ಆಗಿದ್ದಾರೆ. ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಅಲ್ಜಾರಿ ಜೋಸೆಫ್‌ಬದಲಿಗೆ ಲಾಕಿ ಫರ್ಗುಸನ್ ಆಡುತ್ತಾರೆ ಎಂದರು.

ನಂತರ ಹಾರ್ದಿಕ್ ಪಾಂಡ್ಯ ಅವರು ಹೊರಡುತ್ತಿರುವಾಗ, ಪಾಂಡ್ಯ ಮುಗುಳ್ನಕ್ಕು ರವಿಶಾಸ್ತ್ರಿಗೆ ಹೇಳಿದ್ದು ಹೀಗೆ, "ನಿಮ್ಮನ್ನು ಇಲ್ಲಿ ನೋಡುತ್ತಿರುವು ಸಂತೋಷವಾಗಿದೆ," ಎಂದರು. ಏಕೆಂದರೆ ಈ ಹಿಂದೆ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಅಹಮದಾಬಾದ್‌ನ ಸ್ಟೇಡಿಯಂನಲ್ಲಿ ನಡೆದಿದ್ದ ಕ್ವಾಲಿಫೈಯರ್ 2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್‌ನಲ್ಲಿ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, "ಇದು ಈಗಾಗಲೇ ಇಲ್ಲಿ ಆಡಿರುವ ಪಿಚ್ ಆಗಿದ್ದು, ನಾವು ಇಲ್ಲಿ ಎರಡನೇ ಪಂದ್ಯವನ್ನು ಆಡುತ್ತಿದ್ದೇವೆ ಮತ್ತು ಶುಷ್ಕವಾಗಿ ಕಾಣುತ್ತಿದೆ. ಈ ಅಸಾಧಾರಣ ಪ್ರೇಕ್ಷಕರ ಮುಂದೆ ಐಪಿಎಲ್ ಫೈನಲ್ ಆಡಲು ಪ್ರತಿಯೊಬ್ಬರೂ ತುಂಬಾ ಧನಾತ್ಮಕ ಮತ್ತು ಉತ್ಸುಕರಾಗಿದ್ದಾರೆ. ಹಿಂದಿನ ಪಂದ್ಯದ ತಂಡವನ್ನೇ ಕಣಕ್ಕಿಳಿಸಲಾಗುತ್ತಿದೆ," ಎಂದರು.

Story first published: Sunday, May 29, 2022, 21:05 [IST]
Other articles published on May 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X