ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಈ ಐದು ಶ್ರೇಷ್ಠ ಆಟಗಾರರು ಈ ಬಾರಿ ಹರಾಜಾಗುವುದೇ ಅನುಮಾನ!

IPL 2022: Five major cricketers who could go unsold at IPL mega auction
ಐ ಪಿ ಎಲ್ ಪಂದ್ಯದಲ್ಲಿ ಬದಲಾವಣೆ ತಂದ ಬಿಸಿಸಿಐ !! | Oneindia Kannada

ಐಪಿಎಲ್ 2022ರ ಆವೃತ್ತಿಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ನಡೆದ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಕೆಲ ಪ್ರಮುಖ ಆಟಗಾರರನ್ನು ಆಯಾಯ ತಂಡಗಳು ರೀಟೈನ್ ಮಾಡಿಕೊಂಡಿದೆ. ಇದೀಗ ಮಹಾ ಹರಾಜಿನ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿದೆ. ಹರಾಜು ಪ್ರಕ್ರಿಯೆಗೆ ಒಳಗಾಗಲಿರುವ ಆಟಗಾರರಲ್ಲಿ ಕೆಲ ಆಟಗಾರರು ದೊಡ್ಡ ಮೊತ್ತವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಆದರೆ ಕೆಲ ಪ್ರಮುಖ ಆಟಗಾರರು ಈ ಬಾರಿಯ ಮಹಾ ಹರಾಜಿನಲ್ಲಿ ಯಾವ ತಂಡಗಳಿಗೂ ಬೇಡವಾಗದೆ ಉಳಿಯುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ ಹಾಗೂ ವಿಶ್ವ ಕ್ರಿಕೆಟ್‌ನಲ್ಲಿ ಭಾರೀ ಛಾಪು ಮೂಡಿಸಿರುವ ಈ ಆಟಗಾರರು ಹರಾಜಾಗದೆ ಉಳಿದರೆ ಅಭಿಮಾನಿಗಳಿಗೂ ನಿರಾಸೆಯಾಗಲಿದೆ. ಹಾಗಾದರೆ ಈ ಬಾರಿಯ ಐಪಿಎಲ್ ಮಹಾ ಹರಾಜಿನಲ್ಲಿ ಹರಾಜಾಗದೆ ಉಳಿಯುವ ಸಾಧ್ಯತೆಯಿರುವ ಐದು ಸ್ಟಾರ್ ಕ್ರಿಕೆಟಿಗರು ಯಾರು? ಮುಂದೆ ಓದಿ..

ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!

ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್

ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿ ನೀರಸ ಪ್ರದರ್ಶನ ನೀಡಿದ್ದ ಚುಟುಕು ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಅವರನ್ನು ಈ ಬಾರಿ ಫ್ರಾಂಚೈಸಿ ಬಿಡುಗಡೆಗೊಳಿಸಿದೆ. 2021ರ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಆಡಿದ 10 ಪಂದ್ಯಗಳಲ್ಲಿ 193 ರನ್ ಮಾತ್ರವೇ ಗಳಿಸಿದ್ದಾರೆ. ಒಂದೇ ಒಂದು ಅರ್ಧ ಶತಕ ಕೂಡ ಈ ದೈತ್ಯ ಆಟಗಾರನಿಂದ ಬಂದಿಲ್ಲ. ಅಲ್ಲದೆ ಸ್ಟ್ರೈಕ್‌ರೇಟ್ ಕೂಡ 125ರಷ್ಟಕ್ಕೆ ಇಳಿದಿದೆ. ಕ್ರಿಸ್ ಗೇಲ್ ಅವರಂತಾ ಆಟಗಾರನಿಗೆ ಇದು ಬಹಳ ಕಡಿಮೆ ಸ್ಟ್ರೈಕ್‌ರೇಟ್ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸಂಗತಿ. ಮತ್ತೊಂದೆಡೆ ಕ್ರಿಸ್ ಗೇಲ್ ಅವರ ನಿವೃತ್ತಿಯ ಬಗ್ಗೆಯೂ ಚರ್ಚೆಗಳು ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹರಾಜು ಪಟ್ಟಿಗೆ ಕ್ರಿಸ್ ಗೇಲ್ ಬರುವ ಬಗ್ಗೆಯೂ ಸ್ಪಷ್ಟತೆಯಿಲ್ಲ. ಆದರೆ ಹರಾಜಿಗೆ ಪ್ರವೇಶ ಪಡೆದುಕೊಂಡರೂ ಜಮೈಕಾದ ಈ ಆಟಗಾರನನ್ನು ಯಾವುದೇ ತಂಡ ಖರೀದಿಸುವುದು ಅನುಮಾನ.

ಅನುಭವಿ ಕ್ರಿಕೆಟರ್ ಹರ್ಭಜನ್ ಸಿಂಗ್

ಅನುಭವಿ ಕ್ರಿಕೆಟರ್ ಹರ್ಭಜನ್ ಸಿಂಗ್

ಹಿರಿಯ ಆಟಗಾರರಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್‌ನಲ್ಲಿ ಯಾವುದೇ ಫ್ರಾಂಚೈಸಿ ಪಾಲಾಗುವುದು ಕೂಡ ಅನುಮಾನ. ಕಳೆದ ವರ್ಷದ ಹರಾಜಿನಲ್ಲಿಯೇ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಕೊನೇಯ ಕ್ಷಣದಲ್ಲಿತೆಕ್ಕೆಗೆ ಹಾಕಿಕೊಂಡಿತ್ತು. ಇನ್ನು ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೆ 9ರಷ್ಟು ಎಕಾನಮಿಯಲ್ಲಿ ರನ್ ನೀಡಿದ್ದರು. ಹೀಗಾಗಿ ಯಾವುದೇ ತಂಡಗಳು ಕೂಡ ಹರ್ಭಜನ್ ಸಿಂಗ್ ಅವರನ್ನು ಸೇರ್ಪಡೆಗೊಳಿಸಲು ಮುಂದಾಗುವ ಸಾಧ್ಯತೆ ಇಲ್ಲ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರ ಸ್ಥಂಭವಾಗಿ ನೆರವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ರಾಯುಡು ಸಿಎಸ್‌ಗೆ ತಂಡಕ್ಕೆ ದೊಡ್ಡ ಬಲವಾಗಿದ್ದರು. 2018ರಲ್ಲಿ ನೀಡಿದ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದಲ್ಲಿ ಮತ್ತೊಮ್ಮೆ ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಕಳೆದ ಆವೃತ್ತಿಯಲ್ಲಿ ಅಂಬಾಟಿ ರಾಯುಡು 16 ಪಂದ್ಯಗಳಲ್ಲಿ 257 ರನ್‌ಗಳಿಸಿದ್ದರು. ಎರಡು ಅರ್ಧ ಶತಕ ಕೂಡ ಭಾರಿಸಿದ್ದರು. ಅವರ ಸ್ಟ್ರೈಕ್‌ರೇಟ್ 151ರಷ್ಟಿದೆ. ಈ ಅಂಕಿ ಅಂಶಗಳು ಖಂಡಿತಾ ಕಳಪೆಯಲ್ಲ. ಆದರೆ ರಾಯುಡು ದೇಶೀಯ ಕ್ರಿಕೆಟ್‌ನಲ್ಲಿಯೂ ಕೂಡ ಹೆಚ್ಚಾಗಿ ಭಾಗವಹಿಸಿಲ್ಲ. ಹೀಗಾಗಿ ಐಪಿಎಲ್ ಪ್ರಯಾಣ ಕೂಡ ಮುಕ್ತಾಯವಾಗುವ ಸಾಧ್ಯತೆಯಿದೆ. ಆದರೆ ಸಿಎಸ್‌ಕೆ ಫ್ರಾಂಚೈಸಿ ರಾಯುಡು ಅವರನ್ನು ತಂಡಕ್ಕೆ ಮರುಸೇರ್ಪಡೆಗೊಳಿಸುವ ನಿರ್ಧಾರ ಮಾಡಿದರೆ ಮಾತ್ರ ಈ ಅನುಭವಿ ಆಟಗಾರನಿಗೆ ಮತ್ತೊಂದು ಅವಕಾಶ ದೊರೆಯಬಹುದು. ಆದರೆ ಮೂಲ ದರಕ್ಕಿಂತ ಹೆಚ್ಚಿನ ಮೊತ್ತ ಪಡೆಯುವ ಸಾಧ್ಯತೆಯಿಲ್ಲ.

ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ

ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ

ಡ್ವೇಯ್ನ್ ಬ್ರಾವೋ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ. ಎಂಎಸ್ ಧೋನಿಯಂತೆಯೇ ಸಿಎಸ್‌ಕೆ ಫ್ರಾಂಚೈಸಿಯ ನಂಬಿಕರ್ಹ ಆಟಗಾರ ಬ್ರಾವೋ. ಆಲ್‌ರೌಂಡರ್ ಆಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಬ್ರಾವೋ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ ಬ್ರಾವೋ ಎರಡು ಪ್ರಮುಖ ಕ್ರಿಕೆಟ್ ಲೀಗ್‌ ಟೂರ್ನಿಗಳಲ್ಲಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೈಂಟ್ ಕಿಟ್ಸ್ & ನೆವೀಸ್ ಪೇಟ್ರಿಯಾಟ್ಸ್ ತಂಡದ ಭಾಗವಾಗಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಕಳಪೆ ಪ್ರದರ್ಶನ ನೀಡಿದ ನಂತರ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಫ್ರಾಶನ್ ಲೋಕದ ಮೇಲೆ ಚಿತ್ತ ನೆಡಲು ಬಯಸಿರುವ ಬ್ರಾವೋ ಅವರ ಐಪಿಎಲ್ ಪ್ರಯಾಣವೂ ಅಂತ್ಯವಾಗುವ ಸಾಧ್ಯತೆಯಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ 11 ಪಂದ್ಯಗಳನ್ನು ಆಡಿರುವ ಬ್ರಾವೋ 3 ಇನ್ನಿಂಗ್ಸ್‌ಗಳಲ್ಲಿ 47 ರನ್ ಬಾರಿಸಿದ್ದಾರೆ. ಅಲ್ಲದೆ 14 ವಿಕೆಟ್ ಸಂಪಾದಿಸಿದ್ದಾರೆ.

ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ

ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಡುಗಡೆಯಾಗಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಇಶಾಂತ್ ಕೇವಲ 3 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದು ಒಂದು ವಿಕೆಟ್ ಪಾತ್ರವೇ ಸಂಪಾದಿಸಿದ್ದರು. ಅನುಭವಿ ಆಟಗಾರನಾಗಿದ್ದರೂ ಟಿ20 ಮಾದರಿಯಲ್ಲಿ ಇಶಾಂತ್ ಪರಿಣಾಮಕಾರಿ ಬೌಲರ್ ಎನಿಸುತ್ತಿಲ್ಲ. ಅಲ್ಲದೆ ಗಾಯದ ಸಮಸ್ಯೆ ಕೂಡ ಇಶಾಂತ್‌ಗೆ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಫ್ರಾಂಚೈಸಿಗಳು ಇಶಾಂತ್ ಶರ್ಮಾ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆ ಕಡಿಮೆಯಿದೆ.

Story first published: Tuesday, December 7, 2021, 14:47 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X