ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಅತ್ಯುತ್ತಮ ಪ್ರದರ್ಶನಕ್ಕೆ ಆತನ ನಾಯಕತ್ವವೇ ಕಾರಣ ಎಂದ ಸುನಿಲ್ ಗವಾಸ್ಕರ್

IPL 2022: Gavaskar praises Hardik Pandya said Captaincy brought out best of him

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್ ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ ಜಿಟಿ. ಮಂಗಳವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಪಡೆ ಸುಲಭ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಜಿಟಿ ತಂಡದ ಈ ಪ್ರದರ್ಶನದ ನಂತರ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪಂದ್ಯದ ಮುಕ್ತಾಯದ ಬಳಿಕ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್ ಜಿಟಿ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ನಾಯಕನಾಗಿ ಆತನ ಪರಿಶ್ರಮಕ್ಕೆ ಹ್ಯಾಟ್ಸ್‌ಆಫ್. ಆತ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ಈ ಐಪಿಎಲ್‌ಗೆ ಮುನ್ನ ಹೆಚ್ಚು ಕ್ರಿಕೆಟ್ ಆಡುರಲಿಲ್ಲ. ಆದರೆ ಈಗ ಆತ ತನ್ನ ಬ್ಯಾಟಿಂಗ್‌ನಲ್ಲಿ ತೋರಿಸುತ್ತಿರುವ ಶಿಸ್ತನ್ನು ಗಮನಿಸಿ. ಆತ ಪವರ್‌ಪ್ಲೇನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಫೀಲ್ಡಿಂಗ್‌ನ ನಿರ್ಬಂಧಗಳನ್ನು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆತ ಅತ್ಯುತ್ತಮವಾಗಿ ಅಂಗಳದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಗುಜರಾತ್ ಟೈಟನ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದ್ದು 18 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಈ ಮೂಲಕ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಅಲ್ಲದೆ ಲೀಗ್ ಹಂತದ ಅಂತ್ಯಕ್ಕೆ ಟಾಪ್-2 ತಂಡಗಳ ಪೈಕಿ ಒಂದಾಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಕ್ವಾಲಿಫೈಯರ್ ಪಂದ್ಯವನ್ನು ಆಡುವ ಅವಕಾಶ ದೊರೆಯಲಿದೆ.

ಇನ್ನು ಸುನಿಲ್ ಗವಾಸ್ಕರ್ ಹಾರ್ದಿಕ್ ಪಾಂಡ್ಯ ಬಗ್ಗೆ ಆಡಿದ ಮಾತುಗಳನ್ನು ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಕೂಡ ಬೆಂಬಲಿಸಿದ್ದಾರೆ. "ಹಾರ್ದಿಕ್ ಪಾಂಡ್ಯ ತಾನೊಬ್ಬ ಅತ್ಯುತ್ತಮ ಕ್ರಿಕೆಟರ್ ಎನಿಸಿಕೊಳ್ಳುವುದರ ಜೊತೆಗೆ ಉತ್ತಮ ನಾಯಕ ಎಂದು ಕೂಡ ಸಾಬೀತುಪಡಿಸಿದ್ದಾರೆ. ಎಲ್ಲಾ ವಿಭಾಗಗಳಲ್ಲಿಯೂ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಆತನ ಉತ್ಸಾಹ ಹಾಗೂ ಸಾಮರ್ಥ್ಯವನ್ನು ಅಂಕಪಟ್ಟಿಯಲ್ಲಿ ಪ್ರದರ್ಶಿಸಿದ್ದಾರೆ. ಅದನ್ನು ನಾನು ಇಷ್ಟಪಡುತ್ತೇನೆ" ಎಂದಿದ್ದಾರೆ ಆಸಿಸ್ ಮಾಜಿ ಕ್ರಿಕೆಟಿಗ.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ಹಾರ್ದಿಕ್ ಪಾಂಡ್ಯ ಬ್ಯಾಟರ್ ಆಗಿ ಈ ಬಾರಿಯ ಟೂರ್ನಿಯಲ್ಲಿ ಮಿಂಚಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ ಪಾಂಡ್ಯ 344 ರನ್‌ಗಳನ್ನು ಗಳಿಸಿದ್ದು 131.80 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಆವೃತ್ತಿಯಲ್ಲಿ ಪಾಂಡ್ಯ ಮೂರು ಅರ್ಧ ಶತಕ ಗಳಿಸಿದ್ದಾರೆ. ಈ ಮೂಲಕ ತಾನು ಮೂರು ವಿಭಾಗದಲ್ಲಿಯೂ ಎಷ್ಟು ಸಮರ್ಥ ಎಂಬುದನ್ನು ಸಾಬೀತುಪಡಿಸಿದ್ದಾರೆ.

IPL 2022: Gavaskar praises Hardik Pandya said Captaincy brought out best of him

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

Story first published: Thursday, May 12, 2022, 9:30 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X