ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Qualifier 1: GT vs RR: ಜೋಸ್ ಬಟ್ಲರ್ ವಿರುದ್ಧದ ಪ್ಲಾನ್ ರಿವೀಲ್ ಮಾಡಿದ ಮೊಹಮ್ಮದ್ ಶಮಿ

IPL 2022: GT vs RR Playoff: Mohammed Shami Reveals His Game Plan Against Jos Buttler

IPL 2022ರ 15ನೇ ಋತುವಿನ ಪ್ಲೇಆಫ್ ಪಂದ್ಯಗಳು ಮಂಗಳವಾರದಿಂದ (ಮೇ 24) ಆರಂಭವಾಗಲಿವೆ. ಕ್ವಾಲಿಫೈಯರ್ 1ರಲ್ಲಿ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ಮತ್ತು 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ. ಇದಕ್ಕೂ ಮುಂಚಿತವಾಗಿ ಆರ್‌ಆರ್‌ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ವಿರುದ್ಧ ಜಿಟಿ ತಂಡದ ವೇಗಿ ಮೊಹಮ್ಮದ್ ಶಮಿ ತನ್ನ ಕಾರ್ಯಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

ಮಂಗಳವಾರ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ಲೇಆಫ್‌ನ ಕ್ವಾಲಿಫೈಯರ್ 1ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಸೆಣಸಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್ ತಲುಪಲು ಕಾದಾಡಲಿವೆ. ಈಡನ್ ಗಾರ್ಡನ್ಸ್‌ನ ಪಿಚ್ ಪ್ರಾಥಮಿಕವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದ್ದರೂ ಸಹ ಕೋಲ್ಕತ್ತಾದ ಹವಾಮಾನವು ವೇಗಿಗಳಿಗೂ ಸಹಕರಿಸಲಿದೆ.

ನನ್ನ ಕೌಶಲ್ಯಗಳನ್ನು ನಂಬುತ್ತೇನೆ

ನನ್ನ ಕೌಶಲ್ಯಗಳನ್ನು ನಂಬುತ್ತೇನೆ

ಕಳೆದ ಕೆಲವು ದಿನಗಳಿಂದ ಸಂತೋಷದ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಜರಾತ್‌ನ ಪ್ರಮುಖ ವೇಗಿ ಮೊಹಮ್ಮದ್ ಶಮಿ ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆಯಲು ಬಯಸುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಮೊದಲು, ಗುಜರಾತ್ ಟೈಟನ್ಸ್ ವೇಗಿ ಐಪಿಎಲ್ 2022ರಲ್ಲಿ ಮೊದಲ ಬಾರಿಗೆ ಜೋಸ್ ಬಟ್ಲರ್ ವಿರುದ್ಧದ ಬೌಲಿಂಗ್ ಕಾರ್ಯ ಯೋಜನೆಯನ್ನು ಬಹಿರಂಗಪಡಿಸಿದರು.

"ಒಬ್ಬ ಆಟಗಾರನಾಗಿ, ಬೌಲರ್ ಆಗಿ, ಉತ್ತಮ ವಿಶ್ರಾಂತಿ ಮತ್ತು ಉತ್ತಮ ನಿದ್ರೆ ಮಾಡುತ್ತೇನೆ. ಯಾರು ಹೆಚ್ಚು ರನ್ ಗಳಿಸಿದವರು ಅಥವಾ ಉತ್ತಮ ಬ್ಯಾಟ್ಸ್‌ಮನ್ ಎಂದು ನಾನು ಯೋಚಿಸುವುದಿಲ್ಲ. ನೀವು ನಿಮ್ಮ ಬೌಲಿಂಗ್ ಕೌಶಲ್ಯದ ಮೇಲೆ ನಂಬಿಕೆಯಿಟ್ಟು ಆಡಬೇಕು ಮತ್ತು ಆ ನಂಬಿಕೆಯನ್ನು ಹೊಂದಿದ್ದೇನೆ. ನಾನು ಯಾವಾಗಲೂ ನನ್ನನ್ನು ನಂಬುತ್ತೇನೆ ಮತ್ತು ನಾನು ಯಾರ ಹೆಸರನ್ನು ನೋಡುವುದಿಲ್ಲ. ನಾನು ನನ್ನನ್ನು ಮತ್ತು ನನ್ನ ಕೌಶಲ್ಯಗಳನ್ನು ನಂಬುತ್ತೇನೆ," ಎಂದು ಕ್ವಾಲಿಫೈಯರ್ 1ಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಶಮಿ ಹೇಳಿದರು.

ಆರೆಂಜ್ ಕ್ಯಾಪ್ ಹೊಂದಿರುವ ಜೋಸ್ ಬಟ್ಲರ್ ವಿರುದ್ಧ ಬೌಲಿಂಗ್

ಆರೆಂಜ್ ಕ್ಯಾಪ್ ಹೊಂದಿರುವ ಜೋಸ್ ಬಟ್ಲರ್ ವಿರುದ್ಧ ಬೌಲಿಂಗ್

ಮೊಹಮ್ಮದ್ ಶಮಿ ಈ ಋತುವಿನಲ್ಲಿ ಗುಜರಾತ್‌ನ ಪ್ರಮುಖ ವಿಕೆಟ್ ಟೇಕರ್ ಆಗಿದ್ದು, ಇದುವರೆಗೆ 14 ಪಂದ್ಯಗಳಲ್ಲಿ 18 ವಿಕೆಟ್‌ಗಳೊಂದಿಗೆ ಆರೋಗ್ಯಕರ ಸ್ಟ್ರೈಕ್ ರೇಟ್ 17 ಮತ್ತು ಎಕಾನಮಿಯು 8ಕ್ಕಿಂತ ಕಡಿಮೆ ಇದೆ.

ಈ 18 ವಿಕೆಟ್‌ಗಳಲ್ಲಿ ಮೊಹಮ್ಮದ್ ಶಮಿ ಪವರ್‌ಪ್ಲೇನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಅವರು ಮುಂದಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಹೊಂದಿರುವ ಜೋಸ್ ಬಟ್ಲರ್ ವಿರುದ್ಧ ಬೌಲಿಂಗ್ ಮಾಡಲಿದ್ದಾರೆ. ಜೋಸ್ ಬಟ್ಲರ್ ಇದುವರೆಗಿನ ಪ್ರಸಕ್ತ ಋತುವಿನಲ್ಲಿ ಈಗಾಗಲೇ ಮೂರು ಶತಕಗಳನ್ನು ಗಳಿಸಿದ್ದಾರೆ. ಆದಾಗ್ಯೂ, ಜೋಸ್ ಬಟ್ಲರ್ ಕಳೆದ ಏಳು ಪಂದ್ಯಗಳಲ್ಲಿ ಫಾರ್ಮ್ ಅನ್ನು ಕಳೆದುಕೊಂಡಿದ್ದಾರೆ. ಅವರು ಮೊದಲ ಏಳು ಪಂದ್ಯಗಳಲ್ಲಿ 80 ಪ್ಲಸ್ ಸರಾಸರಿಯಲ್ಲಿ ರನ್ ಗಳಿಸಿದರೆ, ನಂತರ 20ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ.

ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಮಾಹಿತಿ

ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಮಾಹಿತಿ

ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ - ಕ್ವಾಲಿಫೈಯರ್ 1 ದಿನಾಂಕ ಮತ್ತು ಸಮಯ: ಮಂಗಳವಾರ, ಮೇ 24, 7:30 PM IST ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್‌ಸ್ಟಾರ್

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಆದರೆ ಕಳೆದ ಎರಡು ದಿನಗಳಲ್ಲಿ ಮಳೆ ಇರುವ ಕಾರಣ ಇದು ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಸಿಗುವ ನಿರೀಕ್ಷೆಯಿದೆ. ಈ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ಸಹಕಾರಿಯಾಗಿರಲಿದ್ದು ನಂತರ ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಮುಕ್ತವಾಗಿ ಆಡಬಹುದು. ಇನ್ನು ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಐಪಿಎಲ್ ಮಾದರಿಯಂತೆ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು ನಂತರ ಚೇಸಿಂಗ್ ಮಾಡುವ ನಿರ್ಧಾರವನ್ನು ಕಾಣಲಿದೆ

Ab de Villiers ಮಾತಿಗೆ RCB ಅಭಿಮಾನಿಗಳು ಫುಲ್ ಖುಷ್ | #cricket #ipl2022 | Oneindia Kannada
ಆಡುವ ಹನ್ನೊಂದರ ಸಂಭಾವ್ಯ ಬಳಗಗಳು

ಆಡುವ ಹನ್ನೊಂದರ ಸಂಭಾವ್ಯ ಬಳಗಗಳು

ಗುಜರಾತ್ ಟೈಟನ್ಸ್ ಸಂಭಾವ್ಯ ಆಡುವ ಬಳಗ: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ),ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್

Story first published: Tuesday, May 24, 2022, 9:19 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X