ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಟೂರ್ನಿಯ 12 ಬೆಸ್ಟ್ ಆಟಗಾರರನ್ನು ಹೆಸರಿಸಿದ ಹರ್ಭಜನ್; ಆರ್‌ಸಿಬಿಯ ಇಬ್ಬರಿಗೆ ಸ್ಥಾನ

IPL 2022: Harbhajan Singh picks 12 best players of the tournament and names Hardik Pandya as skipper

ಕಳೆದ ಮಾರ್ಚ್ ತಿಂಗಳಿನ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮೇ 29ರ ಭಾನುವಾರದಂದು ನಡೆದ ಫೈನಲ್ ಪಂದ್ಯದ ಮೂಲಕ ತೆರೆಬಿದ್ದಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡು ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿತು.

IPL 2022: ತಂಡದಲ್ಲಿದ್ದ ಈ ಐವರಿಗೆ ಸರಿಯಾದ ಅವಕಾಶ ನೀಡಿದ್ದರೆ ಮುಂಬೈ ಇಂಡಿಯನ್ಸ್ ಫ್ಲಾಪ್ ಆಗುತ್ತಿರಲಿಲ್ಲ!IPL 2022: ತಂಡದಲ್ಲಿದ್ದ ಈ ಐವರಿಗೆ ಸರಿಯಾದ ಅವಕಾಶ ನೀಡಿದ್ದರೆ ಮುಂಬೈ ಇಂಡಿಯನ್ಸ್ ಫ್ಲಾಪ್ ಆಗುತ್ತಿರಲಿಲ್ಲ!

ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಪರಿಪೂರ್ಣ ಪ್ರದರ್ಶನ ನೀಡಿದ ಕಾರಣ ಚಾಂಪಿಯನ್ ಆಗಿ ಹೊರಹೊಮ್ಮಿತು. ಅದರಲ್ಲಿಯೂ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಮಿಂಚಿ ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿ ಆರಂಭಕ್ಕೂ ಮುನ್ನ ತಮ್ಮ ಬೌಲಿಂಗ್ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ್ದವರಿಗೆಲ್ಲಾ ಪಾಂಡ್ಯ ಈ ಪ್ರದರ್ಶನದ ಮೂಲಕ ಸರಿಯಾದ ಉತ್ತರವನ್ನು ನೀಡಿದರು.

IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!

ಟೂರ್ನಿಗೂ ಮುನ್ನ ಬೌಲಿಂಗ್ ಮಾಡಲಾಗದೇ ಕಳಪೆ ಫಾರ್ಮ್ ಎದುರಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಟೂರ್ನಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದು, ಪಾಂಡ್ಯ ಪ್ರದರ್ಶನಕ್ಕೆ ತಲೆದೂಗಿದ್ದಾರೆ. ಇನ್ನು ಟೂರ್ನಿ ಮುಕ್ತಾಯವಾದ ನಂತರ ಹಲವಾರು ಮಾಜಿ ಕ್ರಿಕೆಟಿಗರು ಹಾರ್ದಿಕ್ ಪಾಂಡ್ಯ ಸೇರಿದಂತೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಆಟಗಾರರನ್ನು ಆರಿಸಿ ಬೆಸ್ಟ್ ಪ್ಲೇಯಿಂಗ್ ಇಲೆವೆನ್‌ಗಳನ್ನು ಪ್ರಕಟಿಸುತ್ತಿದ್ದು, ಈ ಸಾಲಿಗೆ ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಸೇರ್ಪಡೆಗೊಂಡಿದ್ದಾರೆ. ಹರ್ಭಜನ್ ಸಿಂಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹನ್ನೆರಡು ಆಟಗಾರರನ್ನು ಆರಿಸಿ ತಂಡವನ್ನು ರಚಿಸಿದ್ದಾರೆ. ಅದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಹರ್ಭಜನ್ ಸಿಂಗ್ ತಂಡ

ಹರ್ಭಜನ್ ಸಿಂಗ್ ತಂಡ

ಹರ್ಭಜನ್ ಸಿಂಗ್ ಪ್ರಕಟಿಸಿರುವ ಹನ್ನೆರಡು ಆಟಗಾರರನ್ನೊಳಗೊಂಡ ತಂಡ ಹೀಗಿದೆ: ಜೋಸ್ ಬಟ್ಲರ್, ಕೆಎಲ್ ರಾಹುಲ್, ರಾಹುಲ್ ತ್ರಿಪಾಠಿ, ಲಿಯಾಮ್ ಲಿವಿಂಗ್‌ಸ್ಟೋನ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಯುಜ್ವೇಂದ್ರ ಚಾಹಲ್, ರಶೀದ್ ಖಾನ್, ಉಮ್ರಾನ್ ಮಲಿಕ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಶಮಿ (12ನೇ ಆಟಗಾರ)

ಇಬ್ಬರು ಲೆಗ್ ಸ್ಪಿನ್ನರ್ಸ್ ಯಾಕೆ?

ಇಬ್ಬರು ಲೆಗ್ ಸ್ಪಿನ್ನರ್ಸ್ ಯಾಕೆ?

ಇನ್ನು ತಮ್ಮ ತಂಡದಲ್ಲಿ ಇಬ್ಬರು ಲೆಗ್ ಸ್ಪಿನ್ನರ್ಸ್‌ಗಳನ್ನು ಆರಿಸಿರುವ ಹರ್ಭಜನ್ ಸಿಂಗ್ ಅದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ. ಇಬ್ಬರು ಸ್ಪಿನ್ನರ್ಸ್ ಯಾಕೆ ಎಂದು ನೀವು ಪ್ರಶ್ನೆ ಹಾಕಬಹುದು, ರಶೀದ್ ಖಾನ್ ಬೌಲಿಂಗ್ ಜತೆಗೆ ಉತ್ತಮವಾಗಿ ಬ್ಯಾಟ್ ಕೂಡ ಬೀಸುವಂತಹ ಆಟಗಾರ, ಹೀಗಾಗಿ ಇಬ್ಬರೂ ಸಹ ಅತ್ಯುತ್ತಮ ಎಂದು ಭಜ್ಜಿ ಹೇಳಿದ್ದಾರೆ.

Siraj ಐಪಿಎಲ್ ಬಳಿಕ Rohit Sharma ಬಗ್ಗೆ ಹೇಳಿದ್ದೇನು | Oneindia Kannada
ಆರ್‌ಸಿಬಿಯ ಇಬ್ಬರಿಗೆ ಸ್ಥಾನ

ಆರ್‌ಸಿಬಿಯ ಇಬ್ಬರಿಗೆ ಸ್ಥಾನ

ಹರ್ಭಜನ್ ಸಿಂಗ್ ಪ್ರಕಟಿಸಿರುವ ಈ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಜೋಶ್ ಹೇಜಲ್‌ವುಡ್‌ಗೆ ಸ್ಥಾನ ನೀಡಿದ್ದಾರೆ. ಈ ಇಬ್ಬರೂ ಸಹ ಟೂರ್ನಿಯುದ್ದಕ್ಕೂ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡಿದ್ದು, ತಂಡದ ಪರ ಅತಿಹೆಚ್ಚು ವಿಕೆಟ್ ಪಡೆದಿದ್ದ ವನಿಂದ ಹಸರಂಗ ಅವರನ್ನೇ ಹರ್ಭಜನ್ ಸಿಂಗ್ ಕೈಬಿಟ್ಟಿದ್ದಾರೆ.

Story first published: Friday, June 3, 2022, 17:54 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X