ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಆ ಇಬ್ಬರಿಲ್ಲದೇ ಸಿಎಸ್‌ಕೆ ಸಾಲು ಸಾಲು ಸೋಲು ಕಂಡಿದೆ ಎಂದ ಹರ್ಭಜನ್; ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ!

IPL 2022: Harbhajan Singh reveals 2 main reasons behind CSKs flop show in the tournament

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾರೂ ಸಹ ಊಹಿಸಿರದ ರೀತಿಯ ಫಲಿತಾಂಶಗಳು ಹೊರಬೀಳುತ್ತಿವೆ.

CSK ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ | CSK hits bottom | Oneindia Kannada

ಈ ಕೆಲಸ ಮಾಡದಿದ್ದರೆ ಆಡಲು ಬಿಡಲ್ಲ ಎಂದಿದ್ರು ಮುಂಬೈ ಇಂಡಿಯನ್ಸ್‌ನ ಆಟಗಾರ; ಕಹಿ ಘಟನೆ ಬಿಚ್ಚಿಟ್ಟ ಉತ್ತಪ್ಪ!ಈ ಕೆಲಸ ಮಾಡದಿದ್ದರೆ ಆಡಲು ಬಿಡಲ್ಲ ಎಂದಿದ್ರು ಮುಂಬೈ ಇಂಡಿಯನ್ಸ್‌ನ ಆಟಗಾರ; ಕಹಿ ಘಟನೆ ಬಿಚ್ಚಿಟ್ಟ ಉತ್ತಪ್ಪ!

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬೃಹತ್ ಗೆಲುವುಗಳನ್ನು ದಾಖಲಿಸಿ ಅತಿ ಹೆಚ್ಚು ಬಾರಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿರುವ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಮಾತ್ರ ಸಾಲು ಸಾಲು ಸೋಲುಗಳನ್ನು ಕಂಡು ಮುಗ್ಗರಿಸಿವೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ತಮ್ಮ ಮೊದಲ 4 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಗಳಲ್ಲಿವೆ.

ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಇಷ್ಟು ವರ್ಷಗಳ ಕಾಲ ಒಂದೆರಡು ಪಂದ್ಯಗಳಲ್ಲಿ ಮುಗ್ಗರಿಸಿದ ಕೂಡಲೇ ಎಚ್ಚೆತ್ತುಕೊಂಡು ಯಶಸ್ಸಿನ ಹಾದಿಗೆ ಮರಳುತ್ತಿದ್ದ ಈ ತಂಡಗಳಿಗೆ ಈ ಬಾರಿ ಏನಾಯಿತು, ಅಸಲಿಗೆ ಈ ತಂಡಗಳು ಎಡವುತ್ತಿರುವುದಾದರೂ ಎಲ್ಲಿ ಎಂಬ ಪ್ರಶ್ನೆ ಹಾಗೂ ಅನುಮಾನಗಳು ಕ್ರಿಕೆಟ್ ಪ್ರೇಮಿಗಳ ತಲೆಯಲ್ಲಿ ಹರಿದಾಡುತ್ತಿವೆ. ಇನ್ನು ಈ ತಂಡಗಳ ಕಳಪೆ ಫಾರ್ಮ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹಲವಾರು ಕ್ರಿಕೆಟ್ ಪರಿಣಿತರು ತಂಡಗಳ ಹಿನ್ನಡೆಗೆ ಕಾರಣವೇನು ಎಂಬುದನ್ನು ತಮ್ಮ ದೃಷ್ಟಿಕೋನದಿಂದ ತಿಳಿಸಿದ್ದಾರೆ. ಇದೀಗ ಈ ಸಾಲಿಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಸೇರಿಕೊಂಡಿದ್ದು, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಎರಡು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹೀಗೆ ಹರ್ಭಜನ್ ಸಿಂಗ್ ತಿಳಿಸಿರುವ ಆ 2 ಸಮಸ್ಯೆಗಳಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಈ ಆಟಗಾರನ ಅಲಭ್ಯತೆ ತಂಡಕ್ಕೆ ಸಮಸ್ಯೆಯಾಗಿದೆ

ಈ ಆಟಗಾರನ ಅಲಭ್ಯತೆ ತಂಡಕ್ಕೆ ಸಮಸ್ಯೆಯಾಗಿದೆ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 2 ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದಿರುವ ಹರ್ಭಜನ್ ಸಿಂಗ್ ಅದರಲ್ಲಿ ಮೊದಲನೇ ಸಮಸ್ಯೆ ದೀಪಕ್ ಚಹರ್ ಆಡುವ ಬಳಗದಲ್ಲಿ ಇಲ್ಲದೇ ಇರುವುದು ಎಂದಿದ್ದಾರೆ. ದೀಪಕ್ ಚಹರ್ ಇದ್ದಿದ್ದರೆ ಪವರ್ ಪ್ಲೇ ಓವರ್‌ಗಳಲ್ಲಿಯೇ ಎದುರಾಳಿ ತಂಡಗಳ ವಿಕೆಟ್ ಉರುಳಿಸಿ ಒತ್ತಡವನ್ನು ಹೇರುತ್ತಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ತಂಡಕ್ಕೆ ಕಾಡುತ್ತಿದೆ ಮತ್ತೊಂದು ಸಮಸ್ಯೆ

ತಂಡಕ್ಕೆ ಕಾಡುತ್ತಿದೆ ಮತ್ತೊಂದು ಸಮಸ್ಯೆ

ಇನ್ನೂ ಮುಂದುವರಿದು ಮಾತನಾಡಿರುವ ಹರ್ಭಜನ್ ಸಿಂಗ್ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಅಂದರೆ 7ರಿಂದ 15 ಓವರ್‌ಗಳಲ್ಲಿ ಯಶಸ್ವಿಯಾಗಿ ಬೌಲಿಂಗ್ ಮಾಡಿ ವಿಕೆಟ್ ಪಡೆಯಬಲ್ಲಂತಹ ಸಾಮರ್ಥ್ಯವಿರುವ ಸ್ಪಿನ್ನರ್ ಕೊರತೆ ತಂಡವನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.

ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ

ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ

ಹರ್ಭಜನ್ ಸಿಂಗ್ ತಿಳಿಸಿರುವ ಪ್ರಕಾರ ದೀಪಕ್ ಚಹರ್ ಅಲಭ್ಯತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಮಟ್ಟದಲ್ಲಿಯೇ ಹೊಡೆತವನ್ನು ನೀಡಿದೆ. ಇನ್ನು ಗಾಯದ ಸಮಸ್ಯೆಗೊಳಗಾಗಿರುವ ದೀಪಕ್ ಚಹರ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಈ ತಿಂಗಳ ಕೊನೆಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗೆ ಇನ್ನೂ ಇಪ್ಪತ್ತು ದಿನಗಳ ನಂತರ ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿದ್ದು, ಅಲ್ಲಿಯವರೆಗೆ ಹರ್ಭಜನ್ ಸಿಂಗ್ ಬಿಚ್ಚಿಟ್ಟಿರುವ ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗುವುದಿಲ್ಲ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯಗಳಲ್ಲಿಯೂ ಈ ಸಮಸ್ಯೆಯನ್ನು ಎದುರಿಸಲಿದೆ ಎನ್ನಬಹುದು.

Story first published: Monday, April 11, 2022, 10:01 [IST]
Other articles published on Apr 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X