ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಸ್ಟಾರ್ ಆಟಗಾರನನ್ನು ರೀಟೈನ್ ಮಾಡದಿರಲು ನಿರ್ಧರಿಸಿದ ಮುಂಬೈ ಇಂಡಿಯನ್ಸ್

IPL 2022: Hardik Pandya will not be retained by Mumbai Indians

ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಪೂರಕ ಸಿದ್ಧತೆಗಳನ್ನು ಬಿಸಿಸಿಐ ನಡೆಸುತ್ತಿದ್ದು ತಂಡದ ಆಟಗಾರರ ರೀಟೆನ್ಶನ್ ನಿಯಮಗಳನ್ನು ಅಂತಿಮಗೊಳಿಸಿದೆ. ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದ್ದು ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡುವುದು ಖಚಿತವಾಗಿದೆ. ಅಲ್ಲದೆ ಎರಡು ಹೊಸ ತಂಡಗಳು ಕೂಡ ಈ ಬಾರಿಯ ಐಪಿಎಲ್‌ಗೆ ಸೇರ್ಪಡೆಯಾಗಿದ್ದು ಈ ಹೊಸ ತಂಡಗಳ ನಿಯಮಗಳನ್ನು ಕೂಡ ಬಿಸಿಸಿಐ ಅಂತಿಮಗೊಳಿಸಿದೆ.

ಈಗಾಗಲೇ ಇರುವ 8 ಐಪಿಎಲ್ ತಂಡಗಳು ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಉಳಿದ ಆಟಗಾರರು ಹರಾಜು ಪ್ರಕ್ರಿಯೆಗೆ ಲಭ್ಯವಾಗಲಿದ್ದಾರೆ. ಇನ್ನು ಎರಡು ಹೊಸ ತಂಡಗಳು ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನವೇ ಹರಾಜಿಗೆ ಲಭ್ಯವಿರುವ ಆಟಗಾರರ ಪೈಕಿ ಮೂವರು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ.

ಇದೀಗ ಎಲ್ಲಾ ತಂಡಗಳು ಕೂಡ ತಮ್ಮಲ್ಲಿರುವ ಆಟಗಾರರ ಪೈಕಿ ಯಾರನ್ನು ರೀಟೈನ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಲೆಕ್ಕಾಚಾರಗಳನ್ನು ಹಾಕುತ್ತಿದೆ. ಅದರಲ್ಲಿ ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾರತದ ಸ್ಟಾರ್ ಆಟಗಾರನನ್ನು ರೀಟೈನ್ ಮಾಡಿಕೊಳ್ಳದಿರಲು ನಿರ್ಧರಿಸಿದೆ ಎಂಬ ಅಚ್ಚರಿಯ ಸುದ್ದಿ ಹೊರಬೀಳುತ್ತಿದೆ.

ಹತ್ತು ಆವೃತ್ತಿಗಳಿಂದ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್

ಹತ್ತು ಆವೃತ್ತಿಗಳಿಂದ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್‌ಗೇರಲು ವಿಫಲವಾಗಿತ್ತು ನಿಜ. ಆದರೆ ಕಳೆದ ಹತ್ತು ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಎಂತಾ ಅದ್ಭುತವಾದ ಪ್ರದರ್ಶನ ನೀಡಿದೆ ಎಂಬುದಕ್ಕೆ ಈ ಅವಧಿಯಲ್ಲಿ ತಂಡ ಐದು ಬಾರಿ ಚಾಂಪಿಯನ್ ಆಗಿರುವುದೇ ಸಾಕ್ಷಿ. ಇನ್ನು ತಂಡದ ಈ ಯಶಸ್ಸಿಗೆ ಪ್ರಮುಖ ಕಾರಣ ಕಳೆದ ಹತ್ತು ವರ್ಷಗಳಲ್ಲಿ ಫ್ರಾಂಚೈಸಿಯ ಕೋರ್ ಆಟಗಾರರು ಬಹುತೇಕ ಬದಲಾಗದೇ ಇರುವುದು. ಈ ಬಾರಿಯೂ ಮುಂಬೈ ಇಂಡಿಯನ್ಸ್ ಅಂತಾದ್ದೇ ಯೋಜನೆ ರೂಪಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ಮುಂದಿರುವ ಆಯ್ಕೆಗಳು

ಮುಂಬೈ ಇಂಡಿಯನ್ಸ್ ಮುಂದಿರುವ ಆಯ್ಕೆಗಳು

ಮೂಲಗಳ ಮಾಹಿತಿಯ ಪ್ರಕಾರ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದ ನಾಯಕ ರೋಹಿತ್ ಶರ್ಮಾ, ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗು ಕಿರಾನ್ ಪೊಲಾರ್ಡ್ ಅವರನ್ನು ರೀಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಉಳಿದ ಒಂದು ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಮಧ್ಯೆ ಒಬ್ಬರನ್ನು ರೀಟೈನ್ ಮಾಡಿಕೊಳ್ಳಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಮುಂದಿನ ಆವೃತ್ತಿಗಳಿಗೆ ಭದ್ರವಾದ ಕೋರ್ ತಂಡವನ್ನು ಸಿದ್ಧ ಪಡಿಸಲು ಯೋಜನೆ ರೂಪಿಸಿದೆ.

ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯರನ್ನು ರೀಟೈನ್ ಮಾಡುವುದಿಲ್ಲ ಮುಂಬೈ

ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯರನ್ನು ರೀಟೈನ್ ಮಾಡುವುದಿಲ್ಲ ಮುಂಬೈ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೂಲಕವೇ ಬೆಳಕಿಗೆ ಬಂದ ಪ್ರತಿಭಾನ್ವಿತ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಇಬ್ಬರು. ಆದರೆ ಈ ಬಾರಿಯ ಹರಾಜಿಗೂ ಮುನ್ನ ಹಾರ್ದಿಕ್ ಅವರನ್ನು ತಂಡದಿಂದ ಬಿಡುಗಡೆಗೊಳಿಸುಯವ ಸಾಧ್ಯತೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕೇವಲ 10 ಶೇಕಡಕ್ಕಿಂತಲೂ ಕಡಿಮೆಯಿದೆ.

ಒಂದು ವರ್ಷವಾದ್ರೂ ಆರದ ದೀಪ,ಬಾಡದ ಹೂವು:ದೇವಿ ಹಾಸನಾಂಬೆ ಮಹಿಮೆ | Oneindia Kannada
ಅಪಾಯಕಾರಿ ಆಲ್‌ರೌಂಡರ್ ಆಗಿ ಉಳಿದಿಲ್ಲ ಪಾಂಡ್ಯ

ಅಪಾಯಕಾರಿ ಆಲ್‌ರೌಂಡರ್ ಆಗಿ ಉಳಿದಿಲ್ಲ ಪಾಂಡ್ಯ

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಯನ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳದಿರಲು ಮುಖ್ಯ ಕಾರಣವೂ ಇದೆ. ಕಳೆದ ಎರಡು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಸಾಕಷ್ಟು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಈಗ ಅವರು ಅಪಾಯಕಾರಿ ಹಿಂದಿನಂತೆ ಅಪಾಯಕಾರಿ ಆಲ್‌ರೌಂಡರ್ ಆಗಿ ಉಳಿದಿಲ್ಲ. ಬೆನ್ನು ನೋವಿನ ಕಾರಣದಿಂದಾಗಿ ಅವರು ಈ ಹಿಂದಿನಂತೆ 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವುದು ಕೂಡ ಕಷ್ಟ ಸಾಧ್ಯ. ಹೀಗಾಗಿ ಹರಾಜಿಗೆ ಬಿಟ್ಟುಕೊಡಲಿದೆ ಮುಂಬೈ ಇಂಡಿಯನ್ಸ್. ಇನ್ನು ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಪಡೆಯುವ ಅವಕಾಶ ದೊರೆತರೆ ಅಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ವಶಪಡಿಕೊಳ್ಳುವ ಪ್ರಯತ್ನ ನಡೆಸುವುದರಲ್ಲಿ ಮಾತ್ರ ಅನುಮಾನವಿಲ್ಲ.

Story first published: Friday, October 29, 2021, 10:41 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X