ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಹಮದಾಬಾದ್ ತಂಡಕ್ಕೆ ಹಾರ್ದಿಕ್, ರಶೀದ್ ಮತ್ತು ಶುಭ್ಮನ್ ಗಿಲ್ ಸೇರ್ಪಡೆ?

hardik pandya

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನ ರೀಟೈನ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಇದರ ಜೊತೆಗೆ ಮೆಗಾ ಹರಾಜು ಕಾರ್ಯಕ್ರಮವನ್ನ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲೇ ಆಯೋಜಿಸಲಾಗಿದೆ. ಈ ಬಾರಿ ಎಂಟು ತಂಡಗಳ ಬದಲು ಹತ್ತು ತಂಡಗಳು ಪೈಪೋಟಿ ನಡೆಸಲಿವೆ.

ಇಎಸ್‌ಪಿಎನ್ ಕ್ರಿಕ್ ಇನ್ಫೋ ಪ್ರಕಾರ ಎರಡು ಹೊಸ ತಂಡಗಳು ಅಹಮದಾಬಾದ್ ಮತ್ತು ಲಕ್ನೋ ತಮ್ಮ ಮೂರು ಆಟಗಾರರನ್ನ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಜನವರಿ 22 ರೊಳಗೆ ಪ್ರಕಟಿಸಬೇಕಾಗಿದೆ. ಹಾರ್ದಿಕ್ ಮತ್ತು ರಶೀದ್ ಅವರಿಗೆ ತಲಾ 15 ಕೋಟಿ ನೀಡಲು ಅಹಮದಾಬಾದ್ ನಿರ್ಧರಿಸಿದೆ. ಇನ್ನೊಂದೆಡೆ ಶುಭಮನ್ ಗಿಲ್ ಏಳು ಕೋಟಿ ರೂಪಾಯಿ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಹಾಗೇನಾದ್ರು ಆಗಿದ್ದಲ್ಲಿ ಅವರು ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಲಿದ್ದಾರೆ.

ಐಪಿಎಲ್: ಆರ್‌ಸಿಬಿ ನಾಯಕನ ಮೇಲೆ ಕೆಕೆಆರ್, ಪಂಜಾಬ್ ಕಣ್ಣು; ಈತನ ಮೇಲೆ ಹರಿಯಲಿದೆ ಹಣದ ಹೊಳೆ!ಐಪಿಎಲ್: ಆರ್‌ಸಿಬಿ ನಾಯಕನ ಮೇಲೆ ಕೆಕೆಆರ್, ಪಂಜಾಬ್ ಕಣ್ಣು; ಈತನ ಮೇಲೆ ಹರಿಯಲಿದೆ ಹಣದ ಹೊಳೆ!

ಮತ್ತೊಂದೆಡೆ ಕೆಕೆಆರ್ ತಂಡದ ಸ್ಟಾರ್ ಓಪನರ್ ಶುಭಮನ್ ಗಿಲ್ ಅವರು ಈ ತಂಡದ ಭಾಗವಾಗಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು.

2015 ರಲ್ಲಿ 10 ಲಕ್ಷ ರೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಯ್ಕೆಯಾದ ಹಾರ್ದಿಕ್‌ ಪಾಂಡ್ಯ ಕಳೆದ ಸೀಸನ್‌ವರೆಗೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ಪಾಂಡ್ಯ ಬೇರೆ ಫ್ರಾಂಚೈಸಿಯಲ್ಲಿ ಆಡಲು ಮುಂದಾಗಿದ್ದಾರೆ.

ಇನ್ನು 2017 ರ ಮೊದಲು ನಾಲ್ಕು ಕೋಟಿ ರೂಪಾಯಿಗಳಿಗೆ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿತ್ತು. ಅಲ್ಲಿಂದ 2021ರ ಸೀಸನ್‌ವರೆಗೆ ರಶೀದ್ ಖಾನ್ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಅವಿಭಾಜ್ಯ ಅಂಗವಾಗಿದ್ರು. ಇದುವರೆಗೆ 76 ಪಂದ್ಯಗಳನ್ನು ಆಡಿರುವ ಅವರು 93 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದ್ರೆ ಈ ಬಾರಿ ರಶೀದ್ ಅಹಮದಾಬಾದ್ ಪರ ಆಡಲಿದ್ದಾರೆ.

Usman Khawajaರನ್ನು stage ಮೇಲೆ ಕರೆಯಲು Pat Cummins ಮಾಡಿದ್ದೇನು | Oneindia Kannada

ಭಾರತದ ಯುವ ಪ್ರತಿಭೆ ಶುಭ್ಮನ್ ಗಿಲ್ ರನ್ನ ಕೆಕೆಆರ್ ರೀಟೈನ್ ಮಾಡಿಕೊಳ್ಳದೆ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಮ್ಯಾನೇಜ್‌ಮೆಂಟ್ ಭಾರತೀಯ ಆಟಗಾರರಲ್ಲಿ ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ಆಯ್ಕೆ ಮಾಡಿದ್ದು, ಗಿಲ್‌ರನ್ನ ರೀಟೈನ್ ಮಾಡಿಕೊಳ್ಳದೆ ಹಿಂದೆ ಸರಿದಿದೆ.

Story first published: Monday, January 17, 2022, 23:15 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X