ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈ ಸೀಸನ್‌ನ ಬೆಸ್ಟ್‌ ಪ್ಲೇಯಿಂಗ್ 11 ಭಾರತೀಯ ಆಟಗಾರರನ್ನ ತಿಳಿಸಿದ ಹರ್ಷ ಭೋಗ್ಲೆ

Harsha Bhogle

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ ಅಂತಿಮ ಹಂತದತ್ತ ಬಂದು ತಲುಪಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮುಖಾಮುಖಿಯಾಗಲಿದೆ.

ಈ ಸೀಸನ್‌ನ ವಿಶೇಷ ಅಂದ್ರೆ 10 ತಂಡಗಳ ಜೊತೆಗೆ ಅನೇಕ ಯುವ ಪ್ರತಿಭೆಗಳ ಅನಾವರಣಕ್ಕೆ ಐಪಿಎಲ್ 2022 ಸಾಕ್ಷಿಯಾಗಿದೆ. ಇದರ ನಡುವೆ ಭಾರತದ ಹಲವು ಆಟಗಾರರು ಮಿಂಚಿನ ಆಟ ಪ್ರದರ್ಶಿಸಿದ್ದಾರೆ. ಖ್ಯಾತ ಕ್ರಿಕೆಟ್ ವಿಶ್ಲೇಷಕ, ಕಾಮೆಂಟೇಟರ್ ಹರ್ಷ ಭೋಗ್ಲೆ ತಮ್ಮ ನೆಚ್ಚಿನ ಭಾರತೀಯ ಆಟಗಾರರ ಪ್ಲೇಯಿಂಗ್ ಇಲೆವೆನ್‌ ಅನ್ನು ತಿಳಿಸಿದ್ದಾರೆ. ಬೋಗ್ಲೆ ತಂಡದಲ್ಲಿ ಸ್ಥಾನ ಪಡೆದಿರುವ ಆ ಹನ್ನೊಂದು ಭಾರತೀಯ ಆಟಗಾರರ ಮಾಹಿತಿ ಈ ಕೆಳಗಿದೆ.

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ಹರ್ಷ ಭೋಗ್ಲೆ ಆಯ್ಕೆ ಮಾಡಿರುವ ಪ್ಲೇಯಿಂಗ್ 11 ಭಾರತೀಯರಲ್ಲಿ ಮೊದಲ ಸ್ಥಾನವನ್ನ ಕನ್ನಡಿಗ, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್‌ಗೆ ನೀಡಿದ್ದಾರೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಎರಡನೇ ಆಟಗಾರನಾಗಿರುವ ಕೆ.ಎಲ್ ರಾಹುಲ್ ಅಂಕಿ-ಅಂಶ ಈ ಕೆಳಗಿದೆ

ಇನ್ನಿಂಗ್ಸ್ : 14

ರನ್‌: 537

ಸರಾಸರಿ: 48.82

ಸ್ಟ್ರೈಕ್‌ರೇಟ್‌: 135.26

4/6: 42/25

50/100: 3/2

ರಾಹುಲ್ ತ್ರಿಪಾಠಿ

ರಾಹುಲ್ ತ್ರಿಪಾಠಿ

ಹರ್ಷ ಭೋಗ್ಲೆ ಪ್ಲೇಯಿಂಗ್ ಇಲೆವೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎರಡನೇ ಭಾರತೀಯ ಸನ್‌ರೈಸರ್ಸ್ ಹೈದ್ರಾಬಾದ್ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ, ಈ ಸೀಸನ್‌ನಲ್ಲಿ 8.50 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್ ಪರ ಆಡಿದರು. ಹರ್ಷ ಬೋಗ್ಲೆ ತನ್ನ ತಂಡದ ಮತ್ತೊಬ್ಬ ಓಪನರ್ ಆಗಿ ಇವರನ್ನ ಆಯ್ಕೆ ಮಾಡಿದ್ದಾರೆ.

ಇನ್ನಿಂಗ್ಸ್ : 14

ರನ್‌: 413

ಸರಾಸರಿ: 37.55

ಸ್ಟ್ರೈಕ್‌ರೇಟ್‌: 158.24

4/6: 40/20

50/100: 3/0

IPL 2022: ಚಾಂಪಿಯನ್‌ಗೆ ನೀಡುವ ಬಹುಮಾನದ ಮೊತ್ತ ಎಷ್ಟು? ಆರ್‌ಸಿಬಿಗೆ ಸಿಗುವ ಹಣವೆಷ್ಟು?

ಸಂಜು ಸ್ಯಾಮನ್ಸ

ಸಂಜು ಸ್ಯಾಮನ್ಸ

ಹರ್ಷ ಭೋಗ್ಲೆ ತನ್ನ ಪ್ಲೇಯಿಂಗ್ ಇಲೆವೆನ್ ಭಾರತೀಯ ಆಟಗಾರರಲ್ಲಿ ರಾಜಸ್ತಾನ್ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್‌ಗೆ ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಸ್ಥಾನ ನೀಡಿದ್ದಾರೆ.

ಇನ್ನಿಂಗ್ಸ್ : 16

ರನ್‌: 444

ಸರಾಸರಿ: 29.60

ಸ್ಟ್ರೈಕ್‌ರೇಟ್‌: 147.51

4/6: 41/26

50/100: 2/0

IPL 2022 Final, GT vs RR: ಈ ಮೈಲಿಗಲ್ಲುಗಳ ಮೇಲೆ ಬಟ್ಲರ್, ಚಹಾಲ್, ಹಾರ್ದಿಕ್ ಪಾಂಡ್ಯಾ ಕಣ್ಣು

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

ಐಪಿಎಲ್ 2022ರ ಸೀಸನ್‌ನಲ್ಲಿ ಗಾಯಗೊಂಡು ಟೂರ್ನಿಯ ಮಧ್ಯದಲ್ಲೇ ಹೊರನಡೆದ ಸೂರ್ಯಕುಮಾರ್ ಯಾದವ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಭೋಗ್ಲೆ ಆಯ್ಕೆ ಮಾಡಿದ್ದು ಪ್ಲೇಯಿಂಗ್ ಇಲೆವೆನ್‌ 4ನೇ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನಿಂಗ್ಸ್ : 08

ರನ್‌: 303

ಸರಾಸರಿ: 43.29

ಸ್ಟ್ರೈಕ್‌ರೇಟ್‌: 145.67

4/6: 23/16

50/100: 3/0

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಹರ್ಷ ಭೋಗ್ಲೆ ಐದನೇ ಕ್ರಮಾಂಕದ ಬ್ಯಾಟರ್ ಆಗಿ ಕಣಕ್ಕಿಳಿಸಿದ್ದಾರೆ. ಈ ಮೂಲಕ ಗುಜರಾತ್ ತಂಡವನ್ನ ಚೊಚ್ಚಲ ಸೀಸನ್‌ನಲ್ಲೇ ಫೈನಲ್‌ಗೇರಿಸಿರುವ ಪಾಂಡ್ಯಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.


ಇನ್ನಿಂಗ್ಸ್ : 14

ರನ್‌: 453

ಸರಾಸರಿ: 45.30

ಸ್ಟ್ರೈಕ್‌ರೇಟ್‌: 132.84

4/6: 46/11

50/100: 4/0

RCB vs RR: ಆರ್‌ಸಿಬಿ ದಾಂಡಿಗರಿಗೆ ಸಿಂಹಸ್ವಪ್ನವಾದ ಕನ್ನಡಿಗ ವೇಗಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಆರ್‌ಸಿಬಿ ತಂಡದ ಫಿನಿಷರ್ ಆಗಿ ಮಿಂಚಿದ ದಿನೇಶ್ ಕಾರ್ತಿಕ್‌ ಇಡೀ ಸೀಸನ್ ಬೆಸ್ಟ್ ಫಿನಿಷರ್ ಆಗಿ ಗುರುತಿಸಿಕೊಂಡರು. ಹೀಗಾಗಿಯೇ ಕಾಮೆಂಟೇಟರ್ ಹರ್ಷ ಭೋಗ್ಲೆ ತನ್ನ ತಂಡದ ಫಿನಿಷರ್ ಹಾಗೂ ಆರನೇ ಕ್ರಮಾಂಕದ ಬ್ಯಾಟರ್ ಆಗಿ ಈತನನ್ನು ಆಯ್ಕೆ ಮಾಡಿದ್ದಾರೆ.

ಇನ್ನಿಂಗ್ಸ್ : 14

ರನ್‌: 287

ಸರಾಸರಿ: 57.4

ಸ್ಟ್ರೈಕ್‌ರೇಟ್‌: 191.33

4/6: 22/21

50/100: 1/0

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

ಅನುಭವಿ ರಾಜಸ್ತಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಆಗಿ ಮಿಂಚಿದ ರವಿಚಂದ್ರನ್ ಅಶ್ವಿನ್ ತನ್ನ ಸ್ಪಿನ್ ಅಟ್ಯಾಕ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲರು. ಹೀಗಾಗಿ ಹರ್ಷ ಭೋಗ್ಲೆ ತನ್ನ ತಂಡದಲ್ಲಿ ಪಾಂಡ್ಯ ನಂತರದ ಸ್ಥಾನವನ್ನ ಆರ್. ಅಶ್ವಿನ್‌ಗೆ ನೀಡಿದ್ದಾರೆ.

ಇನ್ನಿಂಗ್ಸ್: 16

ವಿಕೆಟ್: 12

ಬೆಸ್ಟ್‌: 17/3

ಸ್ಟ್ರೈಕ್‌ರೇಟ್: 32.00

ಎಕಾನಮಿ: 7.35

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

ಹರ್ಷ ಭೋಗ್ಲೆ ತನ್ನ ಭಾರತೀಯ ಪ್ಲೇಯಿಂಗ್ ಇಲೆವೆನ್ ತಂಡದ ಮೊದಲ ಪೇಸರ್ ಆಗಿ ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್‌ರನ್ನು ಆಯ್ಕೆ ಮಾಡಿದ್ದಾರೆ.

ಇನ್ನಿಂಗ್ಸ್: 15

ವಿಕೆಟ್: 19

ಬೆಸ್ಟ್‌: 34/4

ಸ್ಟ್ರೈಕ್‌ರೇಟ್: 16.89

ಎಕಾನಮಿ: 7.66

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ

ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ಹರ್ಷ ಭೋಗ್ಲೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಕ್ಕಿದೆ.

ಇನ್ನಿಂಗ್ಸ್: 14

ವಿಕೆಟ್: 15

ಬೆಸ್ಟ್‌: 10/5

ಸ್ಟ್ರೈಕ್‌ರೇಟ್: 21.33

ಎಕಾನಮಿ: 7.18

ಮೊಹ್ಸಿನ್ ಖಾನ್

ಮೊಹ್ಸಿನ್ ಖಾನ್

ಹರ್ಷ ಭೋಗ್ಲೆ ಆಯ್ಕೆ ಮಾಡಿರುವ ಬೌಲರ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಪ್ರಮುಖ ಬೌಲರ್ ಮೊಹ್ಸಿನ್ ಖಾನ್ ಕೂಡ ಒಬ್ಬರು. ಮೂವರು ಪೇಸರ್‌ಗಳಲ್ಲಿ ಈತ ಕೂಡ ಒಬ್ಬನಾಗಿದ್ದು ಅವರ ಐಪಿಎಲ್ 2022 ರೆಕಾರ್ಡ್‌ ಈ ಕೆಳಗಿದೆ.

ಇನ್ನಿಂಗ್ಸ್: 09

ವಿಕೆಟ್: 14

ಬೆಸ್ಟ್‌: 16/4

ಸ್ಟ್ರೈಕ್‌ರೇಟ್: 14.04

ಎಕಾನಮಿ: 5.96

ಯುಜವೇಂದ್ರ ಚಹಾಲ್‌

ಯುಜವೇಂದ್ರ ಚಹಾಲ್‌

ರವಿಚಂದ್ರನ್ ಅಶ್ವಿನ್ ಜೊತೆಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಯುಜವೇಂದ್ರ ಚಹಾಲ್ ಸ್ಥಾನ ಪಡೆದಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ಪ್ರಮುಖ ವಿಕೆಟ್ ಟೇಕರ್ ಇವರಾಗಿದ್ದಾರೆ. ಆರ್‌ಸಿಬಿಯ ವಹಿಂದು ಹಸರಂಗ ಅಷ್ಟೇ ವಿಕೆಟ್ ಪಡೆದಿರುವ ಚಹಾಲ್ ಫೈನಲ್‌ನಲ್ಲಿ ಒಂದು ವಿಕೆಟ್ ಪಡೆದರೂ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇನ್ನಿಂಗ್ಸ್: 16

ವಿಕೆಟ್: 26

ಬೆಸ್ಟ್‌: 40/5

ಸ್ಟ್ರೈಕ್‌ರೇಟ್: 14.76

ಎಕಾನಮಿ: 7.92

Story first published: Saturday, May 28, 2022, 22:10 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X