ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್ ಪಟೇಲ್ ಕುರಿತು ಹೊಗಳಿದ ಸೆಹ್ವಾಗ್‌: ಆತನ ರೇಂಜ್ ಏನಿದ್ರೂ 10 ಕೋಟಿ ಅಲ್ಲ, 15 ಕೋಟಿ!

Harshal patel

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2022 ಪ್ರಶಸ್ತಿ ಗೆಲ್ಲಲು ಎರಡು ಹೆಜ್ಜೆ ದೂರದಲ್ಲಿದೆ. ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ 14 ರನ್‌ಗಳಿಂದ ಗೆದ್ದಿದೆ. ಕೊನೆಯಲ್ಲಿ ಹರ್ಷಲ್ ಪಟೇಲ್ ಸೂಪರ್ ಬೌಲಿಂಗ್ ಮೂಲಕ ಆರ್‌ಸಿಬಿ ಬೃಹತ್ ಗುರಿಯನ್ನು ಉಳಿಸಿತು.

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ರಜತ್ ಪಾಟಿದಾರ್ (54 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ನೆರವಿನಿಂದ 112) ಅಜೇಯ ಶತಕ ಸಿಡಿಸಿದರೆ, ದಿನೇಶ್ ಕಾರ್ತಿಕ್ (23 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 37) ಸಿಡಿಲಬ್ಬರದ ಆಟವಾಡಿದರು. ನಂತರ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಹೇಜಲ್ ವುಡ್ ಮೂರು ವಿಕೆಟ್ ಪಡೆದರು.ಸಿರಾಜ್, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಹಾಗೂ ಹೇಜಲ್ ವುಡ್ ಪಂದ್ಯಕ್ಕೆ ತಿರುವು ನೀಡಿದರು.

ಹೇಜಲ್‌ವುಡ್‌ರ 18ನೇ ಓವರ್ ಬೊಂಬಾಟ್

ಹೇಜಲ್‌ವುಡ್‌ರ 18ನೇ ಓವರ್ ಬೊಂಬಾಟ್

ಹರ್ಷಲ್ ಪಟೇಲ್ 18ನೇ ಓವರ್‌ನ ಮೊದಲ ಎಸೆತದಲ್ಲಿ ವೈಡ್ ಮಾಡಿದರು, ನಂತರದಲ್ಲಿ ವೈಡ್ ಪ್ಲಸ್ ಐದು ರನ್‌ ನೀಡಿದರು. ಇದರೊಂದಿಗೆ ಸಮೀಕರಣವು 18 ಎಸೆತಗಳಲ್ಲಿ 35 ಆಯಿತು. ಕ್ರೀಸ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಮತ್ತು ಲಕ್ನೋ ನಾಯಕ ಕೆಎಲ್ ರಾಹುಲ್ ಇದ್ದರು. ಅಂತಹ ಬೃಹತ್ ಹಿಟ್ಟರ್‌ಗಳೊಂದಿಗೆ ಈ ಸಮೀಕರಣವು ದೊಡ್ಡ ವಿಷಯವಾಗಿರಲಿಲ್ಲ.

ಆದ್ರೆ ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮ್ಯಾಜಿಕ್ ಮಾಡಿದರು. ಸತತ ಎರಡು ಎಸೆತಗಳು ಮಾರ್ಕಸ್ ಸ್ಟೋಯ್ನಿಸ್ ಬೀಟ್ ಮಾಡಿದರು. ಹರ್ಷಲ್ ಮೂರನೇ ಎಸೆತದಲ್ಲಿ ಮಾರ್ಕಸ್ ಅರ್ಧ ಭಾಗದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆದರೆ ರಜತ್ ಪಾಟಿದಾರ್ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಹಿಡಿದ ನಂತರ ಸ್ಟೊಯ್ನಿಸ್ ಪೆವಿಲಿಯನ್ ಸೇರಿದರು. ನಂತರ ಅವರು 3 ಎಸೆತಗಳಲ್ಲಿ ಕೇವಲ ಎರಡು ರನ್ ನೀಡಿದರು.

ಅಂತಿಮ ಓವರ್‌ನಲ್ಲಿ ಕೇವಲ 9 ರನ್ ನೀಡಿದ ಹರ್ಷಲ್

ಅಂತಿಮ ಓವರ್‌ನಲ್ಲಿ ಕೇವಲ 9 ರನ್ ನೀಡಿದ ಹರ್ಷಲ್

ಅಂತಿಮ ಓವರ್‌ನಲ್ಲಿ, 14 ರನ್‌ಗಳಿಂದ ಪಂದ್ಯವನ್ನು ಗೆಲ್ಲಲು ಆರ್‌ಸಿಬಿಗೆ ಬಲ ನೀಡಿದ್ದು ಹರ್ಷಲ್ ಪಟೇಲ್‌. ಆತಿಥೇಯರಿಗೆ ಕೇವಲ 9 ರನ್‌ಗಳನ್ನು ನೀಡಿದ ಹರ್ಷಲ್‌ 24 ರನ್‌ಗಳನ್ನ ಡಿಫೆಂಡ್ ಮಾಡಿಕೊಂಡರು. ಇದಕ್ಕೂ ಮುನ್ನ 10 ಮತ್ತು 12ನೇ ಓವರ್ ಬೌಲಿಂಗ್ ಮಾಡಿದ್ದ ಹರ್ಷಲ್ ಆ ಎರಡು ಓವರ್ ಗಳಲ್ಲಿ ಕೇವಲ 9 ರನ್ ಬಿಟ್ಟುಕೊಟ್ಟು ಲಖನೌ ಮೇಲೆ ಒತ್ತಡ ಹೆಚ್ಚಿಸಿದರು.

ಮಹಿಪಾಲ್ ಲೊಮ್ರೋರ್ ಮತ್ತು ಹರ್ಷಲ್ ಪಟೇಲ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಫೀಲ್ಡಿಂಗ್ ಮಾಡುವಾಗ ಡಿಕ್ಕಿ ಹೊಡೆದರು. ಹರ್ಷಲ್ ಪಟೇಲ್ ಪಕ್ಕೆಲುಬುಗಳಿಗೆ ಸಣ್ಣ ಗಾಯವಾಯಿತು. ಕೆಲಹೊತ್ತು ಮೈದಾನದಿಂದ ನಿರ್ಗಮಿಸಿದ ಹರ್ಷಲ್ ವಾಪಸ್ಸಾದ ಬಳಿಕ ಅಮೋಘ ಪ್ರದರ್ಶನ ನೀಡುವ ಮೂಲಕ ಆರ್ ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹರ್ಷಲ್ ರೇಂಜ್ ನಿಜಕ್ಕೂ ದೊಡ್ಡದು ಎಂದ ಸೆಹ್ವಾಗ್!

ಹರ್ಷಲ್ ರೇಂಜ್ ನಿಜಕ್ಕೂ ದೊಡ್ಡದು ಎಂದ ಸೆಹ್ವಾಗ್!

ಎರಡೂ ತಂಡಗಳು ಆಕ್ರಮಣಕಾರಿ ಆಟವಾಡಿದ ಪಂದ್ಯದಲ್ಲಿ ಹರ್ಷಲ್ ಮಿತವಾಗಿ ಬೌಲಿಂಗ್ ಮಾಡಿದರು. ಅವರು ತಮ್ಮ ನಾಲ್ಕು-ಓವರ್‌ಗಳ ಕೋಟಾದಲ್ಲಿ 1/25 ಪ್ರದರ್ಶನದೊಂದಿಗೆ ಮಿಂಚಿದರು. ಎಲಿಮಿನೇಟರ್‌ನಲ್ಲಿ ಹರ್ಷಲ್ ಪಟೇಲ್ ಅವರ ಅತ್ಯುತ್ತಮ ಪ್ರದರ್ಶನದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ರೇಂಜ್ 10 ಕೋಟಿ ಅಲ್ಲ, 14-15 ಕೋಟಿ ರೂ. ಎಂದಿದ್ದಾರೆ.

ಹರ್ಷಲ್‌ಗೆ ಹರಾಜಿನಲ್ಲಿ ಸಿಕ್ಕ ಬೆಲೆ ತುಂಬಾ ಕಡಿಮೆ!

ಹರ್ಷಲ್‌ಗೆ ಹರಾಜಿನಲ್ಲಿ ಸಿಕ್ಕ ಬೆಲೆ ತುಂಬಾ ಕಡಿಮೆ!

ಸೆಹ್ವಾಗ್ ಪ್ರಕಾರ, ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್‌ಗೆ ನೀಡಿದ ಬೆಲೆ ತುಂಬಾ ಕಡಿಮೆ. ಅವರು ಬೆಂಗಳೂರಿಗೆ ಬೌಲಿಂಗ್ ಮಾಡುವ ವಿಧಾನವನ್ನು ಅವಲಂಬಿಸಿ ಅವರ ರೇಂಜ್ ವಿಭಿನ್ನವಾಗಿದೆ. ಆತನಿಗೆ ರೂ.10.75 ಕೋಟಿ ಬೆಲೆಯೂ ಕಡಿಮೆಯಾಗಿದೆ ಎಂದು ಭಾವಿಸುತ್ತೇನೆ. ಅವರು 14 ರಿಂದ 15 ಕೋಟಿ ರೂ.ಗಳ ಬೆಲೆಯಲ್ಲಿ ಇರಬೇಕಾದ ಆಟಗಾರ. ಅವರು ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ವಿಕೆಟ್‌ಗಳನ್ನು ತೆಗೆಯಬಲ್ಲರು. ರನ್‌ಗಳನ್ನು ಉಳಿಸುತ್ತಾರೆ. ಪಂದ್ಯದ ಆರಂಭದಲ್ಲಿಯೂ ಕೂಡ ಬೌಲಿಂಗ್ ಮಾಡುವ ಮೂಲಕ ಖಂಡಿತವಾಗಿಯೂ ರನ್ ಅನ್ನು ತಡೆಯುತ್ತಾರೆ ಎಂದಿದ್ದಾರೆ. ಹೀಗಾಗಿ ಈತ ಆರ್‌ಸಿಬಿಗೆ ನಿಜಕ್ಕೂ ಬೋನಸ್ ಎಂದು ಸೆಹ್ವಾಗ್ ಹೊಗಳಿದಿದ್ದಾರೆ.

Story first published: Friday, May 27, 2022, 9:42 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X