ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ತಂಡಗಳು ಪ್ಲೇ ಆಫ್ ತಲುಪಲು ಎಷ್ಟು ಪಾಯಿಂಟ್ಸ್ ಬೇಕು?

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಭಾಗವಹಿಸಿರುವ ಹತ್ತು ತಂಡಗಳು ಈಗಾಗಲೇ ಬಹುತೇಕ ಏಳು ಪಂದ್ಯಗಳನ್ನ ಮುಗಿಸಿವೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಸದ್ಯ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ 12 ಪಾಯಿಂಟ್ಸ್ ಜೊತೆಗೆ ಉತ್ತಮ ರನ್‌ರೇಟ್‌ ಮೂಲಕ ಅಗ್ರಸ್ಥಾನದಲ್ಲಿದೆ. ಉಳಿದಂತೆ ಸನ್‌ರೈಸರ್ಸ್ ಹೈದ್ರಾಬಾದ್, ರಾಜಸ್ತಾನ್ ರಾಯಲ್ಸ್ ಹಾಗೂ ಆರ್‌ಸಿಬಿ ನಂತರದ ಸ್ಥಾನ ಪಡೆದಿವೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆರಂಭಿಕ ಏಳು ಪಂದ್ಯಗಳನ್ನ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ತಳಭಾಗದಲ್ಲಿದೆ. ಉಳಿದ ಏಳು ಪಂದ್ಯಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಒಂದು ಪಂದ್ಯ ಸೋತರು ಸಹ ಪ್ಲೇ ಆಫ್‌ ತಲುಪಲು ಸಾಧ್ಯವೇ ಇಲ್ಲ. ಹೀಗಿರುವಾಗ ಪ್ಲೇ ಆಫ್ ತಲುಪಲು ಒಂದು ತಂಡಕ್ಕೆ ಎಷ್ಟು ಸಾಮಾನ್ಯ ಪಾಯಿಂಟ್ಸ್‌ ಇರಬೇಕು ಎಂಬುದನ್ನ ಈ ಕೆಳಗೆ ನೋಡಬಹುದು.

ಪ್ಲೇ ಆಫ್ ತಲುಪಲು ಎಷ್ಟು ಪಾಯಿಂಟ್ಸ್ ಬೇಕು?

ಪ್ಲೇ ಆಫ್ ತಲುಪಲು ಎಷ್ಟು ಪಾಯಿಂಟ್ಸ್ ಬೇಕು?

ಪ್ಲೇ ಆಫ್ ತಲುಪುವ ಸಾಧ್ಯತೆ ಇರುವ ತಂಡಗಳ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಈಗಾಗಲೇ ಲೆಕ್ಕಾಚರ ಆರಂಭಿಸಿದ್ದಾರೆ. ಪ್ರಸ್ತುತ, ಯಾವುದೇ ತಂಡವು ಪ್ಲೇ ಆಫ್‌ಗೆ ಅರ್ಹತೆ ಪಡೆದಿಲ್ಲ. ಆದರೆ, ಕೆಲವು ತಂಡಗಳು ಪ್ಲೇಆಫ್‌ ತಲುಪುವ ತವಕದಲ್ಲಿದೆ. ಆಡಿದ ಎಲ್ಲಾ ಏಳು ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಉಳಿದ ಏಳು ಪಂದ್ಯಗಳನ್ನು ಗೆದ್ದರೂ ಮುಂಬೈ ಇನ್ನೂ ಪ್ಲೇ ಆಫ್ ತಲುಪುವುದು ಕಷ್ಟ. ಪ್ಲೇ ಆಫ್‌ಗೆ ಟಿಕೆಟ್ ಪಡೆಯಲು ತಂಡಕ್ಕೆ ಎಷ್ಟು ಅಂಕಗಳು ಬೇಕು ಎಂಬುದನ್ನ ಮುಂದೆ ನೋಡೋಣ.

ತಂಡಗಳ ನಡುವೆ ಪೈಪೋಟಿ ಹೆಚ್ಚು, 18 ಅಂಕಗಳು ಸುರಕ್ಷಿತ

ತಂಡಗಳ ನಡುವೆ ಪೈಪೋಟಿ ಹೆಚ್ಚು, 18 ಅಂಕಗಳು ಸುರಕ್ಷಿತ

ಹಿಂದಿನ ಸೀಸನ್‌ಗಳಿಗಿಂತ ಈ ಬಾರಿಯ ಐಪಿಎಲ್‌ನಲ್ಲಿ ಎರಡು ತಂಡಗಳು ಹೆಚ್ಚಾಗಿದ್ದು, ಪ್ಲೇಆಫ್‌ಗಾಗಿ ಪೈಪೋಟಿ ತೀವ್ರವಾಗಿದೆ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ, ತಂಡವು ಪ್ಲೇಆಫ್ ತಲುಪಲು ಅಗತ್ಯವಿರುವ ಅಂಕಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿದೆ.

ಈ ಋತುವಿನಲ್ಲಿ ಪ್ಲೇಆಫ್ ತಲುಪಲು ತಂಡಕ್ಕೆ 18 ಅಂಕಗಳು ಸುರಕ್ಷಿತ ಸಂಖ್ಯೆಯಾಗಿದೆ. ಈ ಹಿಂದೆ 2011ರಲ್ಲೇ ಐಪಿಎಲ್‌ನಲ್ಲಿ 10 ತಂಡಗಳಿದ್ದವು. ಅಂದು ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಗೆ ಲಗ್ಗೆ ಇಟ್ಟ ತಂಡ 16 ಅಂಕ ಗಳಿಸಿತು. ಅಂದರೆ ಈ ಋತುವಿನಲ್ಲಿ ಕನಿಷ್ಠ ಎಂಟು ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡವು ಪ್ಲೇ ಆಫ್ ತಲುಪಬಹುದು.

IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!

ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಕಠಿಣ ಹಾದಿ

ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಕಠಿಣ ಹಾದಿ

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಇಂದಿನ ಲಕ್ನೋ ಪಂದ್ಯ ಸೇರಿದಂತೆ ಈ ಋತುವಿನಲ್ಲಿ ಏಳು ಪಂದ್ಯಗಳು ಉಳಿದಿವೆ. ದೊಡ್ಡ ಅಂತರದಿಂದ ಗೆಲ್ಲುವ ಜತೆಗೆ ಮುಂಬೈ ಗೆಲುವಿನ ಸಾಧ್ಯತೆಯೂ ಕಡಿಮೆ. ಸದ್ಯದ ಪರಿಸ್ಥಿತಿ ಮತ್ತು ಅಂಕಿಅಂಶಗಳನ್ನು ಗಮನಿಸಿದರೆ, ರೋಹಿತ್ ಶರ್ಮಾ ಮತ್ತು ಅವರ ತಂಡ ಪ್ಲೇ ಆಫ್ ತಲುಪುವ ಸಾಧ್ಯತೆಗಳು ಶೇಕಡಾ ಒಂದಕ್ಕಿಂತ ಕಡಿಮೆ.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್‌ ತಲುಪುವ ಸಾಧ್ಯತೆ ಕಡಿಮೆ ಇರುವ ಮತ್ತೊಂದು ತಂಡವಾಗಿದೆ. ಆಡಿದ ಏಳು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಇನ್ನುಳಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದರೆ ಪ್ಲೇ ಆಫ್ ಹಂತಕ್ಕೇರಲಿದೆ.

IPL 2022: ಒಂದು ಪಂದ್ಯಕ್ಕೆ ಅಂಪೈರ್ಸ್ ಸ್ಯಾಲರಿ ಎಷ್ಟು, ತಪ್ಪು ನಿರ್ಣಯಕ್ಕೆ ದಂಡ ವಿಧಿಸುವುದಿಲ್ವಾ?

ಗುಜರಾತ್ ಪ್ಲೇ ಆಫ್ ಬಹುತೇಕ ಸನಿಹ

ಗುಜರಾತ್ ಪ್ಲೇ ಆಫ್ ಬಹುತೇಕ ಸನಿಹ

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ಲೇಆಫ್ ಹಂತಕ್ಕೆ ತಲುಪುವ ತವಕದಲ್ಲಿದೆ. ಕಳೆದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕಗಳೊಂದಿಗೆ ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನುಳಿದ ಏಳು ಪಂದ್ಯಗಳಲ್ಲಿ ಕನಿಷ್ಠ ಮೂರನ್ನಾದರೂ ಗೆದ್ದರೆ ಪ್ಲೇಆಫ್ ಗೆ ಲಗ್ಗೆ ಇಡುವುದು ಖಚಿತ.

8 ಸೋಲಿನೊಂದಿಗೆ IPL ಟೂರ್ನಿಯಿಂದ ಹೊರ ಬಿದ್ದಿದ್ದಕ್ಕೆ ರೋಹಿತ್ ಶರ್ಮಾ ಏನಂದ್ರು ನೋಡಿ | Oneindia Kannada
ಆರ್‌ಸಿಬಿ, ಎಸ್‌ಆರ್‌ಎಚ್, ಆರ್‌ಆರ್ ತೀವ್ರ ಪೈಪೋಟಿ

ಆರ್‌ಸಿಬಿ, ಎಸ್‌ಆರ್‌ಎಚ್, ಆರ್‌ಆರ್ ತೀವ್ರ ಪೈಪೋಟಿ

ಈ ಮೂರು ತಂಡಗಳು ತಲಾ 10 ಅಂಕಗಳೊಂದಿಗೆ ಸಮಬಲದಲ್ಲಿವೆ. ಅವುಗಳೆಂದರೆ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಎಂಟು ಪಾಯಿಂಟ್‌ಗಳ ಮೂಲಕ ನಂತರದ ಸ್ಥಾನದಲ್ಲಿರುವ ಲಕ್ನೋ ಕೂಡ ಪ್ಲೇ ಆಫ್‌ಗಾಗಿ ಪೈಪೋಟಿಯಲ್ಲಿದೆ. ಆದರೆ ತಂಡದ ಉಳಿದವರಿಗೆ ಡೂ ಆರ್ ಡೈ ಹೋರಾಟ ಮಾತ್ರ ಉಳಿದಿದೆ. ಎರಡು ಅಥವಾ ಮೂರು ಪಂದ್ಯಗಳನ್ನು ಸೋತರೆ ಅವರ ಪ್ಲೇ ಆಫ್ ಕನಸು ನುಚ್ಚು ನೂರಾಗಲಿದೆ.

Story first published: Monday, April 25, 2022, 10:13 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X