ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?

Rajat patidar

ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಮಿಂಚು ಹರಿಸಿದ ಆರ್‌ಸಿಬಿಯ ಹೊಸ ಸೂಪರ್ ಸ್ಟಾರ್ ರಜತ್ ಪಾಟೀದಾರ್ ಅಬ್ಬರಕ್ಕೆ, ಇಡೀ ಕ್ರಿಕೆಟ್ ಲೋಕವೇ ಭೇಷ್ ಎಂದಿದೆ. ಪಾಟೀದಾರ್‌ ಅಮೋಘ ಶತಕದ ನೆರವಿನಿಂದ ಆರ್‌ಸಿಬಿ ತಂಡವು ಎರಡನೇ ಪ್ಲೇ ಆಫ್‌ ಪ್ರವೇಶವನ್ನು ಕಂಡಿದೆ.

ಕಳೆದ ಎರಡು ಸೀನಸ್‌ಗಳಲ್ಲಿ ಎಲಿಮಿನೇಟರ್‌ಗಳಲ್ಲಿ ಎಡವಿದ್ದ ಆರ್‌ಸಿಬಿ ತಂಡವು , ಎದುರಾಗಿದ್ದ ಕಂಟಕವನ್ನ ದಾಟಿದ್ದು ಶುಕ್ರವಾರ ರಾಜಸ್ತಾನ್ ರಾಯಲ್ಸ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.

49 ಎಸೆತಗಳಲ್ಲಿ ಅಮೋಘ ಶತಕ ಸಿಡಿಸಿದ ಪಾಟೀದಾರ್

49 ಎಸೆತಗಳಲ್ಲಿ ಅಮೋಘ ಶತಕ ಸಿಡಿಸಿದ ಪಾಟೀದಾರ್

ಆರಂಭಿಕ ಓವರ್‌ಗಳಲ್ಲಿ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದೆ ಪಾಟೀದಾರ್ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿನ ಆಟವಾಡಿದ್ರು. ಒಂದು ಕ್ಯಾಚ್‌ನ ಜೀವನದ ಮೂಲಕ ಎದುರಾಳಿ ತಂಡವನ್ನ ನಡುಕ ತರಿಸಿದ ಪಾಟೀದಾರ್ ಆರ್‌ಸಿಬಿ ಪರ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶೇಷ ದಾಖಲೆಯನ್ನು ಮಾಡಿದರು.

49 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದ ಪಾಟೀದಾರ್ ಐಪಿಎಲ್ ಇತಿಹಾಸದಲ್ಲಿ ಪ್ಲೇ ಆಫ್‌ನಲ್ಲಿ ವೇಗದ ಶತಕ ಸಿಡಿಸಿದ ಪಟ್ಟಿಯಲ್ಲಿ ವೃದ್ದಿಮಾನ್ ಸಾಹಾ ದಾಖಲೆ ಸರಿಗಟ್ಟಿದರು. 54 ಎಸೆತಗಳಲ್ಲಿ ಅಜೇಯ 112 ರನ್ ಕಲೆಹಾಕಿರುವ ಪಾಟೀದಾರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್‌ಗಳಿದ್ದವು.

RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?

2022ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಪ್ಲೇಯರ್

2022ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಪ್ಲೇಯರ್

ಆರ್‌ಸಿಬಿಗೆ ಈ ಸೀಸನ್‌ನಲ್ಲಿ ಸಿಕ್ಕ ಅತ್ಯಂತ ಅಮೂಲ್ಯವಾದ ವರದಾನ ಅಂದ್ರೆ ಅದು ರಜತ್ ಪಾಟೀದಾರ್. ಏಕೆಂದರೆ ರಜತ್ ಪಾಟೀದಾರ್ ಅನ್ನು ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವೊಂದು ಫ್ರಾಂಚೈಸಿಯು ಖರೀದಿಸಿರಲಿಲ್ಲ. ಆದ್ರೆ ಅದೃಷ್ಟವಶಾತ್ ಆರ್‌ಸಿಬಿ ತಂಡವು ಗಾಯಾಳು ಲವನೀತ್ ಸೀಸೋಡಿಯಾ ಬದಲು ಬದಲಿ ಆಟಗಾರನಾಗಿ ಪಾಟೀದಾರ್ ಅನ್ನು ತಂಡಕ್ಕೆ ಸೇರಿಸಿಕೊಂಡಿತು.

ಮಧ್ಯಪ್ರದೇಶದ ಇಂದೋರ್‌ನ ಈ ಬ್ಯಾಟರ್‌ ಆರ್‌ಸಿಬಿಯಲ್ಲಿ ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡಿದ್ದು, ಟಾಪ್ ಆರ್ಡರ್‌ನಲ್ಲಿ ಆರ್‌ಸಿಬಿಯ ಬ್ಯಾಟಿಂಗ್ ಬೆನ್ನಲುಬು ಆಗಿ ಈ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ತನ್ನ ಜೀವನದಲ್ಲಿ ಅತಿ ದೊಡ್ಡ ಪಾತ್ರವಹಿಸಿದ ದಿಗ್ಗಜ ಆಟಗಾರನನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

2021ರ ಸೀಸನ್‌ನಲ್ಲೂ ಆರ್‌ಸಿಬಿ ಪರ ಆಡಿದ್ದ ರಜತ್

2021ರ ಸೀಸನ್‌ನಲ್ಲೂ ಆರ್‌ಸಿಬಿ ಪರ ಆಡಿದ್ದ ರಜತ್

ಹೌದು ರಜತ್ ಪಾಟೀದಾರ್ ಕಳೆದ ಸೀಸನ್‌ನಲ್ಲೂ ಆರ್‌ಸಿಬಿ ಪರ ಮೂಲ ಬೆಲೆ 20 ಲಕ್ಷ ರೂಪಾಯಿಗೆ ತಂಡದಲ್ಲಿ ಆಡಿದ್ದರು. 4 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಪಾಟೀದಾರ್ ಗಳಿಸಿದ್ದು ಕೇವಲ 71ರನ್ ಹೀಗಾಗಿ ಆತನಿಗೆ ಹೆಚ್ಚು ಅವಕಾಶ ಸಿಗದೆ ಬೆಂಚ್ ಕಾದರು.

ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಯುವ ಆಟಗಾರ

ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಯುವ ಆಟಗಾರ

ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಆಡಿರುವ 31 ಪಂದ್ಯಗಳಲ್ಲಿ 30.75ರ ಸರಾಸರಿಯಲ್ಲಿ 861 ರನ್‌ಗಳನ್ನು ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ 138.64ರ ಅದ್ಭುತ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಮಧ್ಯ ಪ್ರದೇಶ ಪರ ಆಡಿದ 39 ಪಂದ್ಯಗಳಿಂದ 2588 ರನ್‌ಗಳನ್ನು ಗಳಿಸಿರುವ ಇಂದೋರ್‌ ಮೂಲದ 28 ವರ್ಷದ ಆಟಗಾರ 40.43ರ ಸರಾಸರಿ ಹೊಂದಿದ್ದಾರೆ. ಇದರಲ್ಲಿ 7 ಶತಕಗಳು ಮತ್ತು 14 ಅರ್ಧಶತಕಗಳು ಸೇರಿವೆ. ಈ ಸೀಸನ್‌ನಲ್ಲಿ ಹರಾಜಾಗದೆ ಉಳಿದಿದ್ದ ಈತನನ್ನು 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಮರಳಿ ಸೇರಿಕೊಳ್ಳುವ ಮೂಲಕ ಕಮಾಲ್ ಮಾಡಿದರು.

ಆರ್‌ಸಿಬಿ ತಂಡವು ಪಾಟೀದಾರ್ ಶತಕದಿಂದ ಎಲಿಮಿನೇಟರ್ ಪಂದ್ಯದಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಲಕ್ನೋ 14ರನ್‌ಗಳಿಂದ ಸೋಳನ್ನ ಕಂಡಿತು.

Story first published: Thursday, May 26, 2022, 15:37 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X