ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ ತಂಡ ಸೇರುವುದೇ ನನ್ನ ದೊಡ್ಡ ಆಸೆ ಎಂದ ರವಿಚಂದ್ರನ್ ಅಶ್ವಿನ್

IPL 2022: I want to play for my home CSK again says Ravichandran Ashwin

ಮುಂಬರುವ ಹದಿನೈದನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ನೂತನ ಫ್ರಾಂಚೈಸಿಗಳಾದ ಅಹ್ಮದಾಬಾದ್ ಮತ್ತು ಲಕ್ನೋ ಸೇರ್ಪಡೆಗೊಳ್ಳುತ್ತಿದ್ದು, ಒಟ್ಟು 10 ತಂಡಗಳು ಐಪಿಎಲ್ ಟ್ರೋಫಿಗಾಗಿ ಸೆಣಸಾಟವನ್ನು ನಡೆಸಲಿವೆ. ಹೀಗೆ ಹೊಸ ಫ್ರಾಂಚೈಸಿಗಳು ಸೇರ್ಪಡೆಯಾಗಿರುವ ಕಾರಣದಿಂದಾಗಿ ಮುಂಬರುವ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಡೆಸಲೇಬೇಕಾಗಿದೆ.

ಹೀಗಾಗಿ ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಡೆಸಬೇಕಿದ್ದ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯನ್ನು ಇತ್ತೀಚೆಗಷ್ಟೇ ನಡೆಸಲಾಯಿತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು ಮಿಕ್ಕ ಆಟಗಾರರನ್ನು ಮೆಗಾ ಹರಾಜಿಗೆ ಕಳುಹಿಸಿವೆ. ಹೀಗೆ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಆ್ಯನ್ರಿಚ್ ನಾರ್ಕಿಯಾ ಈ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡ ಕಾರಣ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ರಿಟೈನ್ ಆಗದೇ ಹೊರಬಿದ್ದಿದ್ದಾರೆ.

ಲಕ್ನೋ, ಅಹ್ಮದಾಬಾದ್ ತಂಡ ಸೇರಲಿದ್ದಾರೆ ಈ 6 ಆಟಗಾರರು; ಆರ್‌ಸಿಬಿ ಅಭಿಮಾನಿಗಳಿಗಿದು ಬೇಸರದ ಸುದ್ದಿಲಕ್ನೋ, ಅಹ್ಮದಾಬಾದ್ ತಂಡ ಸೇರಲಿದ್ದಾರೆ ಈ 6 ಆಟಗಾರರು; ಆರ್‌ಸಿಬಿ ಅಭಿಮಾನಿಗಳಿಗಿದು ಬೇಸರದ ಸುದ್ದಿ

ಈ ಮೂಲಕ ಮುಂಬರಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರವಿಚಂದ್ರನ್ ಅಶ್ವಿನ್ ಪಾಲ್ಗೊಳ್ಳಲಿದ್ದು ಯಾವ ತಂಡದ ಪಾಲಾಗಲಿದ್ದಾರೆ ಎಂಬುದರ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಕೂಡ ನಡೆದಿವೆ. ಇನ್ನು ಈ ಕುರಿತಾಗಿ ಇದೀಗ ಸ್ವತಃ ರವಿಚಂದ್ರನ್ ಅಶ್ವಿನ್ ಅವರೇ ಪ್ರತಿಕ್ರಿಯಿಸಿದ್ದು ತಾನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮತ್ತೆ ಐಪಿಎಲ್ ಆಡಬೇಕು ಎಂಬುದೇ ತನ್ನ ದೊಡ್ಡ ಆಸೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

"ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದಂತಹ ಫ್ರಾಂಚೈಸಿಯಾಗಿದ್ದು, ಅದು ನನ್ನ ಶಾಲೆ ಇದ್ದಂತೆ. ಪ್ರಿ-ಕೆಜಿಯಿಂದ ಹಿಡಿದು ಹತ್ತನೇ ತರಗತಿವರೆಗೆ ನಾನು ಚೆನ್ನೈ ಸೂಪರ್ ಕಿಂಗ್ಸ್ ಶಾಲೆಯಲ್ಲಿ ಓದಿದವನು. ಪ್ರೌಢ ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳು ಕಾಲೇಜು ವ್ಯಾಸಂಗ ಮಾಡಲು ಬೇರೆ ಕಡೆ ಹೇಗೆ ಹೋಗುತ್ತಾರೋ ಅದೇ ರೀತಿ ನಾನು ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟ ನಂತರ ಇತರ ತಂಡಗಳ ಪರ ಆಟಗಾರನಾಗಿ ಕಣಕ್ಕಿಳಿದಿದ್ದೆ. ಆದರೆ ಅಂತಿಮವಾಗಿ ವಿದ್ಯಾಭ್ಯಾಸವೆಲ್ಲ ಮುಗಿದ ಮೇಲೆ ಮನೆಗಳಿಗೆ ತೆರಳಬೇಕಲ್ಲವೇ? ಅದೇ ರೀತಿ ನಾನು ಕೂಡ ನನ್ನ ಮನೆಯಾದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಮರಳುವ ದೊಡ್ಡ ಆಸೆಯನ್ನು ಹೊಂದಿದ್ದೇನೆ. ಆದರೆ ಹರಾಜು ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಎಂಬುದರ ಮೇಲೆ ಇದೆಲ್ಲಾ ನಿಂತಿದೆ" ಎಂದು ರವಿಚಂದ್ರನ್ ಅಶ್ವಿನ್ 6 ವರ್ಷಗಳ ಬಳಿಕ ಪುನಃ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಮಾತ್ರವಲ್ಲ ಈತನಿಗೆ ಆರ್‌ಸಿಬಿ ಕೂಡ ಕೈಕೊಟ್ಟಿತು ಎಂದು ಕಿಡಿಕಾರಿದ ಮಾಜಿ ಕ್ರಿಕೆಟಿಗಬಿಸಿಸಿಐ ಮಾತ್ರವಲ್ಲ ಈತನಿಗೆ ಆರ್‌ಸಿಬಿ ಕೂಡ ಕೈಕೊಟ್ಟಿತು ಎಂದು ಕಿಡಿಕಾರಿದ ಮಾಜಿ ಕ್ರಿಕೆಟಿಗ

ಅಶ್ವಿನ್ ಐಪಿಎಲ್ ಹಾದಿ: ಐಪಿಎಲ್ ಉದ್ಘಾಟನಾ ಆವೃತ್ತಿಯಿಂದ 2015ನೇ ಸಾಲಿನ ಆವೃತ್ತಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿ ಸತತವಾಗಿ 8 ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬ್ಯಾನ್ ಆದ ನಂತರ 2016 ಮತ್ತು 2017ನೇ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್ಜಿಯಂಟ್ ತಂಡದ ಪರ ಕಣಕ್ಕಿಳಿದಿದ್ದರು. ನಂತರ 2018ನೇ ಸಾಲಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಫಲವಾದ ಕಾರಣ ಅಶ್ವಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದರು. ಹೀಗೆ ಪಂಜಾಬ್ ಕಿಂಗ್ಸ್ ತಂಡದ ತೆಕ್ಕೆಗೆ ಬಿದ್ದ ರವಿಚಂದ್ರನ್ ಅಶ್ವಿನ್ 2019ನೇ ಸಾಲಿನ ಐಪಿಎಲ್ ಆವೃತ್ತಿಯಲ್ಲಿ ನಾಯಕನಾಗಿ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಮತ್ತು ಅಂತಿಮವಾಗಿ 2020ರಲ್ಲಿ ನಡೆದಿದ್ದ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು.

Story first published: Saturday, December 18, 2021, 21:18 [IST]
Other articles published on Dec 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X