ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬುಮ್ರಾ ದಾಖಲೆ: ಸತತ ಏಳು ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್

jasprit bumrah

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ(ಮೇ. 22) ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಐಪಿಎಲ್ 2022 ರ ತನ್ನ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು. ಹೀಗಾಗಿ ಮುಂಬೈ ಎಂಟು ಅಂಕಗಳೊಂದಿಗೆ ಋತುವಿನಲ್ಲಿ ನಾಲ್ಕನೇ ಗೆಲುವು ದಾಖಲಿಸಿತು.

ಚೆನ್ನೈ ಕೂಡ 8 ಅಂಕಗಳೊಂದಿಗೆ ಇದ್ದರೂ ಸಹ ಮುಂಬೈಗಿಂತ ಸ್ವಲ್ಪ ಉತ್ತಮ ರನ್ ರೇಟ್ ಹೊಂದಿರುವ ಕಾರಣ ಚೆನ್ನೈ 9ನೇ ಸ್ಥಾನದಲ್ಲಿದೆ. ಮುಂಬೈ 10ನೇ ಸ್ಥಾನದಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಸತತ ಎರಡನೇ ಬಾರಿಗೆ ಐಪಿಎಲ್‌ನಲ್ಲಿ ಪ್ಲೇ-ಆಫ್ ತಲುಪಲು ವಿಫಲವಾಗಿದೆ. ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ.

ಮೊದಲ 8 ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಮುಂಬೈಗೆ ಇತಿಹಾಸದಲ್ಲಿ ಕಾಣದ ಕೆಟ್ಟ ಸೋಲನ್ನೆಲ್ಲಾ ಕಂಡಿದೆ. ಇದರ ನಡುವೆ ತಂಡದಲ್ಲಿ ತಿಲಕ್ ವರ್ಮಾ, ಟಿಮ್ ಡೇವಿಡ್, ಜಸ್ಪ್ರೀತ್ ಬುಮ್ರಾ ಉತ್ತಮ ಪ್ರದರ್ಶನ ನೀಡಿದರು. ಋತುವಿನ ಆರಂಭದಲ್ಲಿ ಹೆಚ್ಚಿನ ಪ್ರಭಾವ ಬೀರದ ವೇಗಿ ಜಸ್ಪ್ರೀತ್ ಬುಮ್ರಾ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಪ್ರದರ್ಶನಕ್ಕಾಗಿ ಬುಮ್ರಾ ಅಪರೂಪದ ದಾಖಲೆಯನ್ನು ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ ಕಬಳಿಸಿದ ಬೌಲರ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ ಕಬಳಿಸಿದ ಬೌಲರ್

ಈ ಋತುವಿನಲ್ಲಿ ಜಸ್ಪ್ರೀತ್ ಬುಮ್ರಾ ಕೆಲವು ಪಂದ್ಯಗಳಲ್ಲಿ ವಿಕೆಟ್ ಪಡೆದಿಲ್ಲ. ಆದ್ರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದು ಹಿಂದಿನ ಫಾರ್ಮ್ ಅನ್ನು ಮರಳಿ ಪಡೆದರು. ಆ ಪಂದ್ಯದಲ್ಲಿ ಅವರು ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದು ಮಾತ್ರವಲ್ಲದೆ ಅವರ 5/10 ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

ಅಂದಿನಿಂದ ಟೂರ್ನಿಯ ಅಂತಿಮ ಪಂದ್ಯದವರೆಗೂ ತಮ್ಮ ಸ್ಥಿರ ಬೌಲಿಂಗ್ ಪ್ರದರ್ಶನ ತೋರಿದರು. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಾಲ್ಕು ಓವರ್‌ಗಳ ಕೋಟಾ ಪಂದ್ಯದಲ್ಲಿ ಅವರು ದೆಹಲಿ 3/25 ಬೌಲಿಂಗ್ ಮೂಲಕ ಸೋಲಿಸಿದರು. ಅವರು ಪೃಥ್ವಿ ಶಾ, ಮಿಚೆಲ್ ಮಾರ್ಷ್ ಮತ್ತು ರೋವ್ಮನ್ ಪೊವೆಲ್ ಅವರಂತಹ ಹಿಟ್ಟರ್‌ಗಳನ್ನ ತನ್ನ ಖೆಡ್ಡಾಕ್ಕೆ ಕೆಡವಿದರು ಮತ್ತು ದೆಹಲಿಯ ಸ್ಕೋರ್‌ ಬೋರ್ಡ್‌ ಅನ್ನು ಸೀಮಿತಗೊಳಿಸಿದರು. ಇದ್ರಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ಪಡೆಯಬೇಕಾದುದಕ್ಕಿಂತ ಕಡಿಮೆ ಸ್ಕೋರ್ ಮಾಡಲು ಸಾಧ್ಯವಾಯಿತು.

ಸತತ ಏಳು ಸೀಸನ್‌ಗಳಲ್ಲಿ 15ಕ್ಕೂ ಹೆಚ್ಚು ವಿಕೆಟ್

ಸತತ ಏಳು ಸೀಸನ್‌ಗಳಲ್ಲಿ 15ಕ್ಕೂ ಹೆಚ್ಚು ವಿಕೆಟ್

ಶನಿವಾರದ ಪಂದ್ಯದಲ್ಲಿ ಬುಮ್ರಾ ಅವರ ಅಮೋಘ ಪ್ರದರ್ಶನವು ಸತತ ಏಳು ಐಪಿಎಲ್ ಸೀಸನ್‌ಗಳಲ್ಲಿ 15 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಈ ಸಾಧನೆ ಮಾಡಿದರು. ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಬುಮ್ರಾ ಆಗಿದ್ದಾರೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ ಅನುಭವಿ ಆಟಗಾರ

ಬೆಸ್ಟ್ ಓಪನರ್ಸ್ ಆಫ್ ಐಪಿಎಲ್ 2022 | OneIndia Kannada
ಐಪಿಎಲ್ 2022ರಲ್ಲಿ ಬುಮ್ರಾ ರೆಕಾರ್ಡ್ಸ್‌

ಐಪಿಎಲ್ 2022ರಲ್ಲಿ ಬುಮ್ರಾ ರೆಕಾರ್ಡ್ಸ್‌

ಬುಮ್ರಾ ಈ ಐಪಿಎಲ್ 2022 ರಲ್ಲಿ 14 ಪಂದ್ಯಗಳಲ್ಲಿ 25.53 ರ ಸರಾಸರಿಯಲ್ಲಿ ಮತ್ತು 7.18 ರ ಎಕಾನಮಿ ದರದಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಪಡೆದ ಹೆಚ್ಚಿನ ವಿಕೆಟ್‌ಗಳು ಪ್ರಮುಖ ಬ್ಯಾಟ್ಸ್‌ಮನ್‌ಗಳೇ ಆಗಿರುವುದು ವಿಶೇಷ. ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಮೊದಲು ಬ್ಯಾಟಿಂಗ್‌ ಮಾಡಿತು. ತಂಡ ನೀಡಿದ್ದ 160 ರನ್ ಗಳ ಗುರಿಯನ್ನು ಮುರಿಯುವಲ್ಲಿ ಮುಂಬೈ ಬ್ಯಾಟ್ಸ್ ಮನ್ ಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇಶಾನ್ ಕಿಶನ್ (35 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 48 ರನ್ ದಾಖಲಿಸದರು) ಕೊನೆಯಲ್ಲಿ ಟಿಮ್ ಡೇವಿಡ್ ಅಬ್ಬರದಿಂದಾಗಿ ಮುಂಬೈ ಗೆದ್ದಿತು, ಜೊತೆಗೆ ಆರ್‌ಸಿಬಿ ಪ್ಲೇಆಫ್ ತಲುಪಿದೆ.

Story first published: Sunday, May 22, 2022, 18:49 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X