ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?

Jos Buttler ಈ ಬಾರಿ RCBಯನ್ನು ಆಚೆ ತಳ್ಳಿದರು | Oneindia Kannada

14 ವರ್ಷಗಳಿಂದ ಯಾವುದೇ ಟ್ರೋಫಿ ಗೆಲ್ಲದೇ ಬರಿಗೈನಲ್ಲಿ ಹಿಂದಿರುಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಅದೇ ಹಾದಿಯನ್ನು ಹಿಡಿದಿದೆ. ಯಶಸ್ವಿಯಾಗಿ ಪ್ಲೇ ಆಫ್ ಹಂತವನ್ನು ಸತತ ಮೂರನೇ ಬಾರಿಗೆ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿತ್ತು.

ಆಡಿದ್ದು ಸಾಕು, ಮೊದಲು ಸ್ಟೇಡಿಯಂನಿಂದ ಆಚೆ ನಡೆಯಪ್ಪ: ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರುದ್ಧ ಫ್ಯಾನ್ಸ್ ಕಿಡಿ!ಆಡಿದ್ದು ಸಾಕು, ಮೊದಲು ಸ್ಟೇಡಿಯಂನಿಂದ ಆಚೆ ನಡೆಯಪ್ಪ: ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರುದ್ಧ ಫ್ಯಾನ್ಸ್ ಕಿಡಿ!

ಆದರೆ ಶುಕ್ರವಾರ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 158 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.

RCB vs RR Qualifier 2: ಈ ಡೇಂಜರಸ್ ಆಟಗಾರನ ವಿಕೆಟ್ ಪಡೆಯದಿದ್ದರೆ ಆರ್‌ಸಿಬಿ ಗೆಲುವು ಅನುಮಾನ!RCB vs RR Qualifier 2: ಈ ಡೇಂಜರಸ್ ಆಟಗಾರನ ವಿಕೆಟ್ ಪಡೆಯದಿದ್ದರೆ ಆರ್‌ಸಿಬಿ ಗೆಲುವು ಅನುಮಾನ!

ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಚಚ್ಚಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿ ಫೈನಲ್ ಪ್ರವೇಶವನ್ನು ಮಾಡಿತು. ರಾಜಸ್ತಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ 60 ಎಸೆತಗಳಲ್ಲಿ 106 ರನ್ ಕಲೆಹಾಕಿ ಅಜೇಯರಾಗಿ ಉಳಿಯುವುದರ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಉತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವುದರ ಜತೆಗೆ ಹಲವು ವಿವಿಧ ಬಹುಮಾನಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹೀಗೆ ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಗೆದ್ದ ಒಟ್ಟು ಪ್ರಶಸ್ತಿ ಹಾಗೂ ಬಹುಮಾನ ಧನಗಳ ವಿವರ ಮುಂದೆ ಇದೆ ಓದಿ.

6 ಪ್ರಶಸ್ತಿಗಳನ್ನು ಪಡೆದ ಬಟ್ಲರ್

6 ಪ್ರಶಸ್ತಿಗಳನ್ನು ಪಡೆದ ಬಟ್ಲರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫೈನಲ್ ಪ್ರವೇಶಿಸುವ ಕನಸಿಗೆ ತಣ್ಣೀರನ್ನು ಎರಚಿದ ಜೋಸ್ ಬಟ್ಲರ್ ತಮ್ಮ ಅಮೋಘ ಪ್ರದರ್ಶನಕ್ಕೆ ಈ ಕೆಳಕಂಡ ಪ್ರಶಸ್ತಿಗಳನ್ನು ಪಡೆದುಕೊಂಡರು

ಗೇಮ್ ಚೇಂಜರ್ ಆಫ್ ದಿ ಮ್ಯಾಚ್ : ಜೋಸ್ ಬಟ್ಲರ್

ಲೆಟ್ಸ್ ಕ್ರ್ಯಾಕ್ ಇಟ್ ಸಿಕ್ಸಸ್: ಜೋಸ್ ಬಟ್ಲರ್

ಪವರ್ ಪ್ಲೇಯರ್ ಆಫ್ ದಿ ಮ್ಯಾಚ್ : ಜೋಸ್ ಬಟ್ಲರ್

ಮೋಸ್ಟ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ : ಜೋಸ್ ಬಟ್ಲರ್

ಆನ್ ದ ಗೋ ಫೋರ್ಸ್ : ಜೋಸ್ ಬಟ್ಲರ್

ಮ್ಯಾನ್ ಆಫ್ ದಿ ಮ್ಯಾಚ್: ಜೋಸ್ ಬಟ್ಲರ್

ಹತ್ತು ಲಕ್ಷ ಬಾಚಿದ ಜೋಸ್ ಬಟ್ಲರ್

ಹತ್ತು ಲಕ್ಷ ಬಾಚಿದ ಜೋಸ್ ಬಟ್ಲರ್

ಈ 1 ಪಂದ್ಯದಲ್ಲಿ ಬರೋಬ್ಬರಿ 6 ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡ ಜೋಸ್ ಬಟ್ಲರ್ ಈ ಎಲ್ಲಾ ಪ್ರಶಸ್ತಿಗಳೂ ಸೇರಿ 10 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಅವುಗಳ ವಿವರ ಕೆಳಕಂಡಂತಿದೆ.

ಗೇಮ್ ಚೇಂಜರ್ ಆಫ್ ದಿ ಮ್ಯಾಚ್ : 1 ಲಕ್ಷ

ಲೆಟ್ಸ್ ಕ್ರ್ಯಾಕ್ ಇಟ್ ಸಿಕ್ಸಸ್: 1 ಲಕ್ಷ

ಪವರ್ ಪ್ಲೇಯರ್ ಆಫ್ ದಿ ಮ್ಯಾಚ್ : 1 ಲಕ್ಷ

ಮೋಸ್ಟ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ : 1 ಲಕ್ಷ

ಆನ್ ದ ಗೋ ಫೋರ್ಸ್ : 1 ಲಕ್ಷ

ಮ್ಯಾನ್ ಆಫ್ ದಿ ಮ್ಯಾಚ್: 5 ಲಕ್ಷ

ಉಳಿದೆರಡು ಪ್ರಶಸ್ತಿ ಪ್ರಸಿದ್ಧ್ ಕೃಷ್ಣ ಮತ್ತು ಮ್ಯಾಕ್ಸ್‌ವೆಲ್ ಪಾಲು

ಉಳಿದೆರಡು ಪ್ರಶಸ್ತಿ ಪ್ರಸಿದ್ಧ್ ಕೃಷ್ಣ ಮತ್ತು ಮ್ಯಾಕ್ಸ್‌ವೆಲ್ ಪಾಲು

ಈ ಪಂದ್ಯದಲ್ಲಿ ಅತಿ ವೇಗದ ಎಸೆತವನ್ನು ( 150.3 kmph ) ಎಸೆದ ಪ್ರಸಿದ್ಧ್ ಕೃಷ್ಣ ಫಾಸ್ಟೆಸ್ಟ್ ಡೆಲಿವರಿ ಪ್ರಶಸ್ತಿಯನ್ನು ಪಡೆದು 1 ಲಕ್ಷ ರೂಪಾಯಿಗಳನ್ನು ಪಡೆದುಕೊಂಡರು ಹಾಗೂ 13 ಎಸೆತಗಳಲ್ಲಿ 24 ರನ್ ಚಚ್ಚಿ 184.62 ಸ್ಟ್ರೈಕ್ ರೇಟ್ ಹೊಂದಿದ ಗ್ಲೆನ್ ಮ್ಯಾಕ್ಸ್‌ವೆಲ್ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದು 1 ಲಕ್ಷ ಪಡೆದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, May 28, 2022, 11:05 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X