IPL 2022 Final: ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಎನಿಸಿಕೊಳ್ಳಲು ಬಟ್ಲರ್ ಮಾಡಬೇಕಿರುವುದು ಇಷ್ಟೇ

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಮುಕ್ತಾಯದ ದಿನಕ್ಕೆ ಬಂದು ತಲುಪಿದೆ. ಇಂದು ( ಮೇ 29 ) ಟೂರ್ನಿಯ ಬಹುನಿರೀಕ್ಷಿತ ಫೈನಲ್ ಪಂದ್ಯ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, 125000 ಕ್ರಿಕೆಟ್ ಪ್ರೇಕ್ಷಕರು ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಮಹಾ ಕಾಳಗಕ್ಕೆ ಸಾಕ್ಷಿಯಾಗಲಿದ್ದಾರೆ.

IPL 2022 Final: ಬಲಿಷ್ಠ ಗುಜರಾತ್ ವಿರುದ್ಧ ಕಣಕ್ಕಿಳಿಯುವ ಈ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುತ್ತಾ?IPL 2022 Final: ಬಲಿಷ್ಠ ಗುಜರಾತ್ ವಿರುದ್ಧ ಕಣಕ್ಕಿಳಿಯುವ ಈ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುತ್ತಾ?

ಪಂದ್ಯ ರಾತ್ರಿ 8 ಗಂಟೆಗೆ ಶುರುವಾಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿಯೇ ಟ್ರೋಫಿ ಎತ್ತಿಹಿಡಿಯುವ ಯೋಜನೆಯಲ್ಲಿದ್ದರೆ, ಉದ್ಘಾಟನಾ ಆವೃತ್ತಿಯಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದ ರಾಜಸ್ಥಾನ್ ರಾಯಲ್ಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವತ್ತ ಚಿತ್ತ ನೆಟ್ಟಿದೆ.

ಐಪಿಎಲ್ 2022: ಫೈನಲ್ ಪಂದ್ಯದಲ್ಲಿ ಈ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಗ್ರೇಮ್ ಸ್ಮಿತ್ಐಪಿಎಲ್ 2022: ಫೈನಲ್ ಪಂದ್ಯದಲ್ಲಿ ಈ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಗ್ರೇಮ್ ಸ್ಮಿತ್

ಇನ್ನು ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಈ ಬಾರಿಯ ಟೂರ್ನಿಯಲ್ಲಿ ಒಂದನೇ ಕ್ವಾಲಿಫೈಯರ್ ಪಂದ್ಯವೂ ಸೇರಿದಂತೆ 2 ಬಾರಿ ಕಣಕ್ಕಿಳಿದಿದ್ದು, ಎರಡೂ ಪಂದ್ಯಗಳಲ್ಲಿಯೂ ಸೋತು ಹಿನ್ನೆಡೆಯನ್ನು ಅನುಭವಿಸಿದೆ. ಆದರೆ ಕಳೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜೋಸ್ ಬಟ್ಲರ್ ಅಬ್ಬರದ ಶತಕದ ನೆರವಿನಿಂದ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಪಂದ್ಯ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಪಂದ್ಯದಲ್ಲಿಯೂ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಅಬ್ಬರಿಸುವ ಸಾಧ್ಯತೆಗಳು ಹೆಚ್ಚಿದ್ದು, ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದು ಹಾಕುವ ಹಂತದಲ್ಲಿದ್ದಾರೆ. ಈ ಕುರಿತ ವಿವರ ಮುಂದಿದೆ..

ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಎನಿಸಿಕೊಳ್ಳಲು ಬಟ್ಲರ್ ಈ ರೀತಿ ಆಡಬೇಕಿದೆ

ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಎನಿಸಿಕೊಳ್ಳಲು ಬಟ್ಲರ್ ಈ ರೀತಿ ಆಡಬೇಕಿದೆ

2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 4 ಶತಕಗಳನ್ನು ಬಾರಿಸಿ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳಿದ್ದವು. ಆದರೆ ಕಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟೂರ್ನಿಯಲ್ಲಿನ ತನ್ನ ನಾಲ್ಕನೇ ಶತಕ ಬಾರಿಸಿದ ಜೋಸ್ ಬಟ್ಲರ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿದೂಗಿಸಿದ್ದಾರೆ. ಇದೀಗ ಫೈನಲ್ ಪಂದ್ಯದಲ್ಲಿಯೂ ಜೋಸ್ ಬಟ್ಲರ್ ಶತಕ ಬಾರಿಸಿದರೆ ಈ ಬಾರಿಯ ಆವೃತ್ತಿಯಲ್ಲಿ 5 ಶತಕಗಳನ್ನು ಬಾರಿಸಿದಂತಾಗಲಿದ್ದು ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡು ನಂಬರ್ 1 ಎನಿಸಿಕೊಳ್ಳಲಿದ್ದಾರೆ.

ಕೊಹ್ಲಿಯ ಈ ದಾಖಲೆ ಮುರಿಯುವುದು ಕಷ್ಟ

ಕೊಹ್ಲಿಯ ಈ ದಾಖಲೆ ಮುರಿಯುವುದು ಕಷ್ಟ

ಇನ್ನು 2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 973 ರನ್‌ಗಳನ್ನು ಚಚ್ಚಿ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇಂದಿಗೂ ಸಹ ಯಾವುದೇ ಆಟಗಾರರೂ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಈ ಬಾರಿ ಜೋಸ್ ಬಟ್ಲರ್ ಆರಂಭದಲ್ಲಿ ಅಬ್ಬರಿಸಿದ್ದನ್ನು ಕಂಡಿದ್ದ ಕ್ರಿಕೆಟ್ ಪ್ರೇಮಿಗಳು ಕೊಹ್ಲಿಯ ಈ ದಾಖಲೆಯನ್ನು ಬಟ್ಲರ್ ಮುರಿದು ಹಾಕಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಟೂರ್ನಿಯ ಮಧ್ಯಂತರದಲ್ಲಿ ಮಂಕಾದ ಬಟ್ಲರ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಇಲ್ಲಿಯವರೆಗೂ 16 ಪಂದ್ಯಗಳನ್ನಾಡಿರುವ ಬಟ್ಲರ್ 824 ರನ್ ದಾಖಲಿಸಿದ್ದು, ಕೊಹ್ಲಿಯ 973 ರನ್ ದಾಖಲೆ ಮುರಿದು ಹಾಕಲು ಈ ಪಂದ್ಯದಲ್ಲಿ 149 ರನ್ ಬಾರಿಸಬೇಕಿದೆ ಹಾಗೂ ಇದು ತೀರಾ ಕಷ್ಟಸಾಧ್ಯ.

Hardik Pandya, Team Indiaಗೆ ಮರಳಿ ಬಂದ ಕಥೆ | #cricket | OneIndia Kannada
ವಿರಾಟ್ ಕೊಹ್ಲಿಯ 2016ರ ಐಪಿಎಲ್ ಅಂಕಿಅಂಶಗಳು

ವಿರಾಟ್ ಕೊಹ್ಲಿಯ 2016ರ ಐಪಿಎಲ್ ಅಂಕಿಅಂಶಗಳು

ವಿರಾಟ್ ಕೊಹ್ಲಿ 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀಡಿದ್ದ ಪ್ರದರ್ಶನ ಪ್ರತಿಯೊಬ್ಬ ಕ್ರಿಕೆಟಿಗನೂ ಕೂಡ ಆ ರೀತಿಯ ರನ್ ಕಲೆ ಹಾಕಬೇಕು ಎಂದುಕೊಳ್ಳುವಂತಹ ಪ್ರದರ್ಶನ ಎಂದೇ ಹೇಳಬಹುದು. ಆ ಆವೃತ್ತಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ 973 ರನ್ ಚಚ್ಚಿ ಅಬ್ಬರಿಸಿದ್ದರು. ಗರಿಷ್ಠ 113 ರನ್ ಕಲೆಹಾಕಿದ್ದ ಕೊಹ್ಲಿ 4 ಶತಕಗಳು ಹಾಗೂ 7 ಅರ್ಧ ಶತಕಗಳನ್ನು ಬಾರಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 29, 2022, 10:47 [IST]
Other articles published on May 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X