ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಹುಟ್ಟು ನಾಯಕ: ಯುವ ನಾಯಕನ ಬಗ್ಗೆ ಆಸಿಸ್ ಮಾಜಿ ಕ್ರಿಕೆಟಿಗನ ಪ್ರಶಂಸೆ

IPL 2022: KKR Mentor praises Shreyas Iyer said he is a born leader

ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಈ ಅದ್ದೂರಿ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಿನ ತಂಡಗಳು ನೂತನ ನಾಯಕನ ಅಡಿಯಲ್ಲಿ ಕಣಕ್ಕಿಳಿಯುತ್ತಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ನೂತನ ನಾಯಕನ ಮುಂದಾಳತ್ವದಲ್ಲಿ ಈ ಬಾರಿ ಕಣಕ್ಕಿಳಿಯಲು ಸಜ್ಜಾಗಿದ್ದು ಶ್ರೇಯಸ್ ಐಯ್ಯರ್‌ಗೆ ಕೆಕೆಆರ್ ತಂಡದ ನಾಯಕತ್ವದ ಹೊಣೆಗಾರಿಗೆ ದೊರೆತಿದೆ.

ಇನ್ನು ಐಪಿಎಲ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಇರುವಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಡೇವಿಡ್ ಹಸ್ಸಿ ತಂಡದ ನಾಯಕನ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಶ್ರೇಯಸ್ ಐಯ್ಯರ್ ಓರ್ವ ನಿಜವಾದ ನಾಯಕನಾಗಿದ್ದು ತಂಡದೊಂದಿಗೆ ಸಾಧನೆ ಮಾಡಲು ಏನು ಮಾಡಬೇಕಿದೆ ಎಂಬ ಬಗ್ಗೆ ಅವರಲ್ಲಿ ಅದ್ಭುತ ರೀತಿಯ ಸ್ಪಷ್ಟತೆತಯಿದೆ ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ಹಸ್ಸಿ.

ಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾ

ಕಳೆದ ಬಾರಿಯ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಇಯಾನ್ ಮಾರ್ಗನ್ ಹಾಗೂ ಅನುಭವಿ ದಿನೇಶ್ ಕಾರ್ತಿಕ್ ಇಬ್ಬರನ್ನು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ಹರಾಜಿಗೆ ಬಿಟ್ಟುಕೊಟ್ಟಿತ್ತು. ಹೀಗಾಗಿ ಯಾವ ಆಟಗಾರನನ್ನು ಕೆಕೆಆರ್ ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಹರಾಜಿನಲ್ಲಿ ಶ್ರೇಯಸ್ ಐಯ್ಯರ್ ಅವರನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದ ತಕ್ಷಣವೇ ಕೆಕೆಆರ್ ತಂಡದ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರವೂ ದೊರೆತಿತ್ತು. ಮೆಗಾ ಹರಾಜಿನಲ್ಲಿ 12.25 ಕೋಟಿ ನೀಡಿ ಶ್ರೇಯಸ್ ಐಯ್ಯರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.

ಶ್ರೇಯಸ್ ಐಯ್ಯರ್‌ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಹೊಸದಾಗಿದ್ದರೂ ಐಪಿಎಲ್‌ನಲ್ಲಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2020ರಲ್ಲಿ ಡಿಸಿ ತಂಡದ ನಾಯಕನಾಗಿದ್ದ ಐಯ್ಯರ್ ತಂಡವನ್ನು ಚೊಚ್ಚಲ ಬಾರಿಗೆ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೆ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 2021ರ ಆವೃತ್ತಿಯ ಮೊದಲ ಭಾಗದ ಆರಂಭಕ್ಕೂ ಮುನ್ನ ಐಯ್ಯರ್ ಗಾಯಗೊಂಡಿದ್ದ ಕಾರಣ ರಿಷಭ್ ಪಂತ್‌ಗೆ ಡೆಲ್ಲಿ ತಮಡದ ನಾಯಕತ್ವ ವಹಿಸಲಾಗಿತ್ತು.

"ಶ್ರೇಯಸ್ ಐಯ್ಯರ್ ಓರ್ವ ಹುಟ್ಟು ನಾಯಕ. ಆತನ ನಡತೆಯಲ್ಲಿ ಆ ಲಕ್ಷಣಗಳಿವೆ. ಪ್ಯಾಟ್ ಕಮ್ಮಿನ್ಸ್ ಅವರನ್ನು ಕೂಡ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಆತ ಐಯ್ಯರ್‌ಗೆ ಉತ್ತಮ ಉಪನಾಯಕನಾಗಲಿದ್ದಾರೆ. ಅಲ್ಲದೆ ಶ್ರೇಯಸ್ ಐಯ್ಯರ್ ನಾಯಕನಾಗಿ ಮುಂದೆ ನಿಂತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದಿದ್ದಾರೆ ಡೇವಿಡ್ ಹಸ್ಸಿ.

IPL 2022: ಅತಿ ಹೆಚ್ಚು ಶತಕ ಸಿಡಿಸಿದ ತಂಡಗಳಲ್ಲಿ ಆರ್‌ಸಿಬಿಗೆ ಮೊದಲ ಸ್ಥಾನ!IPL 2022: ಅತಿ ಹೆಚ್ಚು ಶತಕ ಸಿಡಿಸಿದ ತಂಡಗಳಲ್ಲಿ ಆರ್‌ಸಿಬಿಗೆ ಮೊದಲ ಸ್ಥಾನ!

ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಚಾಮಿಕಾ ಕರುಣಾರತ್ನ, ಬಾಬಾ ಇಂದ್ರಜಿತ್, ಅಶೋಕ್ ಶರ್ಮಾ, ಪ್ರಥಮ್ ಸಿಂಗ್, ಅಭಿಜಿತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್, ಆರೋನ್ ಫಿಂಚ್

Story first published: Thursday, March 24, 2022, 9:42 [IST]
Other articles published on Mar 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X