ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತ ಸೋಲಿಗೆ ಕಾರಣ ನೀಡಿದ ಶ್ರೇಯಸ್ ಐಯ್ಯರ್: ಇದಕ್ಕೆ ಕ್ಷಮೆಯಿಲ್ಲ ಎಂದ ಕೆಕೆಆರ್ ನಾಯಕ

IPL 2022: KKR skipper Shreyas Iyer statement after 5th consicutive defeat said no excuse

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧಧ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಅನುಭವಿಸುವ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಸತತ ಐದನೇ ಸೋಲು ಅನುಭವಸಿದೆ ಶ್ರೇಯಸ್ ಐಯ್ಯರ್ ಪಡೆ. ಅದ್ಭುತ ಆರಂಭವನ್ನು ಪಡೆದ ಬಳಿಕ ಸತತ ವೈಫಲ್ಯವನ್ನು ಅನುಭವಿಸುತ್ತಿರುವ ಕೆಕೆಆರ್ ಗೆಲುವಿನ ಲಯಕ್ಕೆ ಮರಳಲು ಇದ್ದ ಮತ್ತೊಂದು ಅವಕಾಶವನ್ನು ಕಳೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋಲು ಅನುಭವಿಸುವ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಪ್ಲೇಆಫ್‌ಗೇರುವ ಅವಕಾಶವನ್ನು ಬಹುತೇಕ ಮುಚ್ಚಿಕೊಂಡಿದೆ.

ಈ ಸೋಲಿನ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. ಸತತ ಸೋಲಿನಿಂದಾಗಿ ಬೇಸರವನ್ನು ಹೊರಹಾಕಿದ ಶ್ರೇಯಸ್ ಐಯ್ಯರ್ ಬ್ಯಾಟರ್‌ಗಳಿಂದ ದೊಡ್ಡ ಮೊತ್ತ ಬಾರದಿರುವುದು ಸೋಲಿಗೆ ಕಾರಣವಾಗಿದ್ದು ಇದಕ್ಕೆ ಕ್ಷಮೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ. "ನಾವು ನಿಧಾನವಾಗಿ ಆರಂಭವನ್ನು ಪಡೆದೆವು, ಅಲ್ಲದೆ ಒಂದೆರಡು ವಿಕೆಟ್‌ಗಳನ್ನು ಶೀಗ್ರವಾಗಿ ಕಳೆದುಕೊಂಡೆವು. ಪಿಚ್ ಸ್ವಲ್ಪ ನಿಧಾನವಾಗಿತ್ತು. ಆದರೆ ನಾವು ಉತ್ತಮವಾದ ಮೊತ್ತವನ್ನು ಕಲೆ ಹಾಕಲು ವಿಫಲವಾದೆವು. ಇದಕ್ಕೆ ಕ್ಷಮೆಯಿಲ್ಲ. ಹಿಂದಿರುಗಿ ನೋಡಿ ನಾವು ಎಡವಿದ್ದು ಎಲ್ಲಿ ಎಂಬುದನ್ನು ಕಂಡುಕೊಳ್ಳಬೇಕಿದೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.

ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?

ಇನ್ನು ಈ ಸಂದರ್ಭದಲ್ಲಿ ತಂಡದ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದ್ದಾರೆ. "ಸಾಕಷ್ಟು ಬದಲಾವಣೆಗಳನ್ನು ತಂಡದ ಸಂಯೋಜನೆಯಲ್ಲಿ ಮಾಡಿಕೊಂಡಿದ್ದೇವೆ. ಸೂಕ್ತವಾದ ಸಂಯೋಜನೆಯನ್ನು ಕಂಡುಕೊಳ್ಳಲು ನಮಗೆ ಕಷ್ಟವಾಗಿದೆ. ತಂಡದ ಆಟಗಾರರು ಗಾಯಗೊಳ್ಳುತ್ತಿರುವುದು ಇದಕ್ಕೆ ಕಾರಣ" ಎಂದು ಪಂದ್ಯದ ಮುಕ್ತಾಯದ ಬಳಿಕ ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದ್ದಾರೆ.

"ನಾವು ಜೊತೆಯಾಗಿ ಹೋರಾಡುವ ಅಗತ್ಯವಿದೆ. ನಿರ್ಭೀತ ಕ್ರಿಕೆಟ್ ಆಡಬೇಕು. ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಬ್ಯಾಟಿಂಗ್ ನಡೆಸಬೇಕಿದೆ. ಇನ್ನೂ ಐದು ಪಂದ್ಯಗಳು ಇದ್ದು ಉತ್ತಮ ಪ್ರದರ್ಶನ ನೀಡಬೇಕು. ತಂಡದ ಆಟಗಾರರ ಮೇಲೆ ನಂಬಿಕೆಯಿಟ್ಟು ತಂಡ ಹಾಗೂ ಮ್ಯಾನೇಜ್‌ಮೆಂಟ್‌ಗೆ ಮರಳಿ ಗೆಲುವು ತಂದು ಕೊಡಬೇಕಿದೆ. ಹೊಸದಾಗಿ ಆರಂಭವನ್ನು ಪಡೆಯಬೇಕಿದೆ" ಎಂದು ಶ್ರೇಯಸ್ ಐಯ್ಯರ್ ತಂಡದ ಆಟಗಾರರಿಗೆ ಪ್ರೇರಣೆ ನೀಡುವ ಮಾತುಗಳನ್ನಾಡಿದ್ದಾರೆ.

ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 146 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಾಧಾರಣ ಗುರಿಯನ್ನು ನೀಡಿತು. ನಿತೀಶ್ ರಾಣಾ ನಾಯಕ ಶ್ರೇಯಸ್ ಐಯ್ಯರ್ ಹಾಗೂ ರಿಂಕು ಸಿಂಗ್ ಮಾತ್ರವೇ ಕೆಕೆಆರ್ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕುಲ್‌ದೀಪ್ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದು 4 ವಿಕೆಟ್ ಕಬಳಿಸಿ ಕೆಕೆಆರ್‌ಗೆ ಕಂಟಕವಾದರು.

ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್

ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಆರಂಭಿಕ ಆಘಾತ ಅನುಭವಿಸಿತು. ಪೃಥ್ವಿ ಶಾ, ಮಿಚೆಲ್ ಮಾರ್ಶ್ ಈ ಪಂದ್ಯದಲ್ಲಿ ವಿಫಲವಾದರು. ಆದರೆ ಡೇವಿಡ್ ವಾರ್ನರ್, ರೋವ್ಮನ್ ಪೋವೆಲ್ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಸುಲಭ ಗೆಲುವು ಸಂಪಾದಿಸಲು ಸಾಧ್ಯವಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ
ಬೆಂಚ್: ಮನ್‌ದೀಪ್ ಸಿಂಗ್, ಶ್ರೀಕರ್ ಭರತ್, ಟಿಮ್ ಸೀಫರ್ಟ್, ಲುಂಗಿ ಎನ್‌ಗಿಡಿ, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಖಲೀಲ್ ಅಹ್ಮದ್, ಸರ್ಫರಾಜ್ ಖಾನ್

ಕೆಕೆಆರ್ ಪ್ಲೇಯಿಂಗ್ XI: ಆರೊನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಬಾಬಾ ಇಂದ್ರಜಿತ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ
ಬೆಂಚ್: ಅಜಿಂಕ್ಯ ರಹಾನೆ, ಮೊಹಮ್ಮದ್ ನಬಿ, ಪ್ಯಾಟ್ ಕಮ್ಮಿನ್ಸ್, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ವರುಣ್ ಚಕ್ರವರ್ತಿ, ಶಿವಂ ಮಾವಿ, ಸ್ಯಾಮ್ ಬಿಲ್ಲಿಂಗ್ಸ್

Story first published: Friday, April 29, 2022, 13:06 [IST]
Other articles published on Apr 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X