KL Rahul Birthday : ರಾಹುಲ್‌ಗೆ ಬರ್ತ್‌ರ್ಡ್‌ಗೆ ಶುಭ ಕೋರಿದ ಪ್ರೇಯಸಿ ಆಥಿಯಾ ಶೆಟ್ಟಿ: ಲವ್ ಯೂ ಎಂದ ರಾಹುಲ್‌

ಭಾರತದ ಇನ್‌ ಫಾರ್ಮ್ ಕ್ರಿಕೆಟಿಗ, ಮೂರು ಫಾರ್ಮೆಟ್‌ನಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇಂದು ಬರ್ತ್‌ಡೇ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟ ಕೆ.ಎಲ್ ರಾಹುಲ್‌ಗೆ ಹಾಲಿ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಸೇರಿದಂತೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

ಕೆ.ಎಲ್ ರಾಹುಲ್ ಗೆಳತಿ ಅಥಿಯಾ ಶೆಟ್ಟಿ ಕೂಡ ಕೆ.ಎಲ್ ರಾಹುಲ್‌ಗೆ ಬರ್ತ್‌ಡೇಗೆ ಶುಭ ಕೋರಿದ್ದು, ನಿನ್ನೊಂದಿಗೆ ಎಲ್ಲಾ ಕಡೆಯಲ್ಲೂ ಇರುತ್ತೇನೆ, ಹ್ಯಾಪಿ ಬರ್ತ್‌ಡೇ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕೆ.ಎಲ್ ರಾಹುಲ್ ''ಲವ್ ಯೂ'' ಎಂದು ಬ್ಲಾಕ್‌ ಹಾರ್ಟ್‌ ಎಮೊಜಿಯನ್ನ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ಬಹುಕಾಲದಿಂದ ಪ್ರೀತಿಯಲ್ಲಿರುವ ರಾಹುಲ್‌ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿಯೇ ಅತಿಯಾ ಶೆಟ್ಟಿ ಮತ್ತು ತನ್ನ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಭಿನ್ನ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆಥಿಯಾ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

RR vs KKR: ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಪ್ಲೇಯರ್ಸ್‌ ಇದ್ದಾರೆಯೇ? ಮಿಸ್ ಮಾಡದಿರಿRR vs KKR: ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಪ್ಲೇಯರ್ಸ್‌ ಇದ್ದಾರೆಯೇ? ಮಿಸ್ ಮಾಡದಿರಿ

ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನ ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ತಮ್ಮ 100ನೇ ಐಪಿಎಲ್‌ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನ ಮಾಡಿದ್ದಾರೆ.

ಅಗಲಿದ ತಂಗಿಗಾಗಿ ಭಾವುಕ ಸಾಲು ಬರೆದ ಹರ್ಷಲ್ ಪಟೇಲ್ ಹೇಳಿದ್ದೇನು? | Oneindia Kannada

ಪ್ರಸಕ್ತ ಸೀಸನ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 47.00 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೆ.ಎಲ್ ರಾಹುಲ್ ಒಂದು ಶತಕ ಸೇರಿದಂತೆ 226 ರನ್ ಕಲೆಹಾಕಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, April 18, 2022, 14:21 [IST]
Other articles published on Apr 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X