ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಮಹತ್ವದ ಸಾಧನೆ ಮಾಡಿದ ರಾಹುಲ್: ಕೊಹ್ಲಿ, ಧವನ್ ದಾಖಲೆ ಸರಿಗಟ್ಟಿದ ಕೆಎಲ್

IPL 2022: KL Rahul joins elite list with Kohli, Dhawan After scoring 500 runs in the IPL for the 5th season

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯಲ್ಲಿಯೂ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನಿಡಿದ ಕೆಎಲ್ ರಾಹುಲ್ ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಕ್ವಿಂಟನ್ ಡಿಕಾಕ್ ಜೊತೆಗೆ ದಾಖಲೆಯ ಆರಂಭಿಕ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಈ ಪಂದ್ಯದಲ್ಲಿ ವೈಯಕ್ತಿ 68 ರನ್‌ಗಳನ್ನು ಗಳಿಸಿರುವ ಕೆಎಲ್ ರಾಹುಲ್ ಟೂರ್ನಿಯ ಇತಿಹಾಸದಲ್ಲಿ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನಿಡುವ ಮೂಲಕ ಕೆಎಲ್ ರಾಹುಲ್ ಈ ಬಾರಿಯ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಐದನೇ ಬಾರಿಗೆ ಕೆಎಲ್ ರಾಹುಲ್ 500ಕ್ಕಿಂತ ಅಧಿಕ ರನ್‌ಗಳಿಸಿದಂತಾಗಿದೆ. ಈ ಸಾಧನೆಯನ್ನು ಭಾರತೀಯ ಆಟಗಾರರ ಪೈಕಿ ಕೇವಲ ಇಬ್ಬರು ಆಟಗಾರರು ಮಾತ್ರವೇ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ವಿಭಿನ್ನ ಆವೃತ್ತಿಗಳಲ್ಲಿ ಐದು ಬಾರಿ 500ಕ್ಕೂ ಅಧಿಕ ರನ್‌ಗಳಿಸಿದ ಆಟಗಾರರಾಗಿದ್ದಾರೆ. ಇದೀಗ ಕೆಎಲ್ ರಾಹುಲ್ ಕೂಡ ಈ ಸಾಧನೆ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದಂತಾಗಿದೆ.

ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್

ಇನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ಆವೃತ್ತಿಯಲ್ಲಿ 500ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿರುವ ಕ್ರಿಕೆಟಿಗ ಡೇವಿಡ್ ವಾರ್ನರ್. ಆರು ಭಿನ್ನ ಆವೃತ್ತಿಗಳಲ್ಲಿ ವಾರ್ನರ್ ಈ ಸಾಧನೆ ಮಾಡಿದ್ದು ದಾಖಲೆ ಬರೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದಿಂದ ಬೇರ್ಪಟ್ಟ ಬಳಿಕ ಕೆಎಲ್ ರಾಹುಲ್ ಪ್ರತಿ ಐಪಿಎಲ್ ಆವೃತ್ತಿಯಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ತೊರೆದು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ರಾಹುಲ್ ಮೊದಲ ಆವೃತ್ತಿಯಲ್ಲಿ 659 ರನ್‌ಗಳಿಸಿದ್ದರು. ಅದಾದ ಬಳಿಕದ ಆವೃತ್ತಿಯಲ್ಲಿ 593 ರನ್‌ಗಳಿಸಿದ್ದ ರಾಹುಲ್ 2020ರ ಆವೃತ್ತಿಯಲ್ಲಿ 670 ರನ್ ಸಿಡಿಸಿದ್ದರು. ಇನ್ನು 2021ರಲ್ಲಿ 626 ರನ್‌ಗಳನ್ನು ಗಳಿಸಿದ್ದರು.

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿ ನಾಯಕತ್ವ ವಹಿಸಿಕೊಂಡಿರುವ ಕೆಎಲ್ ರಾಹುಲ್ ಈ ಬಾರಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಆವೃತ್ತಿಯಲ್ಲಿ ರಾಹುಲ್ ಎರಡು ಶತಕವನ್ನು ಸಿಡಿಸಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಅಬ್ಬರದ ಪ್ರದರ್ಶನ ನೀಡಿ ಮಿಂಚಿದ್ದಾರೆ. ಎಚ್ಚರಿಕೆಯಿಂದ ಆರಂಭಿಸಿದ ಈ ಆಟಗಾರರು ಬಳಿಕ ಅಬ್ಬರಿಸಿದ್ದರು. ಅದರಲ್ಲೂ ಕ್ವಿಂಟನ್ ಡಿಕಾಕ್ ಸ್ಪೋಟಕ ಬ್ಯಾಟಿಂಗ್‌ಗೆ ಕೆಕೆಆರ್ ಬೌಲರ್‌ಗಳು ನಿರುತ್ತರವಾಗಿದ್ದರು. 70 ಎಸೆತಗಳಲ್ಲಿ ಡಿಕಾಕ್ ಅಜೇಯ 140 ರನ್‌ಗಳನ್ನು ಸಿಡಿಸಿದ್ದಾರೆ. ಕೆಎಲ್ ರಾಹುಲ್ 51 ಎಸೆತಗಳಲ್ಲಿ 68 ರನ್‌ಗಳನ್ನು ಗಳಿಸಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 210 ರನ್‌ಗಳನ್ನು ಗಳಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ಎವಿನ್ ಲೆವಿಸ್, ದೀಪಕ್ ಹೂಡಾ, ಮನನ್ ವೋಹ್ರಾ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್
ಬೆಂಚ್: ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಕೈಲ್ ಮೇಯರ್ಸ್, ಅಂಕಿತ್ ರಾಜ್‌ಪೂತ್, ಆಂಡ್ರ್ಯೂ ಟೈ, ಕರಣ್ ಶರ್ಮಾ, ಮಯಾಂಕ್ ಯಾದವ್

RCB vs GT ಗೆಲ್ಲೋದು ಯಾರು? | Oneindia Kannada

ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ವೆಂಕಟೇಶ್ ಅಯ್ಯರ್, ಅಭಿಜೀತ್ ತೋಮರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ
ಬೆಂಚ್: ಶೆಲ್ಡನ್ ಜಾಕ್ಸನ್, ಬಾಬಾ ಇಂದ್ರಜಿತ್, ಆರೋನ್ ಫಿಂಚ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ಅನುಕುಲ್ ರಾಯ್, ಶಿವಂ ಮಾವಿ, ಪ್ರಥಮ್ ಸಿಂಗ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಹರ್ಷಿತ್ ರಾಣಾ

Story first published: Thursday, May 19, 2022, 10:01 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X