RCB vs LSG: ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿಯನ್ನು 'ಬಾಹುಬಲಿ ಸ್ಟೈಲ್'ನಲ್ಲಿ ಹೊತ್ತೊಯ್ದ ಪೊಲೀಸ್

ಫೀಲ್ಡ್ ಗೆ ನುಗ್ಗಿದ ಅಭಿಮಾನಿಯನ್ನು ಕುರಿಮರಿಯಂತೆ ಹೊತ್ತೊಯ್ದ ಪೊಲೀಸರು:Kohli ಮಾಡಿದ್ದೇನು? |#cricket |Oneindia

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಪಂಚಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರು ಎಲ್ಲಿ ಪ್ರಯಾಣಿಸಿದರೂ ಅನೇಕ ಅಭಿಮಾನಿಗಳಿಂದ ಸುತ್ತುವರೆದಿರುತ್ತಾರೆ. ಕ್ರಿಕೆಟ್ ಮೈದಾನದಲ್ಲಿಯೂ ಕೊಹ್ಲಿಯನ್ನು ಅಭಿಮಾನಿಗಳು ಹಿಂಬಾಲಿಸುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಅವರು ಮೈದಾನದ ಮಧ್ಯದಲ್ಲಿಯೇ ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಆದರೆ ಕೊರೊನಾ ಸಮಯದಲ್ಲಿ ಮತ್ತು ಬಯೋ-ಬಬಲ್ ಅವಧಿಯಲ್ಲಿ ವಿಶೇಷವಾಗಿ ಐಪಿಎಲ್ ವೇಳೆ ಪ್ರೋಟೋಕಾಲ್ ಉಲ್ಲಂಘನೆಯಿಂದ ಪಂದ್ಯಾವಳಿಯಿಂದ ತಮ್ಮನ್ನು ನಿಷೇಧಿಸಲು ಕಾರಣವಾಗಬಹುದು ಎಂದು ಎಲ್ಲಾ ಕ್ರಿಕೆಟ್ ತಾರೆಗಳು ಅಭಿಮಾನಿಗಳಿಂದ ದೂರವಿರಲು ನೋಡುತ್ತಾರೆ.

ವಿರಾಟ್ ಕೊಹ್ಲಿಯತ್ತ ಅಭಿಮಾನಿಯೊಬ್ಬರು ಓಡಿ ಬಂದರು

ವಿರಾಟ್ ಕೊಹ್ಲಿಯತ್ತ ಅಭಿಮಾನಿಯೊಬ್ಬರು ಓಡಿ ಬಂದರು

ಅಂತಹ ಒಂದು ಘಟನೆ ಬುಧವಾರ (ಮೇ 25) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2022 ಎಲಿಮಿನೇಟರ್ ಪಂದ್ಯದ ನಡುವೆ ಸಂಭವಿಸಿದೆ.

ಡೀಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯತ್ತ ಅಭಿಮಾನಿಯೊಬ್ಬರು ಓಡಿ ಬಂದರು. ಬಹುಶಃ ಅವರ ನೆಚ್ಚಿನ ಕ್ರಿಕೆಟಿಗನಿಗೆ ಹಸ್ತಲಾಘವ ಮಾಡಲು ಓಡಿ ಬರುತ್ತಿರಬೇಕು. ಆದರೆ ಅಭಿಮಾನಿ ಕೊಹ್ಲಿಯನ್ನು ತಲುಪುವ ಮೊದಲು, ಕೋಲ್ಕತ್ತಾ ಪೊಲೀಸ್ ಸಿಬ್ಬಂದಿ ಸಕಾಲದಲ್ಲಿ ಕಾರ್ಯನಿರ್ವಹಿಸಿ ಅಭಿಮಾನಿಯನ್ನು ತಡೆದರು.

ತನ್ನ ಭುಜದ ಮೇಲೆ ಅಭಿಮಾನಿಯನ್ನು ಹೊತ್ತೊಯ್ದ ಪೊಲೀಸ್

ತನ್ನ ಭುಜದ ಮೇಲೆ ಅಭಿಮಾನಿಯನ್ನು ಹೊತ್ತೊಯ್ದ ಪೊಲೀಸ್

ಅಲ್ಲದೇ ಅವರನ್ನು ತಡೆದ ರೀತಿಗೆ ವಿರಾಟ್ ಕೊಹ್ಲಿ ಸೇರಿದಂತೆ, ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು. "ಬಾಹುಬಲಿ' ಚಿತ್ರದಂತೆಯೇ ಪೊಲೀಸ್ ಸಿಬ್ಬಂದಿ ತನ್ನ ಭುಜದ ಮೇಲೆ ಅಭಿಮಾನಿಯನ್ನು ಹೊತ್ತುಕೊಂಡು ಹೋಗಿ ಹಗ್ಗದ ಹೊರಗೆ ನೆಲದ ಮೇಲೆ ಬೀಳಿಸುವ ಸಂಪೂರ್ಣ ಘಟನೆಯನ್ನು ಪ್ರೇಕ್ಷಕ ರೆಕಾರ್ಡ್ ಮಾಡಿದ್ದಾನೆ.

ಆರ್‌ಸಿಬಿಯ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರ ಚೊಚ್ಚಲ ಐಪಿಎಲ್ ಶತಕ ಆರ್‌ಸಿಬಿ ಸ್ಕೋರ್ ಬೋರ್ಡ್‌ನಲ್ಲಿ ಉತ್ತಮ ಮೊತ್ತ ಕಲೆಹಾಕುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ.

ಕೊನೆಯಲ್ಲಿ ಕೆಲವು ಒತ್ತಡದ ಕ್ಷಣಗಳು ಇದ್ದವು

ಕೊನೆಯಲ್ಲಿ ಕೆಲವು ಒತ್ತಡದ ಕ್ಷಣಗಳು ಇದ್ದವು

ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, "ಕೊನೆಯಲ್ಲಿ ಕೆಲವು ಒತ್ತಡದ ಕ್ಷಣಗಳು ಇದ್ದವು. ನಿಸ್ಸಂಶಯವಾಗಿ ಇದು ದೊಡ್ಡ ಆಟವಾಗಿತ್ತು, ಆದರೆ ನಮ್ಮ ಬೌಲರ್‌ಗಳು ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು ಎಂದು ನಾನು ಭಾವಿಸುತ್ತೇನೆ. ವನಿಯಾ (ಹಸರಂಗ) ಅವರು ತಮ್ಮ ಮಧ್ಯಮ ಓವರ್‌ಗಳಲ್ಲಿ ಬೌಲ್ ಮಾಡಿದ್ದು, ಜೋಶ್ (ಹೇಜಲ್‌ವುಡ್) ಆ ಪ್ರಮುಖ ಓವರ್‌ನಲ್ಲಿ ಬೌಲಿಂಗ್‌ ಮಾಡಿದ್ದು ಮತ್ತು ನಮಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದು ನಿರ್ಣಾಯಕವಾಯಿತು. ಹರ್ಷಲ್ ಪಟೇಲ್ ನಂಬಲಸಾಧ್ಯವಾದ ಪ್ರದರ್ಶನ ನೀಡಿದರು ಹಾಗೂ ಸಿರಾಜ್ ಹೊಸ ಚೆಂಡಿನೊಂದಿಗೆ ಅದ್ಭುತವಾಗಿದ್ದರು ಮತ್ತು ಶಹಬಾಜ್ ಅವರ ನಾಲ್ಕು ಓವರ್‌ಗಳನ್ನು ಚೆನ್ನಾಗಿ ಬೌಲ್ ಮಾಡಿದರು," ಎಂದು ವಿರಾಟ್ ಪ್ರಶಂಸಿಸಿದರು.

ಆರ್‌ಸಿಬಿ ತಂಡ ಅಹಮದಾಬಾದ್‌ಗೆ ಪ್ರಯಾಣಿಸಲಿದೆ

ಆರ್‌ಸಿಬಿ ತಂಡ ಅಹಮದಾಬಾದ್‌ಗೆ ಪ್ರಯಾಣಿಸಲಿದೆ

ಶುಕ್ರವಾರ ನಡೆಯುವ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಆರ್‌ಸಿಬಿ ತಂಡ ಅಹಮದಾಬಾದ್‌ಗೆ ಪ್ರಯಾಣಿಸಲಿದೆ. ಅಲ್ಲಿ ಪಂದ್ಯದ ವಿಜೇತರು ಭಾನುವಾರ ಅದೇ ಸ್ಥಳದಲ್ಲಿ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದಾರೆ.

"ರೇಖೆಯನ್ನು ದಾಟಿದ್ದಕ್ಕಾಗಿ ನಾವು ನಿಜವಾಗಿಯೂ ಸಂತೋಷಪಟ್ಟಿದ್ದೇವೆ. ಉತ್ತಮ ವಿಷಯವೆಂದರೆ ನಮಗೆ ಒಂದು ದಿನವಿದೆ ಸಮಯವಿದೆ. ನಾಳೆಯ ಮರುದಿನ ನಾವು ಮತ್ತೆ ಆಡುತ್ತೇವೆ. ಅಹಮದಾಬಾದ್‌ಗೆ ಹೋಗುವುದು ಮತ್ತೆ ಅಲ್ಲಿನ ಮೈದಾನವನ್ನು ತಲುಪುವುದನ್ನು ಕಾಯಲು ಸಾಧ್ಯವಿಲ್ಲ. ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷವಾಗಿದ್ದೇವೆ. ನಾವು ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಮುಂದುವರಿಯಲು ಬಯಸುತ್ತೇವೆ. ಆಶಾದಾಯಕವಾಗಿ ಇನ್ನೂ ಎರಡು ಉತ್ತಮ ಪಂದ್ಯಗಳನ್ನಾಡಿದರೆ ನಂತರ ನಾವೆಲ್ಲರೂ ಸಂಭ್ರಮಿಸಬಹುದು," ಎಂದು ವಿರಾಟ್ ಕೊಹ್ಲಿ ಹೇಳಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, May 26, 2022, 18:24 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X