ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವ ಎಲ್ಲರಿಗೂ ಅಲ್ಲ; ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ

IPL 2022: Leadership Is Not For Everyone; Former Cricketer To Spark On Punjab Kings Captain Mayank Agarwal

ನಾಯಕತ್ವದ ಪಾತ್ರವು ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅಭಿಪ್ರಾಯಪಟ್ಟಿದ್ದು, 'ನಾಯಕತ್ವವು ಎಲ್ಲರಿಗೂ ಅಲ್ಲ' ಎಂದು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ 2022ರ 15ನೇ ಋತುವಿನಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕನಾಗಿ ಕೆಎಲ್ ರಾಹುಲ್ ಬದಲಿಗೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದರು.

ಕಳೆದ ಋತುವಿನಲ್ಲಿ 40.09 ಸರಾಸರಿಯಲ್ಲಿ 441 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟರ್ ಈ ಋತುವಿನಲ್ಲಿ ಇದುವರೆಗೆ ಆಡಿದ 13 ಪಂದ್ಯಗಳಲ್ಲಿ ಕೇವಲ 195 ರನ್ ಗಳಿಸಿದ್ದಾರೆ. ಭಾನುವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯದ ಮೊದಲು ಮಾತನಾಡಿದ ಪಿಯೂಷ್ ಚಾವ್ಲಾ, ನಾಯಕತ್ವದ ಒತ್ತಡವು ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.

IPL 2022: Leadership Is Not For Everyone; Former Cricketer To Spark On Punjab Kings Captain Mayank Agarwal

"ಅವರು (ಮಯಾಂಕ್ ಅಗರ್ವಾಲ್) ಕಳೆದ ವರ್ಷ ಪಂಜಾಬ್ ಕಿಂಗ್ಸ್ ಮೇಲೆ ಸಾಕಷ್ಟು ನಂಬಿಕೆಯನ್ನು ತೋರಿಸಿದ್ದರು. ಅದಕ್ಕಾಗಿ ಅವರನ್ನು ಉಳಿಸಿಕೊಂಡರು ಆದರೆ ಅವರಿಗೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ನಾಯಕತ್ವದ ಹಿಂದಿನ ಅನುಭವವನ್ನು ಹೊಂದಿದ್ದರು ಎಂದು ನಾನು ಭಾವಿಸುವುದಿಲ್ಲ," ಎಂದು ಚಾವ್ಲಾ ಅಭಿಪ್ರಾಯಪಟ್ಟರು.

ದೇಶೀಯ ಕ್ರಿಕೆಟ್ ಅಥವಾ ಭಾರತ "ಎ' ತಂಡದ ಜೊತೆಗೆ ಅದು ಇಲ್ಲಿ ಗೋಚರಿಸುತ್ತದೆ. ನಾಯಕತ್ವದ ಒತ್ತಡವು ವಿಭಿನ್ನವಾಗಿದೆ ಮತ್ತು ಮೈದಾನದಲ್ಲಿ ಅವರು ಹೇಗೆ ಸ್ವಲ್ಪ ಹರಿತವಾಗಿ ಕಾಣುತ್ತಾರೆ ಎಂಬುದು ಅವರ ಬ್ಯಾಟಿಂಗ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಾಯಕತ್ವವು ಎಲ್ಲರಿಗೂ ಅಲ್ಲ ಮತ್ತು ಇದು ಇಲ್ಲಿ ಸ್ಪಷ್ಟವಾಗಿ ತೋರಿಸಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಸಂವಾದದ ಸಂದರ್ಭದಲ್ಲಿ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಹೇಳಿದರು.

IPL 2022: Leadership Is Not For Everyone; Former Cricketer To Spark On Punjab Kings Captain Mayank Agarwal

ಪಂಜಾಬ್ ಕಿಂಗ್ಸ್ ತನ್ನ ಮೊದಲ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯಗಳಿಸುವ ಮೂಲಕ ಋತುವನ್ನು ಉತ್ತಮವಾಗಿ ಆರಂಭಿಸಿತು. ಆದಾಗ್ಯೂ ಕೊನೆಯ ಐದರಲ್ಲಿ ಕೇವಲ ಒಂದು ಜಯದೊಂದಿಗೆ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಪ್ಲೇಆಫ್ ಪ್ರವೇಶವನ್ನು ಕಳೆದುಕೊಂಡಿದೆ.

13 ಪಂದ್ಯಗಳಿಂದ 12 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಅವರು ಈಗ ತಮ್ಮ ಋತುವಿನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸುತ್ತಿದ್ದಾರೆ.

RCB ತಂಡಕ್ಕೆ ಮುಂಬೈ ಮೇಲೆ ಫುಲ್ ಲವ್! | #Cricket | Oneindia Kannada

ಈ ಋತುವಿನಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳೆಂದರೆ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು.

Story first published: Sunday, May 22, 2022, 18:07 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X