ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆ

ಕಳೆದ ವರ್ಷ ಭಾರತದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಧ್ಯಂತರದಲ್ಲಿಯೇ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ನಂತರ ಯುಎಇಯಲ್ಲಿ ಮುಂದುವರಿದಿತ್ತು. ಹೀಗೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾರಣದಿಂದ ಆಯೋಜಕರಿಗೆ ಹಾಗೂ ಟೂರ್ನಿಯ ಮೇಲೆ ಹೂಡಿಕೆಗಳನ್ನು ಮಾಡಿದ್ದ ಹಲವಾರು ಹೂಡಿಕೆದಾರರಿಗೆ ತುಸು ನಷ್ಟವೂ ಕೂಡ ಉಂಟಾಗಿತ್ತು. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೆ ಈ ಬಾರಿಯ ಟೂರ್ನಿ ಕೂಡ ಹಿನ್ನಡೆಯನ್ನು ಅನುಭವಿಸಬಾರದು ಎಂಬ ಕಾರಣದಿಂದಾಗಿ ಬಿಸಿಸಿಐ ಹೆಚ್ಚಿನ ನಿಗಾವಹಿಸಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಸಂಪೂರ್ಣ ಟೂರ್ನಿಯನ್ನು ಭಾರತ ನೆಲದಲ್ಲಿಯೇ ಅತಿದೊಡ್ಡ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸುತ್ತಿದೆ ಎನ್ನಲಾಗುತ್ತಿದೆ.

ಕೊಹ್ಲಿ ಜೊತೆ ಮತ್ತೋರ್ವ ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ: ಮುಂದಿನ ಸರಣಿಯಿಂದ ಇಬ್ಬರೂ ಔಟ್!ಕೊಹ್ಲಿ ಜೊತೆ ಮತ್ತೋರ್ವ ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ: ಮುಂದಿನ ಸರಣಿಯಿಂದ ಇಬ್ಬರೂ ಔಟ್!

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯುಎಇಯಲ್ಲಿ ನಡೆಸದೇ, ಸಂಪೂರ್ಣ ಟೂರ್ನಿಯನ್ನು ಭಾರತ ನೆಲದಲ್ಲಿಯೇ ನಡೆಸಲು ಬಿಸಿಸಿಐ ತಯಾರಿಗಳನ್ನು ನಡೆಸಿಕೊಳ್ಳುತ್ತಿದೆ. ಈ ಕುರಿತಾಗಿ ಈ ಹಿಂದೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದು, ಭಾರತದ ಸುಮಾರು 6 ಸ್ಥಳಗಳಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಲು ಚಿಂತಿಸುತ್ತಿದೆ ಎನ್ನಲಾಗಿತ್ತು. ಆದರೆ ಇದೀಗ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆ ಕುರಿತು ಬಿಸಿಸಿಐ ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇನು ಎಂಬುದರ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಯಾವಾಗ ಆರಂಭವಾಗಲಿದೆ ಮತ್ತು ಪಂದ್ಯಗಳು ಯಾವ ಸ್ಥಳಗಳಲ್ಲಿ ನಡೆಯಲಿವೆ ಎಂಬುದರ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿ ಮಾತನಾಡಿದ್ದು ಈ ಕೆಳಕಂಡಂತೆ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ..

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022

ಈ ಹಿಂದೆ ಬಂದಿದ್ದ ಮಾಹಿತಿಯ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 27ರಿಂದ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ತಿಳಿಸಿರುವ ಪ್ರಕಾರ ಒಂದು ದಿನ ಮುಂಚಿತವಾಗಿಯೇ, ಅಂದರೆ ಮಾರ್ಚ್ 26ರಂದೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದೆಯಂತೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಸಂಸ್ಥೆ ಮಾರ್ಚ್ 26ರಂದು ಟೂರ್ನಿಯನ್ನು ಆಯೋಜಿಸಬೇಕೆಂದು ಬಿಸಿಸಿಐ ಬಳಿ ಮನವಿಯನ್ನು ಮಾಡಿಕೊಂಡಿದ್ದು, ಈ ಮನವಿಗೆ ಕಾರಣ ವಾರಾಂತ್ಯ ಎನ್ನಲಾಗಿದೆ. ಹೌದು, ಟೂರ್ನಿಯನ್ನು ವಾರಾಂತ್ಯದಲ್ಲಿ ಶುರು ಮಾಡಿದರೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ಮುಂದಾಲೋಚನೆಯಿಂದ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಈ ಮನವಿಯನ್ನು ಸಲ್ಲಿಸಿದೆ ಎನ್ನಲಾಗುತ್ತಿದೆ.

ಈ 2 ನಗರಗಳಲ್ಲಿ ನಡೆಯಲಿವೆ ಪಂದ್ಯಗಳು

ಈ 2 ನಗರಗಳಲ್ಲಿ ನಡೆಯಲಿವೆ ಪಂದ್ಯಗಳು

ಇನ್ನು ಈವರೆಗೆ ನಡೆದಿರುವ ಚರ್ಚೆಗಳ ಪ್ರಕಾರ ಬಿಸಿಸಿಐ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಮುಂಬೈ ಹಾಗೂ ಪುಣೆ ನಗರದ ಕ್ರೀಡಾಂಗಣಗಳಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಬಿಸಿಸಿಐನ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮುಂಬೈ ನಗರದಲ್ಲಿ ವಾಂಖೆಡೆ, ಬ್ರಬೌರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣಗಳು ಇದ್ದು, ಪುಣೆ ನಗರದಲ್ಲಿ ಎಂಸಿಎ ಕ್ರೀಡಾಂಗಣವಿದೆ. ಹೀಗೆ ಮುಂಬೈ ಮತ್ತು ಪುಣೆ ಎರಡೂ ನಗರಗಳು ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಏರ್ಪಡಿಸಬಹುದಾದ ಒಟ್ಟು 4 ಕ್ರೀಡಾಂಗಣಗಳು ಲಭ್ಯವಿದ್ದು, ಈ ಕ್ರೀಡಾಂಗಣಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಬಿಸಿಸಿಐನ ಅಧಿಕಾರಿ ತಿಳಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲ್ಲಿತಿರುವ ದೀಪಕ್ ! | Oneindia Kannada
ಪ್ಲೇ ಆಫ್ ಸುತ್ತಿನ ಪಂದ್ಯಗಳು ಎಲ್ಲಿ ನಡೆಯಲಿವೆ?

ಪ್ಲೇ ಆಫ್ ಸುತ್ತಿನ ಪಂದ್ಯಗಳು ಎಲ್ಲಿ ನಡೆಯಲಿವೆ?

ಮುಂಬೈ ಹಾಗೂ ಪುಣೆ ನಗರಗಳ ಕ್ರೀಡಾಂಗಣಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲು ತೀರ್ಮಾನ ಕೈಗೊಂಡಿರುವ ಬಿಸಿಸಿಐ ಪ್ಲೇ ಆಫ್ ಸುತ್ತಿನ ಪಂದ್ಯಗಳನ್ನು ಅಹಮದಾಬಾದ್ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಬಿಸಿಸಿಐನ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ಕುರಿತಾಗಿ ಇನ್ನೂ ಸಹ ಅಂತಿಮ ನಿರ್ಧಾರವನ್ನು ಕೈಗೊಳ್ಳದ ಬಿಸಿಸಿಐ ಮುಂದಿನ ವಾರದೊಳಗೆ ಸ್ಪಷ್ಟ ಚಿತ್ರಣವನ್ನು ನೀಡಲಿದೆ ಎನ್ನಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, February 21, 2022, 16:56 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X