ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಟೂರ್ನಿಯ ಮೂರನೇ ವಾರದಲ್ಲಿ ಮಕಾಡೆ ಮಲಗಿದ ವಿದೇಶಿ ಆಟಗಾರರ ಪಟ್ಟಿ

IPL 2022: List of 11 Overseas players who have flopped in third week of the tournament

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾಗಿ ಕಣಕ್ಕಿಳಿದಿರುವ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸಾಲುಸಾಲು ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದಿರುವ ಸಾಧನೆ ಮಾಡಿರುವಂತಹ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿವೆ.

ಎಲ್ಲಿ ತಪ್ಪಾಗ್ತಿದೆ ಎಂದು ಅರ್ಥವಾಗ್ತಿಲ್ಲ; ಮುಂಬೈನ ಸತತ 6 ಸೋಲಿಗೆ ಹೊಣೆ ಯಾರೆಂಬುದನ್ನು ಬಿಚ್ಚಿಟ್ಟ ರೋಹಿತ್ ಶರ್ಮಾಎಲ್ಲಿ ತಪ್ಪಾಗ್ತಿದೆ ಎಂದು ಅರ್ಥವಾಗ್ತಿಲ್ಲ; ಮುಂಬೈನ ಸತತ 6 ಸೋಲಿಗೆ ಹೊಣೆ ಯಾರೆಂಬುದನ್ನು ಬಿಚ್ಚಿಟ್ಟ ರೋಹಿತ್ ಶರ್ಮಾ

ಇನ್ನು ಕಳೆದ ಏಪ್ರಿಲ್‌ 9ರ ಶನಿವಾರದಿಂದ ಏಪ್ರಿಲ್ 15ರ ಶುಕ್ರವಾರದವರೆಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂರನೇ ವಾರದ ಪಂದ್ಯಗಳು ನಡೆದಿದ್ದು, ಈ ಪಂದ್ಯಗಳಲ್ಲಿ ಹಲವಾರು ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಲಾಗದೇ ವಿಫಲರಾಗಿದ್ದಾರೆ. ಹೀಗೆ ಮೂರನೇ ವಾರದಲ್ಲಿ ಉತ್ತಮ ಪ್ರದರ್ಶನ ನೀಡಲಾಗದೇ ವಿಫಲರಾಗಿರುವ ಆಟಗಾರರ ಪೈಕಿ ಇರುವ 11 ವಿದೇಶಿ ಆಟಗಾರರು ಯಾರು ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ ಓದಿ..

1. ಮ್ಯಾಥ್ಯೂ ವೇಡ್

1. ಮ್ಯಾಥ್ಯೂ ವೇಡ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಕಣಕ್ಕಿಳಿದಿರುವ ಮ್ಯಾಥ್ಯೂ ವೇಡ್ ಪ್ರಥಮ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 29 ಎಸೆತಗಳಲ್ಲಿ 30 ರನ್ ಗಳಿಸಿದ್ದರು ಹಾಗೂ ನಂತರ ನಡೆದ 2 ಪಂದ್ಯಗಳಲ್ಲಿ ಎರಡಂಕಿ ಮುಟ್ಟುವಲ್ಲಿ ವಿಫಲವಾದ ಮ್ಯಾಥ್ಯೂ ವೇಡ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 19 ಎಸೆತಗಳಲ್ಲಿ 19 ರನ್ ಕಲೆ ಹಾಕಿದರು ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ 12 ರನ್ ಕಲೆ ಹಾಕಿದರು. ಹೀಗೆ ಟೂರ್ನಿಯಲ್ಲಿ ಆಡಿರುವ ಯಾವುದೇ ಪಂದ್ಯದಲ್ಲಿಯೂ ದೊಡ್ಡ ರನ್ ಕಲೆಹಾಕುವಲ್ಲಿ ಯಶಸ್ವಿಯಾಗದ ಮ್ಯಾಥ್ಯೂ ವೇಡ್ ಫ್ಲಾಪ್ ಆಗಿದ್ದಾರೆ.

2. ಜಾನಿ ಬೈರ್ ಸ್ಟೋ

2. ಜಾನಿ ಬೈರ್ ಸ್ಟೋ

ಈ ಬಾರಿ 6.75 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿರುವ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್ ಸ್ಟೋ ಟೂರ್ನಿಯ ಮೂರನೇ ವಾರದಲ್ಲಿ 2 ಪಂದ್ಯಗಳಲ್ಲಿ ಕಣಕ್ಕಿಳಿದು 95.74 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದು ತಂಡದ ಪರ ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಬೌಂಡರಿಗಳ ಸುರಿಮಳೆ ಮಾಡಬಲ್ಲ ಸಾಮರ್ಥ್ಯವಿರುವ ಜಾನಿ ಬೈರ್ ಸ್ಟೋ ಸದ್ಯ ಟೂರ್ನಿಯ ಮೂರನೇ ವಾರದಲ್ಲಿ ಫ್ಲಾಪ್ ಆದ ಆಟಗಾರರ ಪಟ್ಟಿ ಸೇರಿದ್ದಾರೆ.

3. ಮೊಯಿನ್ ಅಲಿ

3. ಮೊಯಿನ್ ಅಲಿ

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಲ್ ರೌಂಡರ್ ಮೊಯಿನ್ ಅಲಿ ಈ ಬಾರಿ ಫ್ಲಾಪ್ ಆಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಿಗೆ 48 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯಗಳಲ್ಲಿಯೂ ಸಹ ಮೊಯಿನ್ ಅಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಸಹ ಯಶಸ್ವಿಯಾಗಿಲ್ಲ.

4. ಸ್ಯಾಮ್ ಬಿಲ್ಲಿಂಗ್ಸ್

4. ಸ್ಯಾಮ್ ಬಿಲ್ಲಿಂಗ್ಸ್

ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದಾರೆ. ತಂಡದ ಮತ್ತೋರ್ವ ವಿಕೆಟ್ ಕೀಪರ್ ಶೆಲ್ಡನ್ ಜಾಕ್ಸನ್‌ ರೀತಿಯ ಪ್ರದರ್ಶನವನ್ನೂ ನೀಡದ ಸ್ಯಾಮ್ ಬಿಲ್ಲಿಂಗ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದರು.

5. ಕೀರನ್ ಪೊಲಾರ್ಡ್

5. ಕೀರನ್ ಪೊಲಾರ್ಡ್

ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಆಟಗಾರ ಎನಿಸಿಕೊಂಡಿರುವ ಕೀರನ್ ಪೊಲಾರ್ಡ್ ಟೂರ್ನಿಯ ಮೂರನೇ ವಾರದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 10 ರನ್ ಕಲೆಹಾಕಿ ಫ್ಲಾಪ್ ಆಗಿದ್ದಾರೆ.

6. ರಸ್ಸಿ ವಾನ್‌ಡರ್ ಡುಸೆನ್

6. ರಸ್ಸಿ ವಾನ್‌ಡರ್ ಡುಸೆನ್

ಈ ಬಾರಿಯ ಟೂರ್ನಿಯ ಮೂರನೇ ವಾರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಸ್ಸಿ ವಾನ್‌ಡರ್ ಡುಸೆನ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ರನ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ 6 ರನ್ ಗಳಿಸಿ ಫ್ಲಾಪ್ ಶೋ ನೀಡಿದ್ದಾರೆ.

7. ದುಷ್ಮಂತ ಚಮೀರ

7. ದುಷ್ಮಂತ ಚಮೀರ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿರುವ ಶ್ರೀಲಂಕಾದ ವೇಗಿ ದುಷ್ಮಂತ ಚಮೀರ ತನ್ನ ರಾಷ್ಟ್ರೀಯ ತಂಡದ ಪರ ನೀಡುತ್ತಿದ್ದ ರೀತಿಯ ಪ್ರದರ್ಶನವನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ವಿಕೆಟ್ ಕಬಳಿಸುವಲ್ಲಿ ಎಡವುತ್ತಿರುವ ದುಷ್ಮಂತ ಚಮೀರ ಹೆಚ್ಚಿನ ರನ್‌ಗಳನ್ನೂ ಸಹ ಬಿಟ್ಟುಕೊಟ್ಟು ಟೂರ್ನಿಯ ಮೂರನೇ ವಾರದ ಫ್ಲಾಪ್ ಆಟಗಾರರ ಪಟ್ಟಿ ಸೇರಿದ್ದಾರೆ.

8. ರೋವ್ಮನ್ ಪೊವೆಲ್

8. ರೋವ್ಮನ್ ಪೊವೆಲ್

ಈ ಬಾರಿ ಕೆರಿಬಿಯನ್ ಆಲ್ ರೌಂಡರ್ ರೋವ್ಮನ್ ಪೊವೆಲ್ ಅವರನ್ನು ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ವಿಭಾಗ ಬಲಿಷ್ಠವಾಗಲಿದೆ ಎಂಬ ಊಹೆಗಳಿತ್ತು. ಆದರೆ ರೋವ್ಮನ್ ಪೊವೆಲ್ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದು 4 ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ ದುಬಾರಿಯಾಗಿದ್ದಾರೆ. ಇತ್ತ ಬ್ಯಾಟಿಂಗ್‌ನಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಪೊವೆಲ್ 100ರ ಸ್ಟ್ರೈಕ್ ರೇಟ್ ಹೊಂದಿದ್ದು, ಫ್ಲಾಪ್ ಆಗಿದ್ದಾರೆ.

9. ಕ್ರಿಸ್ ಜೋರ್ಡನ್

9. ಕ್ರಿಸ್ ಜೋರ್ಡನ್

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪದಾರ್ಪಣೆ ಮಾಡಿದ ಕ್ರಿಸ್ ಜೋರ್ಡಾನ್ ಆ ಪಂದ್ಯದಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಆದರೆ ನಂತರದ 2 ಪಂದ್ಯಗಳಲ್ಲಿ ಯಾವುದೇ ವಿಕೆಟ್ ಪಡೆಯದೇ ವಿಫಲರಾದ ಕ್ರಿಸ್ ಜೋರ್ಡಾನ್ ಫ್ಲಾಪ್ ಆಟಗಾರರ ಪಟ್ಟಿ ಸೇರಿದ್ದಾರೆ.

10. ಜೋಶ್ ಹೇಜಲ್ ವುಡ್

10. ಜೋಶ್ ಹೇಜಲ್ ವುಡ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪದಾರ್ಪಣೆ ಮಾಡಿದ ಜೋಶ್ ಹೇಜಲ್ ವುಡ್ ಮೊದಲನೇ ಪಂದ್ಯದಲ್ಲಿಯೇ 33 ರನ್ ನೀಡಿ ದುಬಾರಿಯಾಗಿದ್ದಾರೆ. ಈ ಪಂದ್ಯದಲ್ಲಿ ಜೋಶ್ ಹೇಜಲ್ ವುಡ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ ಸಹ ರನ್ ನಿಯಂತ್ರಣ ಮಾಡಿ ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಹೀಗೆ ಜೋಶ್ ಹೇಜಲ್ ವುಡ್ ಮೂರನೇ ವಾರದಲ್ಲಿ ಫ್ಲಾಪ್ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ ಸೇರಿದ್ದಾರೆ.

Ambati Rayudu bat ಮುರಿದಿದ್ದು ಹೇಗೆ | Oneindia Kannada
11. ಟೈಮಲ್ ಮಿಲ್ಸ್

11. ಟೈಮಲ್ ಮಿಲ್ಸ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿರುವ ಟೈಮಲ್ ಮಿಲ್ಸ್ ಮೂರನೇ ವಾರದಲ್ಲಿಯೂ ಕೂಡ ತಮ್ಮ ನೀರಸ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಟೈಮಲ್ ಮಿಲ್ಸ್ ವಿಕೆಟ್ ಪಡೆದರೂ ಸಹ ಎದುರಾಳಿಗಳು ತನ್ನ ವಿರುದ್ಧ ರನ್ ಹೊಳೆ ಹರಿಸುವುದನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಮಿಲ್ಸ್ ಎಲ್ಲಾ ಪಂದ್ಯಗಳಲ್ಲಿಯೂ 25ಕ್ಕೂ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡು ಫ್ಲಾಪ್ ಆಗಿದ್ದಾರೆ.

Story first published: Monday, April 18, 2022, 10:15 [IST]
Other articles published on Apr 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X