ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಗೇಲ್, ಬಟ್ಲರ್, ರಾಹುಲ್: ಐಪಿಎಲ್‌ನಲ್ಲಿ ವೇಗಿಗಳಿಗೆ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು?

IPL 2022: List of 5 batsmen with most runs against fast bowlers in an IPL season

ಇಂಡಿಯನ್ ಪ್ರೀಮಿಯರ್ ಲೀಗ್ 2008ರಲ್ಲಿ ಆರಂಭವಾದ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆಗಿದ್ದು, ಅಂದಿನಿಂದ ಈ ವರ್ಷದವರೆಗೂ 15 ಆವೃತ್ತಿಗಳು ಯಶಸ್ವಿಯಾಗಿ ನಡೆದಿವೆ. ಪ್ರತಿ ವರ್ಷದ ಐಪಿಎಲ್ ಆವೃತ್ತಿಯಲ್ಲಿಯೂ ಹಲವಾರು ನೂತನ ದಾಖಲೆಗಳು, ಮೈಲಿಗಲ್ಲುಗಳು ನಿರ್ಮಾಣವಾಗುತ್ತಾ ಬಂದಿವೆ.

ಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿ

ಬೌಲರ್‌ಗಳು ತಮ್ಮದೇ ಆದ ವಿಶಿಷ್ಟ ದಾಖಲೆಗಳನ್ನು ನಿರ್ಮಿಸಿದ್ದರೆ, ಹೊಡಿ ಬಡಿ ಆಟ ಎಂದೇ ಖ್ಯಾತಿಯನ್ನು ಪಡೆದಿರುವ ಈ ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಪ್ರತಿ ಆವೃತ್ತಿಯಲ್ಲಿಯೂ ಹಲವಾರು ಬ್ಯಾಟ್ಸ್‌ಮನ್‌ಗಳು ಅಬ್ಬರದ ಆಟದ ನೆರವಿನಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.

IPL 2022: ಟೂರ್ನಿಯ 12 ಬೆಸ್ಟ್ ಆಟಗಾರರನ್ನು ಹೆಸರಿಸಿದ ಹರ್ಭಜನ್; ಆರ್‌ಸಿಬಿಯ ಇಬ್ಬರಿಗೆ ಸ್ಥಾನIPL 2022: ಟೂರ್ನಿಯ 12 ಬೆಸ್ಟ್ ಆಟಗಾರರನ್ನು ಹೆಸರಿಸಿದ ಹರ್ಭಜನ್; ಆರ್‌ಸಿಬಿಯ ಇಬ್ಬರಿಗೆ ಸ್ಥಾನ

ಇನ್ನು ಐಪಿಎಲ್ ಆವೃತ್ತಿಯೊಂದರಲ್ಲಿ ಬ್ಯಾಟ್ಸ್‌ಮನ್‌ ಓರ್ವ ನಿರ್ಮಿಸಿದ ಬ್ಯಾಟಿಂಗ್ ದಾಖಲೆ ಮತ್ತು ಮೈಲಿಗಲ್ಲುಗಳನ್ನು ಮುಂದಿನ ಆವೃತ್ತಿಯಲ್ಲಿ ಮತ್ತೋರ್ವ ಬ್ಯಾಟ್ಸ್‌ಮನ್‌ ಮುರಿದು ಹಾಕಿದ ಹಲವಾರು ಉದಾಹರಣೆಗಳಿವೆ. ಅದರಲ್ಲಿ ಐಪಿಎಲ್ ಆವೃತ್ತಿಯೊಂದರಲ್ಲಿ ವೇಗಿಗಳಿಗೆ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ವಿಶಿಷ್ಟ ದಾಖಲೆಯೂ ಕೂಡ ಒಂದು. ಇಂಥ ವಿಭಿನ್ನ ಹಾಗೂ ಕಷ್ಟಕರ ದಾಖಲೆಯಲ್ಲಿ ಅಗ್ರ ಸ್ಥಾನದಲ್ಲಿರುವ ಆಟಗಾರ ಯಾರು ಎಂಬುದರ ಕುರಿತು ವಿವರ ಮುಂದೆ ಇದೆ ಓದಿ.

ಆವೃತ್ತಿಯೊಂದರಲ್ಲಿ ವೇಗಿಗಳಿಗೆ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ

ಆವೃತ್ತಿಯೊಂದರಲ್ಲಿ ವೇಗಿಗಳಿಗೆ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯೊಂದರಲ್ಲಿ ವೇಗಿಗಳ ಬೌಲಿಂಗ್‌ಗೆ ಅತಿ ಹೆಚ್ಚು ರನ್ ಬಾರಿಸಿದ 5 ಆಟಗಾರರ ಪಟ್ಟಿ ಕೆಳಕಂಡಂತಿದೆ

ಜೋಸ್ ಬಟ್ಲರ್: 2022ರ ಐಪಿಎಲ್ ಆವೃತ್ತಿಯಲ್ಲಿ 17 ಪಂದ್ಯಗಳನ್ನಾಡಿದ ಜೋಸ್ ಬಟ್ಲರ್ ವೇಗಿಗಳ ವಿರುದ್ಧ 620 ರನ್ ಬಾರಿಸಿ ಆವೃತ್ತಿಯೊಂದರಲ್ಲಿ ವೇಗಿಗಳ ಬೌಲಿಂಗ್‌ಗೆ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ: 2016ರ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿದ್ದ ಕೊಹ್ಲಿ ಆ ಆವೃತ್ತಿಯಲ್ಲಿ ವೇಗಿಗಳ ವಿರುದ್ಧ 609 ರನ್ ಬಾರಿಸಿದ್ದರು.


ಕ್ರಿಸ್ ಗೇಲ್: 2013ರ ಐಪಿಎಲ್ ಆವೃತ್ತಿಯಲ್ಲಿ ವೇಗಿಗಳ ವಿರುದ್ಧ ಕ್ರಿಸ್ ಗೇಲ್ 544 ರನ್ ಬಾರಿಸಿದ್ದರು. ಗೇಲ್ ಈ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿದ್ದರು.

ಮೈಕೆಲ್ ಹಸ್ಸಿ: 2013ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೈಕಲ್ ಹಸ್ಸಿ 17 ಪಂದ್ಯಗಳನ್ನಾಡಿ ವೇಗಿಗಳ ವಿರುದ್ಧ 543 ರನ್ ಬಾರಿಸಿದ್ದರು.


ಕೆಎಲ್ ರಾಹುಲ್: 2020ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್ ಆ ಆವೃತ್ತಿಯಲ್ಲಿ ವೇಗಿಗಳ ವಿರುದ್ಧ 534 ರನ್ ಬಾರಿಸಿದ್ದರು. ಕೆಎಲ್ ರಾಹುಲ್ ಈ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದರು.

6 ವರ್ಷಗಳ ಬಳಿಕ ಕೊಹ್ಲಿ ದಾಖಲೆ ಮುರಿದ ಬಟ್ಲರ್

6 ವರ್ಷಗಳ ಬಳಿಕ ಕೊಹ್ಲಿ ದಾಖಲೆ ಮುರಿದ ಬಟ್ಲರ್

2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮಾಡಿದ್ದ ಹಲವು ದಾಖಲೆಗಳನ್ನು ಮುರಿಯಲು ಇನ್ನೂ ಸಹ ಸಾಧ್ಯವಾಗುತ್ತಿಲ್ಲ. ಕೊಹ್ಲಿ ಅಂದು ನಿರ್ಮಿಸಿದ್ದ ಅಂತಹ ಕಷ್ಟಕರ ದಾಖಲೆಗಳಲ್ಲಿ ವೇಗಿಗಳ ವಿರುದ್ಧ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯೂ ಒಂದು. ಅಂದು ವಿರಾಟ್ ಕೊಹ್ಲಿ 16 ಪಂದ್ಯಗಳನ್ನಾಡಿ ವೇಗಿಗಳ ವಿರುದ್ಧ 609 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದರು. ಆದರೆ ಇದೀಗ ಜೋಸ್ ಬಟ್ಲರ್ 17 ಪಂದ್ಯಗಳಲ್ಲಿ 620 ರನ್‌ಗಳನ್ನು ವೇಗಿಗಳ ವಿರುದ್ಧ ಬಾರಿಸಿ ಕೊಹ್ಲಿಯ ಆ ದಾಖಲೆಯನ್ನು ಮುರಿದು ಹಾಕಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಪಂಜಾಬ್ ಕಿಂಗ್ಸ್ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ | OneIndia Kannada
ಸ್ಟ್ರೈಕ್ ರೇಟ್ ವಿಷಯದಲ್ಲಿ ಗೇಲ್ ದ ಬಾಸ್!

ಸ್ಟ್ರೈಕ್ ರೇಟ್ ವಿಷಯದಲ್ಲಿ ಗೇಲ್ ದ ಬಾಸ್!

ಇನ್ನು ಆವೃತ್ತಿಯೊಂದರಲ್ಲಿ ವೇಗಿಗಳ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಈ 5 ಆಟಗಾರರ ಪಟ್ಟಿಯನ್ನು ಸ್ಟ್ರೈಕ್ ರೇಟ್ ದೃಷ್ಟಿಯಿಂದ ನೋಡಿದರೆ ಪಟ್ಟಿ ಈ ಕೆಳಕಂಡಂತೆ ಇರಲಿದೆ.

ಕ್ರಿಸ್ ಗೇಲ್ - 160.94

ವಿರಾಟ್ ಕೊಹ್ಲಿ - 151.87

ಜೋಸ್ ಬಟ್ಲರ್ - 147.26

ಕೆಎಲ್ ರಾಹುಲ್ - 142.78

ಮೈಕೆಲ್ ಹಸ್ಸಿ - 137.46

Story first published: Friday, June 3, 2022, 22:57 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X