ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3000ಕ್ಕಿಂತ ಹೆಚ್ಚು ಐಪಿಎಲ್ ರನ್ ಬಾರಿಸಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲದ 6 ನತದೃಷ್ಟ ಆಟಗಾರರಿವರು!

IPL 2022: List of 6 players who have failed to win IPL trophy even after completing 3000 runs

ಕಳೆದ ಮೇ 29ರ ಭಾನುವಾರದಂದು ನಡೆದ ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಜಯ ಸಾಧಿಸಿದ ನಂತರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದಿದ್ದು, ಈ ಮೂಲಕ ಹದಿನೈದು ಇಂಡಿಯನ್ ಪ್ರೀಮಿಯರ್‌ ಲೀಗ್ ಆವೃತ್ತಿಗಳು ಮುಕ್ತಾಯಗೊಂಡಿವೆ.

ಆತನ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ; ಉಮ್ರಾನ್ ಮಲಿಕ್ ಬಗ್ಗೆ ಅಫ್ರಿದಿ ಹೊಟ್ಟೆಕಿಚ್ಚಿನ ಹೇಳಿಕೆ!ಆತನ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ; ಉಮ್ರಾನ್ ಮಲಿಕ್ ಬಗ್ಗೆ ಅಫ್ರಿದಿ ಹೊಟ್ಟೆಕಿಚ್ಚಿನ ಹೇಳಿಕೆ!

2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಈ ವರ್ಷದವರೆಗೂ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಈಗಾಗಲೇ ವಿವಿಧ ತಂಡಗಳು ಟ್ರೋಫಿ ಎತ್ತಿಹಿಡಿದು ಚಾಂಪಿಯನ್ ಎನಿಸಿಕೊಂಡಿವೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಾತ್ರ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.

IPL 2022: ಫ್ಲಾಪ್ ಆಗಿದ್ದರೂ ಐಪಿಎಲ್ 2023ಕ್ಕೆ ಈ ಮೂವರನ್ನು ಹೊರಹಾಕುವುದಿಲ್ಲ ಡೆಲ್ಲಿ ಕ್ಯಾಪಿಟಲ್ಸ್!IPL 2022: ಫ್ಲಾಪ್ ಆಗಿದ್ದರೂ ಐಪಿಎಲ್ 2023ಕ್ಕೆ ಈ ಮೂವರನ್ನು ಹೊರಹಾಕುವುದಿಲ್ಲ ಡೆಲ್ಲಿ ಕ್ಯಾಪಿಟಲ್ಸ್!

ಈ ವರ್ಷದ ಐಪಿಎಲ್ ಟೂರ್ನಿಯಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಕ್ವಾಲಿಫೈಯರ್ ಪಂದ್ಯದವರೆಗೂ ಯಶಸ್ವಿಯಾಗಿ ಬಂದು ಫೈನಲ್ ಹಂತ ತಲುಪುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈ ತಪ್ಪಿಸಿಕೊಂಡಿತು. ಈ ಮೂಲಕ ಈ ಬಾರಿಯೂ ಟ್ರೋಫಿ ಎತ್ತಿಹಿಡಿಯುವ ತನ್ನ ಕನಸನ್ನು ಬೆಂಗಳೂರು ಪಡೆ ನನಸು ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಹೀಗೆ ಈ ತಂಡಗಳು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವುದರಲ್ಲಿ ವಿಫಲ ಹೊಂದಿದ್ದರೆ, 3000 ಐಪಿಎಲ್ ರನ್ ಗಡಿ ದಾಟಿರುವ ಈ ಕೆಳಕಂಡ 6 ಆಟಗಾರರು ಸಹ ಇಲ್ಲಿಯವರೆಗೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಆಗದೇ ವಿಫಲರಾಗಿದ್ದಾರೆ. ಆ 6 ನತದೃಷ್ಟ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ಅತಿ ಹೆಚ್ಚು ಐಪಿಎಲ್ ರನ್ ಗಳಿಸಿದ್ದರೂ ಟ್ರೋಫಿ ಗೆಲ್ಲಲಾಗದ ಆಟಗಾರ ಎಂಬ ಸಾಲನ್ನು ಕೇಳಿದ ಕೂಡಲೇ ಎಲ್ಲರ ತಲೆಗೂ ಬರುವ ಮೊದಲ ಹೆಸರೇ ವಿರಾಟ್ ಕೊಹ್ಲಿ. ಕೊಹ್ಲಿ 6411 ರನ್ ಕಲೆಹಾಕಿದ್ದು, ಇನ್ನೂ ಸಹ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಆಗಿಲ್ಲ. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ಕೀರ್ತಿಯನ್ನು ವಿರಾಟ್ ಕೊಹ್ಲಿ ಸಂಪಾದಿಸಿದರೂ ಸಹ ಟ್ರೋಫಿ ಗೆಲ್ಲಲಾಗದೇ ಇರುವುದು ಕೊಹ್ಲಿಯ ದುರಾದೃಷ್ಟವೇ ಸರಿ.

2. ಎಬಿ ಡಿವಿಲಿಯರ್ಸ್

2. ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ಪರ ಐಪಿಎಲ್ ಆವೃತ್ತಿಗಳಲ್ಲಿ ಆಡಿರುವ ಎಬಿ ಡಿವಿಲಿಯರ್ಸ್ 5162 ರನ್ ಕಲೆಹಾಕಿದ್ದು, ಟ್ರೋಫಿ ಎತ್ತಿಹಿಡಿಯುವಲ್ಲಿ ಮಾತ್ರ ಯಶಸ್ವಿಯಾಗಿಲ್ಲ.

3. ಕ್ರಿಸ್ ಗೇಲ್

3. ಕ್ರಿಸ್ ಗೇಲ್

ಐಪಿಎಲ್ ಇತಿಹಾಸದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದಿರುವ ಕ್ರಿಸ್ ಗೇಲ್ 4965 ರನ್ ಕಲೆಹಾಕಿದ್ದು, ಒಮ್ಮೆಯೂ ಸಹ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.

4. ಕೆಎಲ್ ರಾಹುಲ್

4. ಕೆಎಲ್ ರಾಹುಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪರ ಒಟ್ಟು 102 ಐಪಿಎಲ್ ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 3641 ರನ್ ಕಲೆಹಾಕಿದ್ದು, ಯಾವುದೇ ಆವೃತ್ತಿಯಲ್ಲಿಯೂ ಸಹ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ.

5. ಅಜಿಂಕ್ಯಾ ರಹಾನೆ

5. ಅಜಿಂಕ್ಯಾ ರಹಾನೆ

ಐಪಿಎಲ್ ಇತಿಹಾಸದ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಓರ್ವನಾಗಿರುವ ಅಜಿಂಕ್ಯ ರಹಾನೆ ಒಟ್ಟು 156 ಐಪಿಎಲ್ ಪಂದ್ಯಗಳನ್ನಾಡಿದ್ದು, 4021 ರನ್ ಕಲೆ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳ ಪರ ಕಣಕ್ಕಿಳಿದಿರುವ ರಹಾನೆ ಒಮ್ಮೆಯೂ ಚಾಂಪಿಯನ್ ಆಗುವ ಅದೃಷ್ಟ ಪಡೆದಿಲ್ಲ.

6. ಸಂಜು ಸ್ಯಾಮ್ಸನ್

6. ಸಂಜು ಸ್ಯಾಮ್ಸನ್

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಅವಕಾಶವನ್ನು ಫೈನಲ್ ಪಂದ್ಯದಲ್ಲಿ ಸೋಲುವುದರ ಮೂಲಕ ಕೈತಪ್ಪಿಸಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 3296 ಐಪಿಎಲ್ ರನ್ ಗಳಿಸಿದ್ದರೂ ಸಹ ಒಮ್ಮೆಯೂ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ.

Story first published: Saturday, June 4, 2022, 23:37 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X