IPL 2022: ಮುಕ್ತಾಯವಾದ ನಂತರ ತಂಡಗಳು ಮತ್ತು ಆಟಗಾರರಿಗೆ ಸಿಗಲಿರುವ ಪ್ರಶಸ್ತಿ ಮತ್ತು ಹಣವೆಷ್ಟು?

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾಗಿ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇಂದು ( ಮೇ 29 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ಅಧಿಕೃತ ತೆರೆ ಬೀಳಲಿದೆ.

IPL 2022: ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 5 ಉತ್ತಮ ಆಟಗಾರರು!IPL 2022: ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 5 ಉತ್ತಮ ಆಟಗಾರರು!

ಇತ್ತಂಡಗಳ ನಡುವಿನ ಈ ಮಹಾ ಕಾಳಗದಲ್ಲಿ ಗುಜರಾತ್ ಟೈಟನ್ಸ್ ಗೆದ್ದರೆ ನೂತನ ಚಾಂಪಿಯನ್ ಹೊರಬರಲಿದ್ದು, ರಾಜಸ್ತಾನ್ ರಾಯಲ್ಸ್ ಗೆದ್ದರೆ 13 ವರ್ಷಗಳ ಬಳಿಕ ತಂಡ ತನ್ನ ಎರಡನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಂತಾಗಲಿದೆ. ಇನ್ನು ಎರಡೂ ತಂಡಗಳು ಸಹ ಬಲಿಷ್ಠ ಆಟಗಾರರನ್ನು ಹೊಂದಿರುವ ಕಾರಣ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿರಲಿದ್ದು, ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಬಹುದು ಎಂಬ ಕುತೂಹಲ ಹೆಚ್ಚಾಗಿದೆ.

IPL 2022 Final: ಗುಜರಾತ್, ರಾಜಸ್ಥಾನ್ ನಡುವೆ ಟ್ರೋಫಿ ಎತ್ತಿಹಿಡಿಯುವ ತಂಡವನ್ನು ಹೆಸರಿಸಿದ ರೈನಾIPL 2022 Final: ಗುಜರಾತ್, ರಾಜಸ್ಥಾನ್ ನಡುವೆ ಟ್ರೋಫಿ ಎತ್ತಿಹಿಡಿಯುವ ತಂಡವನ್ನು ಹೆಸರಿಸಿದ ರೈನಾ

ಇನ್ನು ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೆಲ್ಲುವ ತಂಡಕ್ಕೆ ಮಾತ್ರವಲ್ಲದೇ ರನ್ನರ್ ಅಪ್, ಎರಡನೇ ಸ್ಥಾನ, ಮೂರನೇ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ತಂಡಗಳಿಗೂ ವಿವಿಧ ಮೊತ್ತದ ಬಹುಮಾನ ಧನ ಲಭಿಸಲಿದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಲವಾರು ಆಟಗಾರರಿಗೆ ಪ್ರತ್ಯೇಕ ಪ್ರಶಸ್ತಿಗಳು ಮತ್ತು ಬಹುಮಾನ ಧನದ ವಿತರಣೆಯಾಗಲಿದೆ. ಹೀಗೆ ಟೂರ್ನಿ ಮುಕ್ತಾಯವಾದ ನಂತರ ಆಟಗಾರರಿಗೆ ಸಿಗಲಿರುವ ಪ್ರಶಸ್ತಿಗಳು ಯಾವುವು ಮತ್ತು ಎಷ್ಟು ಹಣ ಸಿಗಬಹುದು ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ವಿವಿಧ ಪ್ರಶಸ್ತಿಗಳು ಮತ್ತು ಬಹುಮಾನ ಧನದ ಪಟ್ಟಿ

ವಿವಿಧ ಪ್ರಶಸ್ತಿಗಳು ಮತ್ತು ಬಹುಮಾನ ಧನದ ಪಟ್ಟಿ

ವಿಜೇತ: ವಿಜೇತ ತಂಡ 20 ಕೋಟಿ ನಗದು ಬಹುಮಾನವನ್ನು ಪಡೆಯಲಿದೆ.

ರನ್ನರ್ಸ್-ಅಪ್: ರನ್ನರ್ಸ್ ಅಪ್ ತಂಡ 13 ಕೋಟಿ ನಗದು ಬಹುಮಾನವನ್ನು ಪಡೆಯಲಿದೆ.

ಮೂರನೇ ಸ್ಥಾನ: ಕ್ವಾಲಿಫೈಯರ್ 2 (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಸೋತ ತಂಡಕ್ಕೆ 7 ಕೋಟಿ ನಗದು ಬಹುಮಾನ ನೀಡಲಾಗುವುದು.

ನಾಲ್ಕನೇ ಸ್ಥಾನ: ಎಲಿಮಿನೇಟರ್ (ಲಕ್ನೋ ಸೂಪರ್ ಜೈಂಟ್ಸ್) ಸೋತ ತಂಡಕ್ಕೆ 6.5 ಕೋಟಿ ನಗದು ಬಹುಮಾನ ನೀಡಲಾಗುವುದು.

ಆರೆಂಜ್ ಕ್ಯಾಪ್: ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಐಪಿಎಲ್ ಆರೆಂಜ್ ಕ್ಯಾಪ್ ಮತ್ತು 15 ಲಕ್ಷ ನಗದು ಬಹುಮಾನ ನೀಡಲಾಗುವುದು.

ಪರ್ಪಲ್ ಕ್ಯಾಪ್: ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ಮತ್ತು 15 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.

ಐಪಿಎಲ್ ಟೂರ್ನಿಯ ಉದಯೋನ್ಮುಖ ಆಟಗಾರ: ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರನೋರ್ವ 20 ಲಕ್ಷ ನಗದು ಬಹುಮಾನವನ್ನು ಪಡೆಯಲಿದ್ದಾರೆ.

ಅತ್ಯಂತ ಮೌಲ್ಯಯುತ ಆಟಗಾರ: ಆಟಗಾರನು 12 ಲಕ್ಷದ ನಗದು ಬಹುಮಾನವನ್ನು ಪಡೆಯಲಿದ್ದಾನೆ.

ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸ್‌ಗಳ ಪ್ರಶಸ್ತಿ: ಈ ಪ್ರಶಸ್ತಿ ಗೆದ್ದವರಿಗೆ 12 ಲಕ್ಷ ನಗದು ಬಹುಮಾನ ಸಿಗಲಿದೆ.

ಸೀಸನ್‌ನ ಗೇಮ್ ಚೇಂಜರ್: ಸೀಸನ್‌ನ ಗೇಮ್ ಚೇಂಜರ್ ವಿಜೇತ ಆಟಗಾರ 12 ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.

ಋತುವಿನ ಸೂಪರ್ ಸ್ಟ್ರೈಕರ್: ಪ್ರಸಕ್ತ ಆವೃತ್ತಿಯ ಸೂಪರ್ ಸ್ಟ್ರೈಕರ್ ವಿಜೇತ ಆಟಗಾರ 15 ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.

ಫೇರ್ ಪ್ಲೇ ಪ್ರಶಸ್ತಿ: ಋತುವಿನ ಉದ್ದಕ್ಕೂ ಫೇರ್ ಪ್ಲೇನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ತಂಡವು ಫೇರ್ ಪ್ಲೇ ಪ್ರಶಸ್ತಿ ಜತೆಗೆ ನಗದು ಬಹುಮಾನವನ್ನು ಸಹ ಪಡೆಯುತ್ತದೆ.

ಆರೆಂಜ್ ಕ್ಯಾಪ್ ಬಟ್ಲರ್ ಪಾಲಾಗುವುದು ಖಚಿತ

ಆರೆಂಜ್ ಕ್ಯಾಪ್ ಬಟ್ಲರ್ ಪಾಲಾಗುವುದು ಖಚಿತ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಅಬ್ಬರಿಸಿರುವ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮುವುದು ಖಚಿತ. ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ 16 ಪಂದ್ಯಗಳನ್ನಾಡಿ 824 ರನ್ ಕಲೆ ಹಾಕಿರುವ ಜೋಸ್ ಬಟ್ಲರ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಎಷ್ಟೇ ರನ್ ಗಳಿಸಿದರೂ ಸಹ ಆರೆಂಜ್ ಕ್ಯಾಪ್ ಜೋಸ್ ಬಟ್ಲರ್ ಪಾಲಾಗುವುದು ಖಚಿತ.

ಪರ್ಪಲ್ ಕ್ಯಾಪ್ ಚಾಹಲ್ ಪಾಲು?

ಪರ್ಪಲ್ ಕ್ಯಾಪ್ ಚಾಹಲ್ ಪಾಲು?

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಾನಿಂದು ಹಸರಂಗ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಯುಜುವೇಂದ್ರ ಚಾಹಲ್ ನಡುವೆ ನೇರಾನೇರ ಪೈಪೋಟಿ ಇದೆ. ವನಿಂದು ಹಸರಂಗ 26 ವಿಕೆಟ್ ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಯುಜುವೇಂದ್ರ ಚಾಹಲ್ ಕೂಡ 26 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಪರ್ಪಲ್ ಕ್ಯಾಪ್ ಚಾಹಲ್ ಪಾಲಾಗಬೇಕೆಂದರೆ ಫೈನಲ್ ಪಂದ್ಯದಲ್ಲಿ ಚಹಲ್ 1 ವಿಕೆಟ್ ಪಡೆದರೆ ಸಾಕಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 29, 2022, 16:32 [IST]
Other articles published on May 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X