IPL 2022: 2011ರ ಐಪಿಎಲ್‌ನಿಂದ ಇಲ್ಲಿಯವರೆಗೆ ಕ್ವಾಲಿಫೈಯರ್ 1 ಪಂದ್ಯ ಗೆದ್ದ ಎಲ್ಲಾ ತಂಡಗಳ ಪಟ್ಟಿ

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯವಾಗಿದ್ದು, ಅಂಕಪಟ್ಟಿಯಲ್ಲಿ ಟಾಪ್ ನಾಲ್ಕು ಸ್ಥಾನಗಳನ್ನು ಪಡೆದಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

GT vs RR ಕ್ವಾಲಿಫೈಯರ್ 1: ಮಳೆಗೆ ಪಂದ್ಯ ರದ್ದಾದರೆ ಯಾರು ವಿನ್ನರ್? ಆಯ್ಕೆ ಮಾಡಲು ಇವೆ 3 ವಿಧಾನಗಳು!GT vs RR ಕ್ವಾಲಿಫೈಯರ್ 1: ಮಳೆಗೆ ಪಂದ್ಯ ರದ್ದಾದರೆ ಯಾರು ವಿನ್ನರ್? ಆಯ್ಕೆ ಮಾಡಲು ಇವೆ 3 ವಿಧಾನಗಳು!

ಇನ್ನು ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಮತ್ತು ಎರಡನೇ ಸ್ಥಾನ ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ವಾಲಿಫೈಯರ್ ಒಂದನೇ ಪಂದ್ಯ ಆಡುವ ಅವಕಾಶವನ್ನು ಪಡೆದುಕೊಂಡಿದ್ದು, ಈ ಪಂದ್ಯ ಇಂದು ( ಮೇ 24 ) ಕೋಲ್ಕತ್ತಾದ ಈಡನ್ ಗಾರ್ಡನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ಇನ್ನು ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರೆ, ಸೋಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯ ಗೆದ್ದು ಬರುವ ತಂಡದ ಜೊತೆ ಫೈನಲ್ ಪ್ರವೇಶಕ್ಕೋಸ್ಕರ್ ಸೆಣಸಾಟ ನಡೆಸಲಿದೆ.

IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?

ಇನ್ನು 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿ ನಡೆದಿದ್ದು, ಅಂದಿನಿಂದ 2010ರ ಐಪಿಎಲ್ ಆವೃತ್ತಿಯವರೆಗೂ ಪ್ಲೇಆಫ್ ಮಾದರಿ ಬದಲು ಸೆಮಿಫೈನಲ್ ಮತ್ತು ಫೈನಲ್ ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಆದರೆ, ನಂತರ ನಡೆದ 2011ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಈ ಪ್ಲೇಆಫ್ ಮಾದರಿ ಆರಂಭವಾಗಿದ್ದು, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳ ಪರಿಚಯ ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಕರಿಗೆ ಆಯಿತು. ಹೀಗೆ ಅಂದಿನಿಂದ ಇಂದಿನವರೆಗೂ ನಡೆದಿರುವ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿಯೂ ನಡೆದಿರುವ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ಯಾವುದು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಒಂದನೇ ಕ್ವಾಲಿಫೈಯರ್ ಪಂದ್ಯ ಗೆದ್ದ ಎಲ್ಲಾ ತಂಡಗಳ ಪಟ್ಟಿ

ಒಂದನೇ ಕ್ವಾಲಿಫೈಯರ್ ಪಂದ್ಯ ಗೆದ್ದ ಎಲ್ಲಾ ತಂಡಗಳ ಪಟ್ಟಿ

2011ರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಒಂದನೇ ಕ್ವಾಲಿಫೈಯರ್ ಪಂದ್ಯಗಳಲ್ಲಿ ವಿಜೇತರಾಗಿ ಹೊರಹೊಮ್ಮಿ ನೇರವಾಗಿ ಫೈನಲ್ ಪ್ರವೇಶಿಸಿದ ತಂಡಗಳ ಪಟ್ಟಿ ಈ ಕೆಳಕಂಡಂತಿದೆ..

2011 ಚೆನ್ನೈ ಸೂಪರ್ ಕಿಂಗ್ಸ್

2012 ಕೋಲ್ಕತ್ತಾ ನೈಟ್ ರೈಡರ್ಸ್

2013 ಚೆನ್ನೈ ಸೂಪರ್ ಕಿಂಗ್ಸ್

2014 ಕೋಲ್ಕತ್ತಾ ನೈಟ್ ರೈಡರ್ಸ್

2015 ಮುಂಬೈ ಇಂಡಿಯನ್ಸ್

2016 ರಾಯಲ್ ಚಾಲೆಂಜರ್ಸ್ ಬೆಂಗಳೂರು

2017 ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

2018 ಚೆನ್ನೈ ಸೂಪರ್ ಕಿಂಗ್ಸ್

2019 ಮುಂಬೈ ಇಂಡಿಯನ್ಸ್

2020 ಮುಂಬೈ ಇಂಡಿಯನ್ಸ್

2021 ಚೆನ್ನೈ ಸೂಪರ್ ಕಿಂಗ್ಸ್

ಹೆಚ್ಚು ಬಾರಿ ಗೆದ್ದ ತಂಡವಿದು

ಹೆಚ್ಚು ಬಾರಿ ಗೆದ್ದ ತಂಡವಿದು

ಇನ್ನು ಈ ಮೊದಲನೇ ಕ್ವಾಲಿಫೈಯರ್ ಪಂದ್ಯಗಳನ್ನು ಹೆಚ್ಚು ಬಾರಿ ಗೆದ್ದ ತಂಡ ಎಂಬ ಸಾಧನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಲ್ಲಿಯವರೆಗೂ ಒಟ್ಟು 4 ಬಾರಿ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದಿದ್ದು ಇದು ಐಪಿಎಲ್ ಇತಿಹಾಸದಲ್ಲಿ ದಾಖಲೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿದರೆ ಮುಂಬೈ ಇಂಡಿಯನ್ಸ್ 3 ಪಂದ್ಯಗಳಲ್ಲಿ ಗೆದ್ದಿದ್ದು ಅತಿಹೆಚ್ಚು ಬಾರಿ ಮೊದಲನೇ ಕ್ವಾಲಿಫೈಯರ್ ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ.

ಕ್ವಾಲಿಫೈಯರ್ ಗೆದ್ದರೆ ಅನುಕೂಲ ಹೆಚ್ಚು

ಕ್ವಾಲಿಫೈಯರ್ ಗೆದ್ದರೆ ಅನುಕೂಲ ಹೆಚ್ಚು

ಇನ್ನು ಈ ಒಂದನೇ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದರೆ ಅನುಕೂಲ ಹೆಚ್ಚಿರಲಿದೆ. ಹೌದು, ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಪ್ಲೇಅಫ್ ಸುತ್ತಿಗೆ ಪ್ರವೇಶಿಸಲಿದೆ. ಹೀಗಾಗಿ ಪ್ಲೇಆಫ್ ಸುತ್ತಿನಲ್ಲಿ ಕೇವಲ ಒಂದೇ ಪಂದ್ಯವನ್ನಾಡಿ ಫೈನಲ್ ತಲುಪುವ ಅನುಕೂಲ ಸಿಗಲಿದೆ. ಅತ್ತ ಈ ಪಂದ್ಯದಲ್ಲಿ ಸೋಲುವ ತಂಡಕ್ಕೂ ಕೂಡ ಅನುಕೂಲವಿರಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳದೇ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡುವ ಅವಕಾಶವನ್ನು ಪಡೆಯಲಿದ್ದು, ಮತ್ತೆ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳಲು ವೇದಿಕೆಯನ್ನು ಪಡೆದುಕೊಳ್ಳಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 24, 2022, 19:04 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X