ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!

IPL 2022: List of batsman who tops the batting table in this tournament

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇತ್ತೀಚೆಗಷ್ಟೇ ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ.

IPL 2022ರಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್‌ ತಂಡದಿಂದ ಈ ಐವರು ಹೊರಬೀಳಬಹುದು!IPL 2022ರಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್‌ ತಂಡದಿಂದ ಈ ಐವರು ಹೊರಬೀಳಬಹುದು!

ಮೇ 29ರ ಭಾನುವಾರ ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ತನ್ನ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿ ಎತ್ತಿ ಹಿಡಿಯಿತು.

IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್

ಹೀಗೆ 2 ತಿಂಗಳುಗಳ ಕಾಲ ನಡೆದ ಈ ಮಹಾ ಟೂರ್ನಿಯಲ್ಲಿ ಹಲವಾರು ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚು ಹರಿಸಿದ್ದು, ಟೂರ್ನಿಯಲ್ಲಿ ತಮ್ಮದೇ ಆದ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ. ಈ ಪೈಕಿ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್, ವೇಗದ ಶತಕ, ವೇಗದ ಅರ್ಧಶತಕ ಹೀಗೆ ವಿವಿಧ ದಾಖಲೆಗಳನ್ನು ಹಲವಾರು ಬ್ಯಾಟ್ಸ್‌ಮನ್‌ಗಳು ಬರೆದಿದ್ದಾರೆ. ಹೀಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತ್ಯುನ್ನತ ಮಟ್ಟ ತಲುಪಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಕೆಳಕಂಡಂತಿದೆ.

ಟೂರ್ನಿಯ ಬ್ಯಾಟಿಂಗ್‌ ಟೇಬಲ್ ಲೀಡರ್ಸ್

ಟೂರ್ನಿಯ ಬ್ಯಾಟಿಂಗ್‌ ಟೇಬಲ್ ಲೀಡರ್ಸ್

ಅತ್ಯಧಿಕ ರನ್ - ಜೋಸ್ ಬಟ್ಲರ್ - 863 ರನ್

ಹೆಚ್ಚು ಶತಕಗಳು - ಜೋಸ್ ಬಟ್ಲರ್ - 4 ಶತಕಗಳು

ಹೆಚ್ಚು ಅರ್ಧಶತಕಗಳು - ಡೇವಿಡ್ ವಾರ್ನರ್ - 5 ಅರ್ಧಶತಕಗಳು

ಅತ್ಯಧಿಕ ರನ್ - ಕ್ವಿಂಟನ್ ಡಿ ಕಾಕ್ - 70 ಎಸೆತಗಳಲ್ಲಿ ಅಜೇಯ 140 ರನ್

ಹೆಚ್ಚು ಸಿಕ್ಸರ್ - ಜೋಸ್ ಬಟ್ಲರ್ - 45 ಸಿಕ್ಸರ್

ಹೆಚ್ಚು ಫೋರ್ - ಜೋಸ್ ಬಟ್ಲರ್ - 83 ಫೋರ್

ಅತ್ಯುತ್ತಮ ಸ್ಟ್ರೈಕ್ ರೇಟ್ - ದಿನೇಶ್ ಕಾರ್ತಿಕ್ - 183.33

ಅತ್ಯುತ್ತಮ ಸರಾಸರಿ - ಡೇವಿಡ್ ಮಿಲ್ಲರ್ - 68.71

ವೇಗದ ಅರ್ಧಶತಕ - ಪ್ಯಾಟ್ ಕಮಿನ್ಸ್ - 14 ಎಸೆತಗಳಲ್ಲಿ

ವೇಗದ ಶತಕ - ರಜತ್ ಪಾಟಿದಾರ್ - 49 ಎಸೆತಗಳಲ್ಲಿ

ಟೂರ್ನಿಯಲ್ಲಿ ಜೋಸ್ ಬಟ್ಲರ್ ಪಾರುಪತ್ಯ

ಟೂರ್ನಿಯಲ್ಲಿ ಜೋಸ್ ಬಟ್ಲರ್ ಪಾರುಪತ್ಯ

ಈ ಬಾರಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆಟಗಾರನೆಂದರೆ ಅದು ಜೋಸ್ ಬಟ್ಲರ್. 17 ಪಂದ್ಯಗಳಲ್ಲಿ ಒಟ್ಟು 863 ರನ್ ಕಲೆಹಾಕಿದ ಬಟ್ಲರ್ ದಾಖಲೆಯ 4 ಶತಕಗಳನ್ನು ಬಾರಿಸುವುದರ ಜತೆಗೆ 4 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಹಾಗೂ ಈ ಬಾರಿಯ ಆವೃತ್ತಿಯಲ್ಲಿ ಅತಿಹೆಚ್ಚು ಫೋರ್ ಮತ್ತು ಸಿಕ್ಸರ್ ಬಾರಿಸಿದ ದಾಖಲೆಯನ್ನು ಸಹ ಜೋಸ್ ಬಟ್ಲರ್ ನಿರ್ಮಿಸಿದ್ದಾರೆ.

Match Finisher Dinesh Karthik ಗೆ ಹುಟ್ಟುಹಬ್ಬದ ಸಂಭ್ರಮ | #Cricket | Oneindia Kannada
ಪಟ್ಟಿಯಲ್ಲಿಲ್ಲ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು

ಪಟ್ಟಿಯಲ್ಲಿಲ್ಲ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತನೇ ಸ್ಥಾನ ಮತ್ತು ಮುಂಬೈ ಇಂಡಿಯನ್ಸ್ ಹತ್ತನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿದವು. ಇನ್ನು ಈ ಎರಡೂ ತಂಡಗಳ ಯಾವುದೇ ಆಟಗಾರ ಕೂಡ ವೈಯಕ್ತಿಕ ಪ್ರದರ್ಶನದಲ್ಲಿಯೂ ಉಳಿದ ತಂಡಗಳ ಆಟಗಾರರಿಗಿಂತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಎರಡೂ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಸಹ ಅವರು ವಿಫಲವಾಗಿರುವ ಕಾರಣವೇ ತಂಡದ ಹೀನಾಯ ಸ್ಥಿತಿಗೆ ಕಾರಣವಾಯಿತು ಎನ್ನಬಹುದು.

Story first published: Wednesday, June 1, 2022, 10:17 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X