ಐಪಿಎಲ್: ಯಾವ ತಂಡ ಎಷ್ಟು ಬಾರಿ ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದಿದೆ? ಹೆಚ್ಚು ಬಾರಿ ಗೆದ್ದಿರುವ ತಂಡವಿದು!

ಮೇ 29ರಂದು ಅಹಮದಾಬಾದಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ಮೂಲಕ ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು.

ಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿ

ರಾಜಸ್ಥಾನ್ ರಾಯಲ್ಸ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನು ನೀಡಿ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲುವುದರ ಮೂಲಕ ಚಾಂಪಿಯನ್ ಆಗಿ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾಯಿತು. ರಾಜಸ್ಥಾನ್ ರಾಯಲ್ಸ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾದರೆ, ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಡೆದುಕೊಂಡರು.

IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!

ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 863 ರನ್ ಬಾರಿಸಿದ ಜೋಸ್ ಬಟ್ಲರ್ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ವಿಜೇತನಾದರೆ, ಯುಜುವೇಂದ್ರ ಚಾಹಲ್ 27 ವಿಕೆಟ್ ಪಡೆಯುವುದರ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು. ಹೀಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 2 ಕ್ಯಾಪ್ಸ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಯಿತು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾವ ತಂಡಗಳು ಎಷ್ಟು ಬಾರಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದಿವೆ ಹಾಗೂ ಯಾವ ತಂಡ ಹೆಚ್ಚು ಬಾರಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಡೆದುಕೊಂಡಿದೆ ಎಂಬುದರ ಕುರಿತಾದ ವಿವರ ಮುಂದೆ ಓದಿ.

ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆದ್ದಿರುವ ತಂಡಗಳ ಟಾಪ್ 9 ಪಟ್ಟಿ ಇಲ್ಲಿದೆ

ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆದ್ದಿರುವ ತಂಡಗಳ ಟಾಪ್ 9 ಪಟ್ಟಿ ಇಲ್ಲಿದೆ

ಚೆನ್ನೈ ಸೂಪರ್ ಕಿಂಗ್ಸ್ - 3 ಆರೆಂಜ್ ಕ್ಯಾಪ್ ಮತ್ತು 4 ಪರ್ಪಲ್ ಕ್ಯಾಪ್ - ಒಟ್ಟು 7

ಸನ್ ರೈಸರ್ಸ್ ಹೈದರಾಬಾದ್ - 4 ಆರೆಂಜ್ ಕ್ಯಾಪ್ ಮತ್ತು 2 ಪರ್ಪಲ್ ಕ್ಯಾಪ್ - ಒಟ್ಟು 6

ರಾಯಲ್ ಚಾಲೆಂಜರ್ಸ್ ಬೆಂಗಳೂರು - 4 ಆರೆಂಜ್ ಕ್ಯಾಪ್ ಮತ್ತು 1 ಪರ್ಪಲ್ ಕ್ಯಾಪ್ - ಒಟ್ಟು 5

ಪಂಜಾಬ್ ಕಿಂಗ್ಸ್ - 2 ಆರೆಂಜ್ ಕ್ಯಾಪ್ ಮತ್ತು 1 ಪರ್ಪಲ್ ಕ್ಯಾಪ್

ರಾಜಸ್ಥಾನ್ ರಾಯಲ್ಸ್ - 1 ಆರೆಂಜ್ ಕ್ಯಾಪ್ ಮತ್ತು 2 ಪರ್ಪಲ್ ಕ್ಯಾಪ್

ಮುಂಬೈ ಇಂಡಿಯನ್ಸ್ - 1 ಆರೆಂಜ್ ಕ್ಯಾಪ್ ಮತ್ತು 1 ಪರ್ಪಲ್ ಕ್ಯಾಪ್

ಡೆಲ್ಲಿ ಕ್ಯಾಪಿಟಲ್ಸ್ - 2 ಪರ್ಪಲ್ ಕ್ಯಾಪ್

ಡೆಕ್ಕನ್ ಚಾರ್ಜರ್ಸ್ - 2 ಪರ್ಪಲ್ ಕ್ಯಾಪ್

ಕೋಲ್ಕತ್ತಾ ನೈಟ್ ರೈಡರ್ಸ್ - 1 ಆರೆಂಜ್ ಕ್ಯಾಪ್

ಆರೆಂಜ್, ಪರ್ಪಲ್ ಕ್ಯಾಪ್ ವಿಚಾರದಲ್ಲಿ ಚೆನ್ನೈ ತಂಡವೇ 'ಸೂಪರ್ ಕಿಂಗ್ಸ್'

ಆರೆಂಜ್, ಪರ್ಪಲ್ ಕ್ಯಾಪ್ ವಿಚಾರದಲ್ಲಿ ಚೆನ್ನೈ ತಂಡವೇ 'ಸೂಪರ್ ಕಿಂಗ್ಸ್'

ಅತಿ ಹೆಚ್ಚು ಬಾರಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಗೆದ್ದಿರುವ ದಾಖಲೆಯನ್ನು ಬರೆದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್. 3 ಆರೆಂಜ್ ಕ್ಯಾಪ್ ( 2009, 2013 ಮತ್ತು 2021 ) ಮತ್ತು 4 ಪರ್ಪಲ್ ಕ್ಯಾಪ್ ( 2013, 2014, 2015 ಮತ್ತು 2019 ) ಸೇರಿದಂತೆ ಒಟ್ಟು 7 ಬಾರಿ ಕ್ಯಾಪ್‌ಗಳನ್ನು ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಗೆದ್ದಿದ್ದಾರೆ.

South Africaಗೆ ನಡುಕ ಹುಟ್ಟಿಸಲು Dinesh Karthik ಹೇಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ ನೋಡಿ | OneIndia Kannada
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲದೇ ಇರುವ ತಂಡಗಳಿವು

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲದೇ ಇರುವ ತಂಡಗಳಿವು

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಮ್ಮೆಯೂ ಆರೆಂಜ್ ಕ್ಯಾಪ್ ಗೆಲ್ಲದೇ ಇರುವ ತಂಡಗಳೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಹಾಗೂ ಒಮ್ಮೆಯೂ ಪರ್ಪಲ್ ಕ್ಯಾಪ್ ಗೆಲ್ಲದೇ ಇರುವ ತಂಡವೆಂದರೆ ಅದು ಕೋಲ್ಕತ್ತಾ ನೈಟ್ ರೈಡರ್ಸ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 6, 2022, 22:59 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X