ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಮತ್ತಷ್ಟು ಬಲಿಷ್ಠವಾಗಿ ಹಿಂದಿರುತ್ತೇವೆ": ಸೋಲಿನ ಬಳಿಕ ಲಕ್ನೋ ಮೆಂಟರ್ ಗಂಭೀರ್ ಸಂದೇಶ

IPL 2022: LSG mentor Gautam Gambhir pens note after LSG lose said We will come back stronger

ಐಪಿಎಲ್ 15ನೇ ಆವೃತ್ತಿಯ ಎರಡನೇ ಪ್ಲೇಆಫ್ ಪಂದ್ಯ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಸೋಲು ಅನುಭವಿಸಿರುವ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಹಂತದಲ್ಲಿ ಅನುಭವಿಸಿದ ಸೋಲಿನಿಂದಾಗಿ ಆಘಾತಗೊಂಡಿದೆ.

ಇನ್ನು ಈ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಟೂರ್ನಿಯಲ್ಲಿ ತಮ್ಮ ತಂಡದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಗೌತಿ ಮತ್ತೊಮ್ಮೆ ಬಲಿಷ್ಠವಾಗಿ ಕಣಕ್ಕಿಳಿಯುವ ಬಗ್ಗೆ ಭರವಸೆ ನೀಡಿದ್ದಾರೆ.

RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಲಕ್ನೋ

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಲಕ್ನೋ

ಈ ಬಾರಿಯ ಐಪಿಎಲ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಒಂದು. ಲೀಗ್ ಹಂತದುದ್ದಕ್ಕೂ ಅದ್ಭುತ ಪ್ರದರ್ಶಣ ನೀಡಿದ್ದ ಲಕ್ನೋ ಸೂಒರ್ ಜೈಂಟ್ಸ್ ತಂಡ ಎರಡನೇ ತಂಡವಾಗಿ ಫ್ಲೇಆಫ್‌ಗೆ ಸೇರ್ಪಡೆಯಾಗಲಿದೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ ನೆಟ್‌ ರನ್‌ರೇಟ್‌ನಲ್ಲಿ ಹಿಂದುಳಿದ ಕಾರಣದಿಂದಾಗಿ ಮೂರನೇ ಸ್ಥಾನಿಯಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಗಂಭೀರ್ ಹೇಳಿದ್ದೇನು?

ರಾಯಲ್ ಚಾಲೆಂಜರ್ಸ್ ವಿರುದ್ಧ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದ ಬಳಿಕ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಇಂದು ಅದೃಷ್ಟ ನಮ್ಮೊಂದಿಗೆ ಇರಲಿಲ್ಲ. ಆದರೆ ಹೊಸ ತಂಡವಾಗಿ ನಮಗೆ ಇದು ಅದ್ಭುತವಾದ ಟೂರ್ನಮೆಂಟ್ ಆಗಿತ್ತು. ನಾವು ಮತ್ತೊಮ್ಮೆ ಟೂರ್ನಿಗೆ ಮರಳುವಾಗ ಖಂಡಿತಾ ಬಲಿಷ್ಠವಾಗಿ ಹಿಂದಿರುತ್ತೇವೆ" ಎಂದಿದ್ದಾರೆ ಗೌತಮ್ ಗಂಭೀರ್.

ಲಕ್ನೋ ತಂಡಕ್ಕೆ ಗಂಭೀರ್ ಬಲ

ಲಕ್ನೋ ತಂಡಕ್ಕೆ ಗಂಭೀರ್ ಬಲ

ಇನ್ನು ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸಿರುವ ಗೌತಮ್ ಗಂಭೀರ್ ಹೆಡ್ ಕೋಚ್ ಆಂಡಿ ಫ್ಲವರ್, ನಾಯಕ ಕೆಎಲ್ ರಾಹುಲ್ ಅವರೊಂದಿಗೆ ತಂಡಕ್ಕೆ ಆಧಾರ ಸ್ಥಂಭವಾಗಿದ್ದರು. ಹರಾಜಿನಲ್ಲಿ ಆಟಗಾರರ ಆಯ್ಕೆಯಿಂದ ಹಿಡಿದು ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಗಂಭೀರ್.

ಸೋತ ಬಳಿಕ ನಾಯಕನೊಂದಿಗೆ ಗಂಭೀರ ಚರ್ಚೆ

ಇನ್ನು ಬುಧವಾರ ನಡೆದ ಪ್ಲೇಆಫ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಗೌತನ್ ಗಂಭೀರ್ ಸಾಕಷ್ಟು ಅಸಮಾಧಾನಗೊಂಡಿದ್ದು ಕಂಡುಬಂದಿತ್ತು. ಬುಧವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 208 ರನ್‌ಗಳನ್ನು ಬೆನ್ನಟ್ಟುವಲ್ಲಿ ವಿಫಲವಾದ ಬಳಿಕ ಗೌತಮ್ ಗಂಭೀರ್ ನಾಯಕ ಕೆಎಲ್ ರಾಹುಲ್ ಜೊತೆಗೆ ಗಂಭೀರ ಮಾತುಕತೆಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ 58 ಎಸೆತಗಳಲ್ಲಿ 79 ರನ್‌ಗಳಿಸುವ ಮೂಲಕ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು. ಆದರೆ ತಂಡವನನ್ಉ ಗೆಲುವಿನ ದಡ ತಲುಪಿಸುವಲ್ಲಿ ಅವರು ವಿಫಲವಾದರು.

Story first published: Thursday, May 26, 2022, 15:38 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X